ಗ್ರಾಮ ಪಂಚಾಯತಿಗಳಲ್ಲಿ ಪ್ರಮಾಣ ಪತ್ರಗಳ ನೀಡಲು ಗಾಂಧಿವಾದಿ ಆಗ್ರಹ

0
32

ಸುರಪುರ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಾತಿ ಪ್ರಮಾಣ ಪತ್ರ, ಪಹಣಿ ಮತ್ತು ಆಧಾರ ಕಾರ್ಡು ವಿತರಣೆಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಗಾಂಧಿವಾದಿ ಜನಪರ ಚಳುವಳಿ ಸಮಿತಿಯ ಅಧ್ಯಕ್ಷ ಹೈಯಾಳಪ್ಪ ಸಾಧು ಆಗ್ರಹಿಸಿದ್ದಾರೆ.

ಗ್ರಾಮೀಣ ಪ್ರದೇಶದ ಜನರು ಕೃಷಿ ಕೂಲಿ ಕಾರ್ಮಿಕರು ಮತ್ತು ರೈತರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಜಾತಿ ಪ್ರಮಾಣ ಪತ್ರ ಆಧಾರ ಕಾರ್ಡು ಮತ್ತು ಪಹಣಿ ದಾಖಲೆಗಳನ್ನು ಪಡೆದುಕೊಳ್ಳಲು ತಹಶೀಲ್ದಾರ ಕಚೇರಿಗೆ ಅಲೆಯುತ್ತಿದ್ದು, ತಹಶೀಲ್ದಾರ ಕಚೇರಿಯಲ್ಲಿ ಈ ದಾಖಲೆಗಳನ್ನು ಪಡೆಯಲು ಇಡೀ ದಿನಾ ಕಾಯುವಂತಹ ಪರಿಸ್ಥಿತಿ ಇದೆ ನೆಟ್ ಹೋಗಿದೆ ನಾಳೆ ಬನ್ನಿ ಹೀಗೆ ಹತ್ತು ಹಲವು ನೆಪಗಳನ್ನು ಹೇಳುತ್ತಾ ಕಚೇರಿಗೆ ಬರುವ ಜನರನ್ನು ಕಚೇರಿಯ ಸಿಬ್ಬಂದಿಗಳು ಅಲೆದಾಡಿಸುತ್ತಿದ್ದು ಕಚೇರಿಯಲ್ಲಿ ಬ್ರೋಕರ್‌ಗಳು ತುಂಬಿ ಹೋಗಿದ್ದು ದಾಖಲೆಗಳನ್ನು ಪಡೆಯಲು ಬರುವ ಜನರ ಜೊತೆ ಅಸಭ್ಯವಾಗಿ ವರ್ತಿಸುವದಲ್ಲದೆ ಕೆಲವೊಮ್ಮೆ ಬೆದರಿಕೆ ಹಾಕುತ್ತಾರೆ.

Contact Your\'s Advertisement; 9902492681

ಅನೇಕ ಸಲ ಬಡವರಿಗೆ ಗೂಂಡಾಗಳಿಂದ ಹೊಡೆಸಿದ್ದಾರೆ ಅವರು ದೂರಿದ್ದಾರೆ, ಈ ಬಗ್ಗೆ ತಹಶೀಲ್ದಾರ ಗಮನಕ್ಕೆ ತರಲು ಹೋದಾಗ ಅವರು ಕೂಡಾ ಸಾರ್ವಜನಿಕರ ಸಮಸ್ಯೆಗಳನ್ನು ಶಾಂತಚಿತ್ತದಿಂದ ಆಲಿಸದೇ ಬೈಯ್ದು ಕಳುಹಿಸುತ್ತಾರೆ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಪರಿಸ್ಥಿತಿ ಹದಗೆಟ್ಟು ಹೋಗಿದ್ದು ಬಡವರ ಕೂಗು ಯಾರಿಗೂ ಕೇಳಿಸುತ್ತಿಲ್ಲ ಕೂಡಲೇ ಈ ಪರಿಸ್ಥಿತಿಯನ್ನು ಹೋಗಲಾಡಿಸಲು ಹಾಗೂ ತಹಶೀಲ್ದಾರ ಕಚೇರಿಗೆ ಅಲೆದಾಡುವದನ್ನು ತಪ್ಪಿಸಲು ಗ್ರಾಮೀಣ ಪ್ರದೇಶದ ಜನರ ಹಿತದೃಷ್ಟಿಯಿಂದ ಆಯಾ ಗ್ರಾಮ ಪಂಚಾಯತಿಗಳಲ್ಲಿ ಜಾತಿ ಪ್ರಮಾಣ ಪತ್ರ, ಪಹಣಿ ಮತ್ತು ಆಧಾರ ಕಾರ್ಡು ದಾಖಲೆಗಳನ್ನು ವಿತರಿಸಲು ವ್ಯವಸ್ಥೆ ಕೈಗೊಳ್ಳಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮನವಿಗೆ ಸ್ಪಂದಿಸದಿದ್ದಲ್ಲಿ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here