ವ್ಯಕ್ತಿಯೊಬ್ಬನ ಪಾದ ತೊಳೆದ ನೀರು ಪಾದೋದಕ ವಾಗಲಾರದು: ಡಾ. ಜಯಶ್ರೀ ದಂಡೆ

0
280

ಕಲಬುರಗಿ: ಬಸವಣ್ಣನವರು ಸಂಘಟಿಸಿದ ಶರಣಗಣ ಸಂಕುಲದಎದುರಲ್ಲಿ ಪಾರಂಪರಿಕವಾಗಿ  ಬಂದಂತಹ ವ್ಯಕ್ತಿಯೋರ್ವನ ಪಾದ ತೊಳೆದ ನೀರು ಪಾದೋದಕ ಎನಿಸುವುದಿಲ್ಲ.   ಬಸವಣ್ಣನವರು ಸಾಮಾನ್ಯಜನರ ಪ್ರತಿಭಟನೆಯನ್ನು ಗಮನಿಸಿ, ಎಲ್ಲ ಶರಣರೊಡನೆ  ಚರ್ಚಿಸಿ,  ಒಬ್ಬೊಬ್ಬರ ವಿಚಾರಗಳನ್ನು ಗಮನಿಸುತ್ತಾರೆ. ಅಕ್ಕಮಹಾದೇವಿಯಕ್ಕಗಳ ಪ್ರಕಾರ ಪ್ರಮಥಗಣ ಆಚರಿಸಿದ, ಸತ್ಯ ಸನ್ಮಾರ್ಗವನ್ನುಅರಿಯದ ಮೂಢಅಧಮರ ಮಾರ್ಗ ಬೇಡಎನ್ನುತ್ತಾರೆ.

ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ. ಧರ್ಮರಾವಅಫಜಲ್‌ಪೂರಕರ ಸ್ಮರಣಾರ್ಥಅರಿವಿನ ಮನೆ ೬೪೨ ನೆಯದತ್ತಿಕಾರ್ಯಕ್ರಮದಲ್ಲಿ ಡಾ. ಜಯಶ್ರೀ ದಂಡೆಯವರು ಪಾದೋದಕತತ್ತ್ವ  ಕುರಿತು ಅನುಭಾವ ನೀಡುತ್ತಿದ್ದರು.

Contact Your\'s Advertisement; 9902492681

ಗುರು-ಲಿಂಗ-ಜಂಗಮಕ್ಕೆಅರ್ಥ, ಪ್ರಾಣ, ಅಭಿವಾನವನ್ನು ಅರ್ಪಿಸಿ, ಪೂಜೆ ಮಾಡಿ, ಪಾದೋದಕ, ಪ್ರಸಾದವನ್ನುತನ್ನ ಸರ್ವಾಂಗದಲ್ಲಿ ನೆಲೆಸಿದ ಇಷ್ಟಲಿಂಗಕ್ಕೆ ಕೊಟ್ಟು ಪಡಯಬೇಕು. ಲಿಂಗ ಸೋಂಕಿನಿಂದ ಬಂದಂತಹಉದಕವನ್ನೇ ಪಾದೋದಕವೆಂದು, ಅದನ್ನೇ ಪರಿಣಾಮೋದಕವೆಂದು ಪರಿಭಾವಿಸಬೇಕೆಂದು ಹೇಳುತ್ತಾರೆ. ಇಷ್ಟಲಿಂಗವೇ ಗುರುವಾಗುತ್ತದೆ. ಲಿಂಗವಾಗುತ್ತದೆ. ಅದುಜಂಗಮವೂಆಗುತ್ತದೆ.ಗುರು-ಲಿಂಗ-ಜಂಗಮದ ಪಾದೋದಕ ಬೇರೆಅಲ್ಲ. ಅದು ಲಿಂಗಕ್ಕೆ ಮಜ್ಜನಗೈದ ಲಿಂಗೋದಕವೇ ಪಾದೋಕವಾಗುತ್ತದೆಎಂದು ಹೇಳಿದರು.

ಶರಣರು ಅಷ್ಟಾವರಣಗಳನ್ನು ನೈತಿಕ ಮೌಲ್ಯರಕ್ಷಣೆಗಾಗಿ ಮತ್ತು ಸತ್ಪಥ, ಸನ್ನಡತೆ ಸದಾಚಾರಕ್ಕಾಗಿ, ಒಟ್ಟು ವ್ಯಕ್ತಿತ್ವದ ವಿಕಾಸಕ್ಕಾಗಿ ಜಾರಿಗೆತಂದಿದ್ದಾರೆ.ಬಸವಾದಿ ಶರಣರ ಪೂರ್ವದಲ್ಲಿ ಶೈವಪರಂಪರೆಯ ಆಚರಣೆಗಳು ಇದ್ದುದನ್ನು ಗಮನಿಸಬಹುದು.ಶರಣರು ಆ ಆಚರಣೆಗಳನ್ನು ತಮ್ಮ ವೈಚಾರಿಕ ನೆಲೆಗಟ್ಟಿನ ಮೇಲೆ ಪರಾಮರ್ಶಿಸಿ, ಅರ್ಥಪೂರ್ಣವಾಗಿಜಾರಿಗೆತಂದರು.

ಶರಣರುತಮ್ಮ ಪೂರ್ವದ ಶೈವಾಚರಣೆಯನ್ನು ಪ್ರಶ್ನಿಸುವ, ವೈಚಾರಿಕೆವಾಗಿಅದರಕುರಿತಾಗಿಚಿಂತನೆಯನ್ನು ಮಾಡುವಂತಹ ಕೆಲಸವನ್ನು ಮಾಡಿದರು.ಅಲ್ಲಿಯಾರೂ ಮೇಲಾಗಿರಲಿಲ್ಲ, ಯಾರೂ ಕೀಳಾಗಿರಲಿಲ್ಲ. ಎಲ್ಲರೂತಮ್ಮತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶವಿತ್ತು. ಲಿಂಗಾಯತಧರ್ಮಕ್ಕೆ ಸ್ವತಂತ್ರವಾದತತ್ತ್ವಜ್ಞಾನದ ಸಿದ್ಧಾಂತವನ್ನು ಕೊಡಲಿಕ್ಕೆ ಪ್ರಯತ್ನ ಮಾಡಿದವರುಚೆನ್ನಬಸವಣ್ಣನವರು. ತಮಗೆ ಬಂದಿರಬಹುದಾದ ತೊಡಕುಗಳು, ಸಮಸ್ಯೆಗಳು, ಸವಾಲುಗಳು ಎದುರಾದಂತಹ ಸಂದರ್ಭದಲ್ಲಿ ಸೋದರ ಮಾವ ಬಸವಣ್ಣನವರೊಂದಿಗೆಆಲೋಚನೆಯನ್ನು ಮಾಡಿ ಅವುಗಳನ್ನು ಬದಲಾಯಿಸಿಕೊಳ್ಳವ ದೊಡ್ಡ ವ್ಯಕ್ತಿತ್ವಅವರದ್ದಾಗಿತ್ತು.

ಶರಣರಿಗೆ ಇಷ್ಟಲಿಂಗ ಪ್ರಧಾನವಾಗಿತ್ತು. ಅಂಗದ ಮೇಲಿರುವ ಇಷ್ಟಲಿಂಗ ಅಂತರಂಗದ ಶುದ್ಧಿಗೆ ಕಾರಣ ವಾದಂಥದ್ದು.ಆ ಲಿಂಗದಉದಕವನ್ನೇ ಪಾದೋಕವೆಂದು ಸ್ವೀಕಾರ ಮಾಡುವ ಪದ್ಧತಿ ಶರಣರಿಂದ ಪ್ರಾರಂಭವಾಯಿತು. ಬಸವಣ್ಣನವರು ಸ್ಥಾಪನೆ ಮಾಡಿದಂತಹಧರ್ಮದಲ್ಲಿಎಲ್ಲರಿಗೂ ಸುಲಭದಲ್ಲಿತತ್ತ್ವಜ್ಞಾನ ಸಿಗಲಿ ಎನ್ನುವಅಭಿಲಾಷೆಅವರದ್ದಾಗಿತ್ತು. ಪಾರಂಪರಿಕವಾಗಿ ನಡೆದು ಬಂದಂತಹಅವೈಜ್ಞಾನಿಕ ಆಚರಣೆಗಳನ್ನು ತಮ್ಮಜ್ಞಾನದ ಬೆಳಕಿನಲ್ಲಿ ಚರ್ಚಿಸಿ ಸೂಕ್ತವಾದ ನಿರ್ಧಾರಗಳನ್ನು ಕೈಗೊಂಡುಜನ ಮಾನಸಕ್ಕೆ ಹತ್ತಿರವಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ರ್ದೇಶಕರಾದಡಾ.ವೀರಣ್ಣದಂಡೆ ಮಾತ್ತುದತ್ತಿ ದಾಸೋಗಳಾದ ಡಾ.ಕೈಲಾಸ ಬನಾಳೆ, ಶ್ರೀಮತಿ ಬನಾಳೆ ಉಪಸ್ಥಿತರಿದ್ದರು.ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here