ಶಹಾಪುರ : ಕಳೆದ ಒಂದು ವಾರದಿಂದ ಧಾರಕಾರವಾಗಿ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಜಮೀನಿನಲ್ಲಿ ರೈತ ಬೆಳೆದಿರುವ ಬೆಳೆ ಸಂಪೂರ್ಣವಾಗಿ ನೆಲಕಚ್ಚಿ ಅಪಾರಪ್ರಮಾಣದ ನಷ್ಟ ಸಂಭವಿಸಿರುವುದರಿಂದ ರೈತನ ಬದುಕು ಕಷ್ಟಕರವಾಗಿದೆ.
ತಾಲ್ಲೂಕಿನ ಮುನಮುಟಗಿ ಸೇರಿದಂತೆ ಹಾಗೂ ಇನ್ನಿತರ ಗ್ರಾಮಗಳಲ್ಲಿ ಬೆಳೆ ನೀರು ಪಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ರೈತನ ಬದುಕು ಬರಿದಾಗಿದೆ.ಇಷ್ಟಾದರೂ ಯಾವೊಬ್ಬ ರೈತನಾಗಲಿ ಅಧಿಕಾರಿಯಾಗಲೀ ಇತ್ತ ತಲೆ ಹಾಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಶರಣುರಡ್ಡಿ ಹತ್ತಿಗೂಡೂರ ಆರೋಪಿಸಿದ್ದಾರೆ.
ಕರೋನಾ ಮಹಾಮಾರಿ ರೋಗದಿಂದ ಇಡೀ ಜಗತ್ತೇ ತತ್ತರಿಸಿ ಹೋಗಿರುವಾಗ ರೈತ ಸಾಲ ಸೂಲ ಮಾಡಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವಾಗಲೇ ಇಂಥ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಪರಿಸ್ಥಿತಿ ಬಂದೊದಗಿದೆ.ನಷ್ಟವಾಗಿರುವ ರೈತನ ಬೆಳೆಗೆ ಜಿಲ್ಲಾಡಳಿತ ತಕ್ಷಣ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಂಡರು