ಬಿಸಿ ಬಿಸಿ ಸುದ್ದಿ

ಯಾರೇ ಉತ್ತಮ ಕೆಲಸ ಮಾಡಿದರೂ ಗುರುತಿಸುವ ಕೆಲಸವಾಗಲಿ: ಡಾ. ಶಿವರಾಮ ಅಸುಂಡಿ

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್, ಜ್ಯೂತಿಭಾ ಫುಲೆ, ಸಾವಿತ್ರಿಬಾಯಿ ಫುಲೆ, ಪೆರಿಯಾರ್ ಮೊದಲಾದ ಮಹಾಪುರು?ರು ಬೇರೆ ಬೇರೆ ಕಾಲಘಟ್ಟದಲ್ಲಿ ಹುಟ್ಟಿದ್ದರೂ ಅವರ ವಿಚಾರಗಳು ಒಂದೇ ಆಗಿದ್ದವು ಎಂದು ಹಿರಿಯ ಪತ್ರಕರ್ತ ಡಾ. ಶಿವರಾಮ ಅಸುಂಡಿ ಅಭಿಪ್ರಾಯಪಟ್ಟರು.

ನಗರದ ಕಲಾಮಂಡಳದಲ್ಲಿ ಮಹಾಪುರುಷರ ವಿಚಾರ ವೇದಿಕೆ ಹಮ್ಮಿಕೊಂಡಿದ್ದ ರಾಷ್ಟ್ರ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿಚಾರಗಳು ಸಮಾಜಮುಖಿಯಾಗಿದ್ದರಿಂದಲೇ ಮಹಾನ್ ಪುರು?ರಾಗಿ ಈಗಲೂ ಜೀವಂತವಾಗಿದ್ದಾರೆ. ಅವರ ಹೆಸರಲ್ಲಿ ವೇದಿಕೆ ತಂದು ರಾ?, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುತ್ತಿರೋದು ಸ್ವಾಗತಾರ್ಹ. ಯಾರೇ ಉತ್ತಮ ಕೆಲಸ ಮಾಡಿದಲ್ಲಿ ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೀಬೇಕು ಎಂದರು.

ಹಿರಿಯ ಸಾಹಿತಿ ಕೆ.ಎಸ್.ಬಂಧು, ಡಾ.ಹನುಮಂತರಾವ್ ದೊಡ್ಮನಿ ಮಾತನಾಡಿ, ಮಹಾನ್ ಪುರು?ರ ಹೆಸರಲ್ಲಿ ಇಂತಹ ಕಾರ್ಯಕ್ರಮಗಳು ನಡೆಸುತ್ತಿರೋದು ಸ್ತುತ್ಯಾರ್ಹ. ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಕೇವಲ ಶಿಕ್ಷಕರ ಹುದ್ದೆಗೆ ಸೀಮಿತವಾಗಿಲ್ಲ. ಅದರ ಹಿರತಾಗಿ ಸಾಹಿತ್ಯಿಕ, ಸಾಂಸ್ಕ್ರತಿಕ ಸಂಗತಿಗಳ ಮೇಲೂ ಬೆಳಕು ಚೆಲ್ಲಿ ಮಕ್ಕಳ ಭವಿ? ರೂಪಿಸಲು ಶ್ರಮಿಸುತ್ತಿದ್ದಾರೆ ಎಂದರು.

ವಿಶೇ? ಉಪನ್ಯಾಸ ನೀಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್ ಲಂಡನಕರ್ ಅವರು, ಶಿಕ್ಷಕರೂ ಕೊರೋನಾ ವಾರಿಯರ್ಸ್. ಆದರೆ ಶಿಕ್ಷಕರನ್ನು ಗುರುತಿಸೋದು ಕಡಿಮೆ. ಅವರನ್ನು ತುಚ್ಚವಾಗಿ ನೋಡಲಾಗ್ತಿದೆ, ಕಡೆಗಣಿಸಲಾಗ್ತಿದೆ. ಆದ್ರೆ ಡಾಕ್ಟರ್, ಎಂಜಿನಿಯರ್, ವಿಜ್ಞಾನಿ ಎಲ್ಲರನ್ನೂ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಅನ್ನೋದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗುರು ಬ್ರಹ್ಮ, ಗುರು ವಿ?, ಗುರು ಸಾಕ್ಷಾತ್ ಪರಬ್ರಹ್ಮ ಎನ್ನೋ ಭಾರತದಲ್ಲಿ ಶಿಕ್ಷಕರನ್ನು ಕಡೆಗಣಿಸುವ ವ್ಯವಸ್ಥೆ ಇಲ್ಲಿದೆ ಎಂದರು.

ಭಾರತದಲ್ಲಿ ವೈಜ್ಞಾನಿಕ ಆಂದೋಲನ ಬೆಳೆಯಬೇಕಿದೆ. ವೈಜ್ಞಾನಿಕ ಮೌಲ್ಯಗಳು ಹೆಚ್ಚಬೇಕಿದೆ. ಮಹಾನ್ ಪುರು?ರೆಲ್ಲರೂ ವೈಜ್ಞಾನಿಕ ಮನೋಭಾವ ಹೊಂದಿದವರಾಗಿದ್ರು. ಇಂದು ವಿಜ್ಞಾನ ಎ? ಬೆಳೆದರೂ ಮೌಢ್ಯತೆ, ಜಾತೀಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಂತಾಗಬೇಕೆಂದ ಲಂಡನಕರ್, ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕು. ಅದು ಸಂಪೂರ್ಣವಾಗಿ ಸಾರ್ವತ್ರಿಕಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸನ್ಮಾನಿತರಾದ ರಾ? ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸುರೇಖಾ ಢಾಂಗೆ, ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಪರವೀನ್ ಸುಲ್ತಾನ್, ರೇಣುಕಾ ಡಾಂಗೆ ಮಾತನಾಡಿದರು. ಮಹಾಪುರುಷರ ವಿಚಾರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ನಾವು ಮಾಡಿರುವ ಸಣ್ಣ ಸಾಧನೆಗೆ ವಿಜಯಕುಮಾರ ಜಿಡಗಿ ಅವರು ನಮ್ಮನ್ನು ಸನ್ಮಾನಿಸುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ ವಹಿಸಿದ್ದರು.
ಕಾರ್ಯಕ್ರಮದ ವೇದಿಕೆ ಮೇಲೆ ಪತ್ರಕರ್ತ ಚಂದ್ರಶೇಖರ ಕೌಲಗಾ, ಬಿಜೆಪಿ ಮುಖಂಡ ಮಹಿಬೂಬ ಪಟೇಲ್, ವೆಂಕಟೇಶ ದೊರೆಪಲ್ಲಿ, ಹಣಮಂತ ಇಟಗಿ, ಮರೇಪ್ಪಾ ಕಲಕೇರಿ, ಸಿದ್ದಾರ್ಥ ಚಿಮ್ಮಾಇದ್ಲಾಯಿ ಉಪಸ್ಥಿತರಿದ್ದರು. ಸುರೇಶ ತಳಕೇರಿ ನಿರೂಪಿಸಿದರು. ಮಹಾಪುರುಷರ ವಿಚಾರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ಜಿಡಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ಕೈಲಾಸ ಡೋಣಿ ವಂದಿಸಿದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

4 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

7 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

13 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

13 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

14 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago