ಶಹಾಬಾದ: ನಗರದಲ್ಲಿ ಮಾಸ್ಕ ಧರಿಸದೇ ಬೇಕಾಬಿಟ್ಟಿ ಓಡಾಡುವ ವಿರುದ್ಧ ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ದಂಡ ವಿಧಿಸುವ ಮೂಲಕ ಮಾಸ್ಕ ಧರಿಸದವರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಕೊರೊನಾ ಹರಡುತ್ತಿರುವುದರಿಂದ ಅದನ್ನು ತಡೆಗಟ್ಟಲು ಸಾಕಷ್ಟು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರೂ ಕೆಲವು ಜನರು ಮಾಸ್ಕ ಧರಿಸದೇ ಅನಾವಶ್ಯಕವಾಗಿ ರಸ್ತೆಗೆ ಇಳಿಯುತ್ತಿದ್ದನ್ನು ಗಮನಿಸಿ ಅವರಿಗೆ ದಂಡ ವಿಧಿಸಿದ್ದಾರೆ.ಅಲ್ಲದೇ ಮಾಸ್ಕ ಧರಿಸದಿರುವ ಅಂಗಡಿ ಮುಂಗಟ್ಟುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ದಂಡ ಹಾಕಿದ್ದಾರೆ. ಇಡೀ ದಿನ ನಗರದಲ್ಲಿ ಸಂಚಾರ ಮಾಡಿ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು.ಅಲ್ಲದೇ ಸ್ಯಾನಿಟೈಜರ್ ಬಳಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಜರ್, ಸೊಂಕಿತ ವ್ಯಕ್ತಿಯ ಪ್ರದೇಶಗಳಲ್ಲಿ ಸ್ವಚ್ಛತೆ ಆದ್ಯತೆ ನೀಡಿದ್ದಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆಯ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಜತೆಗೆ ನಗರದಲ್ಲಿ ಸಂಚರಿಸಿ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ಮಾಸ್ಕ ಮನೆಯಲ್ಲಿ ಬಿಟ್ಟು ಬಂದಿದ್ದೆನೆ, ತೆಗೆದುಕೊಂಡು ಬರುತ್ತೆನೆ, ಒಂದು ಬಾರಿ ರಿಯಾಯಿತಿ ನೀಡಿ ಎಂದು ಸಬೂಬು ಹೇಳದಿರಿ.ಒಂದು ವೇಳೆ ಮಾಸ್ಕ ಧರಿಸದೇ ಅನಾವಶ್ಯಕವಾಗಿ ರಸ್ತೆಗೆ ಬಂದರೆ ಹಾಗೂ ಅಂಗಡಿಯ ಮಾಲೀಕರು ಮಾಸ್ಕ ಧರಿಸದಿರುವುದು ಹಾಗೂ ಸ್ಯಾನಿಟೈಜರ್ ಇಲ್ಲದಿರುವುದು ಕಂಡರೇ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತೆವೆ ಎಂದರು.
ಉಪತಹಸೀಲ್ದಾರ ಮಲ್ಲಿಕಾರ್ಜುನ ರೆಡ್ಡಿ, ನಗರಸಭೆಯ ಕಂದಾಯ ಅಧಿಕಾರಿ ಸುನೀಲಕುಮಾರ, ವ್ಯವಸ್ಥಾಪಕ ಶಂಕರ, ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ, ರಾಜೇಶ, ಶರಣು ಸಾಯಿಬಣ್ಣ ಸುಂಗಲಕರ್,ಉಣೇಶ, ಅನೀಲ ಇತರರು ಇದ್ದರು.