ಕಲಬುರಗಿ: ಶಹಾಬಾದ ನಗರದ ಹಳೆಶಹಾಬಾದನ ವಿಶ್ವರಾಧ್ಯ ಮಂದಿರದ ಹತ್ತಿರದ ಅಜನಿ ಹಳ್ಳ ನೋಡಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹಳೆ ಶಹಾಬಾದನ ವಿಶ್ವನಾಥ ತಂದೆ ರಾಜು (15) ಮತ್ತು ತೇಜಸ್ವಿ ಪೂರ್ಣಚಂದ್ರ ತಂದೆ ಆನಂದ (15) ಮೃತಪಟ್ಟ ದುರ್ದೈವಿಗಳು.
ನಗರದ ಅಜನಿ ಹಳ್ಳ ನೋಡಲು ರವಿವಾರ ವಿಶ್ವನಾಥ ಮತ್ತು ತೇಜಸ್ವಿ ಪೂರ್ಣಚಂದ್ರ ಇವರಿಬ್ಬರು ಹೋದ ಸಂದರ್ಭದಲ್ಲಿ ಕಾಲು ಜಾರಿ ಇಬ್ಬರು ಮುಳುಗಿ ಸಾವನಪ್ಪಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮೃತ ಶರೀರವನ್ನು ಹೊರಕ್ಕೆ ತೆಗೆದಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.