ಬಿಸಿ ಬಿಸಿ ಸುದ್ದಿ

ಬಳ್ಳಾರಿ: ಅತಿವೃಷ್ಠಿಯ ನಂತರದ ಪರಿಸ್ಥಿತಿಯಲ್ಲಿ ಬೆಳೆಗಳ ನಿರ್ವಹಣೆಗೆ ಕ್ರಮ: ಮುದಗಲ್

ಬಳ್ಳಾರಿ: ಜಿಲ್ಲೆಯಲ್ಲಿ ಇತ್ತೀಚಿಗೆ ನಿರಂತರವಾಗಿ ಹಾಗೂ ಅಧಿಕವಾಗಿ ಸುರಿದ ಮಳೆಯಿಂದ ನೇರವಾಗಿ ಬೆಳೆಹಾನಿ ಸಂಭವಿಸಿರುವುದಲ್ಲದೇ ನಂತರದ ದಿನಗಳಲ್ಲಿ ಪರೋಕ್ಷವಾದ ಸಮಸ್ಯೆಗಳು ತಲೆದೊರುತ್ತಿರುವುದನ್ನು ಮನಗಾಣಲಾಗಿದೆ. ಹೊಲಗಳಲ್ಲಿ ಮಳೆಯ ನೀರು ಹೊರಟುಹೋದಮೇಲೆ ಕೇವಲ ಕೆಲವೇ ದಿನಗಳಲ್ಲಿ ಭತ್ತ ಮತ್ತು ಇತರೆ ಅನೇಕ ಬೆಳೆಗಳು ಬಾಡಿದಂತೆ ಹಾಗೂ ಬಣ್ಣಗೆಟ್ಟು ಒಣಗಿ ನಿಂತಂತಹ ಅತಿವೃಷ್ಠಿಯ ನಂತರದ ಪರಿಸ್ಥಿತಿ ಬೆಳೆಗಳ ನಿರ್ವಹಣೆಗೆ ರೈತರು ಕೆಲ ಪ್ರಮುಖ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅವಿರತವಾಗಿ ದಿನಗಟ್ಟಲೆ ಮಳೆ ಸುರಿದಿರುವುದರಿಂದ ಹಾಗೂ ಹೊಲದಲ್ಲಿ ನೀರು ನಿರಂತರವಾಗಿ ನಿಂತಿರುವುದರಿಂದ ಮಣ್ಣು ದಮ್ಮಸ್ಸು ಮಾಡಿದಂತಾಗಿ ಮಣ್ಣಿನ ರಚನೆ ಹಾಳಾಗಿರುತ್ತದೆ. ಮಣ್ಣಿನಲ್ಲಿ ಗಾಳಿ ಸೇರದೆ, ಬೆಳೆಗಳ ಬೇರುಗಳಿಗೆ ದೊರಕಬೇಕಾದ ಆಮ್ಲಜನಕ ದೊರೆಯದೇ ಉಸಿರುಗಟ್ಟಿದಂತಹ ಪರಿಣಾಮ ಉಂಟಾಗುತ್ತದೆ.

ಮೇಲ್ಮಣ್ಣಿನಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ಕರಗಿ ಹರಿಯುವ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುವುದರಿಂದ ಪೋಷಕಾಂಶಗಳ ತೀವ್ರ ಕೊರತೆಯಿಂದ ಬೆಳೆಗಳು ಬಳಲಿರುತ್ತವೆ. ಜೊತೆಗೆ ಮಣ್ಣನ್ನು ಚೇತನಾಶೀಲವಾಗಿರುವಂತೆ ಮಾಡುವ ಹಾಗೂ ಬೆಳೆಗಳಿಗೆ ಪೋಷಕಾಂಶಗಳನ್ನು ದೊರೆಯುವಂತೆ ಮಾಡುವ ಅನೇಕ ಉಪಯೋಗಿ ಸೂಕ್ಷ್ಮಜೀವಿಗಳು ನಷ್ಟವಾಗಿ, ಮಣ್ಣು ಕೆಲ ಮಟ್ಟಿಗೆ ಬರಡಾದಂತಾಗುತ್ತದೆ.

ಈ ಪರಿಸ್ಥಿತಿಯನ್ನು ನಿಭಾಯಿಸಲು ರೈತರು; ಸಾಲುಬೆಳೆಗಳಲ್ಲಿ ಎಡೆಕುಂಟೆ ಹಾಯಿಸಿ ಅಥವಾ ಕೈಯಿಂದ ಕಳೆ ತೆಗೆದು, ಬೆಳೆಯ ಬೇರುಗಳಿರುವ ಮಣ್ಣಿನ ವಲಯದಲ್ಲಿ ಗಾಳಿಯಾಡುವಂತೆ ಮಾಡಬೇಕು. ಯೂರಿಯಾದಂತಹ ಸಾರಜನಕಯುಕ್ತ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಿ, ತೆÀಳ್ಳಗೆ ನೀರುಹಾಯಿಸಬೇಕು. ದ್ರವರೂಪದಲ್ಲಿರುವ 19:19:19 ಅಥವಾ ಇತರ ದ್ರವರೂಪದ ರಸಗೊಬ್ಬರಗಳನ್ನು ಅಥವಾ ಶೇ.2 ರಷ್ಟು ಯೂರಿಯಾ ಅಥವಾ ಡಿ.ಎ.ಪಿ. ರಸಗೊಬ್ಬರವನ್ನು ಬೆಳೆಯ ಹಂತವನ್ನು ಅನುಸರಿಸಿ ಸಿಂಪರಣೆ ಮಾಡುವುದರಿಂದ ಶೀಘ್ರ ಸುಧಾರಣೆ ಕಾಣಬಹುದು. ಲಘುಪೋಷಕಾಂಶಗಳ ಮಿಶ್ರಣಗಳನ್ನು ಸಿಂಪಡಿಸಬೇಕು.

ಮಳೆ ಸತತವಾಗಿ ಬರುತ್ತಿರುವುದರಿಂದ ಭತ್ತದ ಬೆಳೆಗೆ ಕಾಡಿಗೆ ರೋಗ (ಈಚಿಟse smuಣ) ಬರುವ ಸಾಧ್ಯತೆ ಇದ್ದು, ಭತ್ತದ ಬೆಳೆ ಪೂರ್ವ ಹೂಬಿಡುವ ಹಂತದಲ್ಲಿದ್ದರೆ ಪ್ರತಿ ಲೀಟರ್ ನೀರಿಗೆ 0.4 ಗ್ರಾಂ ದರದಲ್ಲಿ ಟ್ರಿಫ್ಲಾಕ್ಸಿಸ್ಟ್ರೋಬಿನ್ + ಟೆಬುಕೋನೋಜೋಲ್ ನೊಂದಿಗೆ ಮುನ್ನೆಚ್ಚರಿಕೆ ಶೀಲೀಂದ್ರನಾಶಕ ಸಿಂಪಡಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಕಲಬುರಗಿ: ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ…

9 seconds ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

5 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

9 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

10 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

32 mins ago

ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನ: ರಕ್ತದಾನಶಿಬಿರ

ಕಲಬುರಗಿ: ನ.25 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಮಲಾಪುರ ಮತ್ತು ಕಲಬುರಗಿ ವತಿಯಿಂದ ಧರ್ಮಾಧಿಕಾರಿ ಡಾ.…

36 mins ago