ವಕೀಲ ವೃತ್ತಿ ಸರ್ವಶ್ರೇಷ್ಠವಾಗಿದ್ದು: ಶಾಸಕ ಬಸವರಾಜ ಮತ್ತಿಮೂಡ

0
101

ಕಲಬುರಗಿ: ಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿ ಸಮಾಜದಲ್ಲಿ ವಕೀಲ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಬಸವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡ ಕಲಬುರಗಿ ಜಿಲ್ಲಾ ಗ್ರಾಹಕರ ಆಯೋಗದ ನೂತನ ಸದಸ್ಯೆ-ಹಿರಿಯ ನ್ಯಾಯವಾದಿ ಮಾಲತಿ ಸುಭಾಷ ರೇಷ್ಮೀ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾನೂನು ರಕ್ಷಣೆಯ ಜವಾಬ್ದಾರಿ ವಕೀಲರ ಮೇಲಿದೆ. ಇತರ ವೃತ್ತಿಗಳಿಗಿಂತ ವಕೀಲ ವೃತ್ತಿ ಭಿನ್ನವಾಗಿದದ್ದು ಎಂದು ಹೇಳಿದರು.

Contact Your\'s Advertisement; 9902492681

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಕೀಲರೆಂದರೆ ಕೇವಲ ಹಣ ಮಾಡುವ ವೃತ್ತಿಯಲ್ಲ. ಬದಲಾಗಿ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸೇವೆ ಮಾಡುವ ವೃತ್ತಿ ಎಂದು ಭಾವಿಸಿ ನ್ಯಾಯವಾದಿ ಮಾಲತಿ ರೇಷ್ಮಿಯವರು ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಗ್ರಾಹಕರ ಆಯೋಗದ ಸದಸ್ಯೆ-ನ್ಯಾಯವಾದಿ ಮಾಲತಿ ಸುಭಾಷ ರೇಷ್ಮಿ, ಮನುಷ್ಯನಾಗಿ ಹುಟ್ಟಿದ ಮೇಲೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಜೀವನವೇ ನಿಜವಾದ ಧರ್ಮವಾಗಿದೆ. ನಾನು ಸಮಾಜದಲ್ಲಿ ಸಲ್ಲಿಸುತ್ತಿರುವ ಸೇವೆಗೆ ಗುರುತಿಸಿ ಮಾಡುತ್ತಿರುವ ಅಕಾಡೆಮಿಯ ಸನ್ಮಾನ ನನ್ನ ಜವಾಬ್ದಾರಿ ಎನ್ನಷ್ಟು ಇಮ್ಮಡಿಗೊಳಿಸಿದಂತಾಗಿದೆ ಎಂದರು.

ಸೊನ್ನ ದಾಸೋಹ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿ ಶಿವಕುಮಾರ ಮಾಲಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುವರ್ಣಾ ಹಣಮಂತರಾವ ಮಲಾಜಿ, ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಕಾಂಗ್ರೇಸ್ ಧುರೀಣ ರಾಜಶೇಖರ ಸೀರಿ, ರಾಷ್ಟ್ರೀ ಬಸವ ದಳದ ಅಧ್ಯಕ್ಷ ಆರ್.ಜಿ.ಶಟಗಾರ, ಮಹಾದೇವಿ ಹೆಚ್.ಪಾಟೀಲ, ಅಕಾಡೆಮಿಯ ಎಸ್.ಎಂ.ಪಟ್ಟಣಕರ್, ಶಿವರಾಜ್ ಎಸ್.ಅಂಡಗಿ, ಪರಮೇಶ್ವರ ಶಟಕಾರ, ಡಾ.ಕೆ.ಗಿರಿಮಲ್ಲ, ವಿನೋದ ಜೇನವೇರಿ, ವಿದ್ಯಾಸಾಗರ ದೇಶಮುಖ, ಹಣಮಂತರಾಯ ಅಟ್ಟೂರ, ಬಿ.ಎಂ.ಪಾಟೀಲ ಕಲ್ಲೂರ, ಪ್ರಭವ ಪಟ್ಟಣಕರ್, ಪ್ರಭುದೇವ ಯಳವಂತಗಿ, ಪ್ರಸನ್ನ ವಾಂಜರಖೇಡೆ, ಎಂ.ಬಿ.ನಿಂಗಪ್ಪ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಶಿವಶರಣ ಕುಸನೂರ ಸೇರಿದಂತೆ ನ್ಯಾಯವಾದಿಗಳು, ಸಾಹಿತಿಗಳು ಭಾಗವಹಿಸಿದ್ದರು.

‘ವೈದ್ಯರು ವ್ಯಕ್ತಿಯ ಜೀವ ಉಳಿಸಿದರೆ, ವಕೀಲರು ವ್ಯಕ್ತಿಗೆ ಅಡೆತಡೆಯಾಗಬಹುದಾಗಿದ್ದ ಇತರೆ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಕಕ್ಷಿದಾರರ ಜೀವನ ಸುಗಮವಾಗಿ ಸಂತಸದಿಂದಿರಲು ಉತ್ತಮ ಜೀವನ ಕಟ್ಟಿ ಕೊಡುತ್ತಾರೆ. ಹೀಗಾಗಿ ವಕೀಲ ವೃತ್ತಿ ಸರ್ವಶ್ರೇಷ್ಠವಾಗಿದ್ದು.’- ಕಲ್ಯಾಣಕುಮಾರ ಶೀಲವಂತ, ಶಿಕ್ಷಣ ತಜ್ಞ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here