ಕೆ.ಎಚ್.ಬಿ. ಬಡಾವಣೆಯ ಅಭಿವೃದ್ಧಿಗೆ ಬದ್ಧ: ಧರ್ಮರಾಜ ಒಡೆಯರ

ಕಲಬುರಗಿ: ಕೆ.ಎಚ್.ಬಿ. ಗ್ರೀನ್ ಪಾರ್ಕ್ ಬಡಾವಣೆಯ ಎಲ್ಲಾ ಕ್ರೀಯಾಶೀಲ ಯುವಕರು ಸಕ್ರೀಯವಾಗಿ ಸಮಾಜಸೇವೆಯಲ್ಲಿ ಭಾಗವಹಿಸಿ ಕಾಲೋನಿಯನ್ನು ಸಮೃದ್ದಿಗೋಳಿಸಲು ಬದ್ಧರಾಗೋಣ ಎಂದು ವಿದ್ಯುತ ಗುತ್ತಿಗೆದಾರರು ಹಾಗೂ ಅಖಿಲ ಭಾರತ ಹಿಂದೂ ಮಹಾ ಸಭಾ ಜಿಲ್ಲಾದ್ಯಕ್ಷ ಧರ್ಮರಾಜ ಒಡೆಯರ ಅವರು ಹೇಳಿದರು.

ನಗರದ ಕೋರ್ಟ್ ರಸ್ತೆಯಲ್ಲಿರುವ ಒಡೆಯರ ಎಲೆಕ್ಟ್ರಿಕಲ್ಸ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನೂತನ ಅದ್ಯಕ್ಷ ಸಂಜೀವಕುಮಾರ ಶೆಟ್ಟಿ ಅವರು ಮಾತನಾಡಿ, ಹಂತ ಹಂತವಾಗಿ ಬಡಾವಣೆಯ ಅಭಿವೃದ್ಧಿ ಮತ್ತು ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿ ಆದಷ್ಟು ಬೇಗನೆ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗೌರವಾದ್ಯಕ್ಷ ನಾಗೆಂದ್ರಪ್ಪ ಆರ್. ದಂಡೋತಿಕರ, ಉಪಾದ್ಯಕ್ಷ ಬಾಲಕೃಷ್ಣ ಕೆ.ಕುಲಕರ್ಣಿ, ಕಾರ್ಯದರ್ಶಿ ರಾಜೇಶ ಕೆ. ನಾಗಬುಜಂಗೆ, ಸಹ-ಕಾರ್ಯದರ್ಶಿ ಶ್ರೀನಿವಾಸ ಎಮ್.ಬುಜ್ಜಿ, ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಪಿ.ತಳವಾರ, ಮಂಜುನಾಥ ಎಸ್.ಬೆಳಮಗಿ, ಶರಣಬಸಪ್ಪ ದೇಶಟ್ಟಿ , ಗೌರವ ಸಲಹೆಗಾರ ಸಂಗಮೇಶ ಸರಡಗಿ, ಕೆ.ಎಮ್.ಲೋಕಯ್ಯ , ರಮೇಶ ಕೋರಿಶೆಟ್ಟಿ, ಶಿವರಾಯಗೌಡ ಮುದ್ದಡಗಾ, ಕಾನೂನು ಸಲಹೆಗಾರ ಹಣಮಂತ್ರಾಯ ಎಸ್. ಅಟ್ಟೂರ ನ್ಯಾಯವಾದಿಗಳು ಮಾಧ್ಯಮ ಪ್ರತಿನಿದಿ ಬಸವರಾಜ ಹೆಳವರ ಯಾಳಗಿ ಹಾಗೂ ರಮೇಶ ಕಟ್ಕೆ, ಶಿವಾನಂದ, ಮಲ್ಲಿನಾಥ, ಅಮರೇಶ ಒಡೆಯರ, ರಮೇಶ ಬಸ್ಕಾವರೆ, ನಾಗರಾಜ ಮಡ್ಕೆನೋರ, ಶಿವಾನಂದ ಹುಲಜಂತಿ, ಮಂಜು ಜಮಾದಾರ ಕಲಹಂಗರಗಾ, ವಿಜಯಕುಮಾರ ಕಲಶೆಟ್ಟಿ, ಪವನ ಸಾವಳಗಿ, ಇನ್ನಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶಿವಕಾಂತ ಚಿಮ್ಮಾ ಸ್ವಾಗತಿಸಿದರು, ವಿರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿದರು, ಅಮರೇಶ ಒಡೆಯರ ವಂದಿಸಿದರು.

sajidpress

Recent Posts

ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ…

46 mins ago

ಕೋಲಿ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದರಿಂದ ನೂತನ ಪದಾಧಿಕಾರಿಗಳ ಆಯ್ಕೆಗೆ…

3 hours ago

ನೂತನ ಪದಾಧಿಕಾರಿಗಳ ಪದಗೃಹಣ, ಅಭಿನಂದನಾ ಸಮಾರಂಭ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…

4 hours ago

ಕೆಬಿಎನ ಆಸ್ಪತ್ರೆಯಲ್ಲಿ ಉಚಿತ ಇಸಿಜಿ ತಪಾಸಣೆ

ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…

5 hours ago

ವಿದ್ಯಾರ್ಥಿಗಳ ಕೌಶಲ್ಯ ಉತ್ತೇಜನ ಕಾರ್ಯಕ್ರಮ (Technical event)

ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…

5 hours ago

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

19 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420