ಸ್ವಚ್ಛ ಭಾರತವೆಂದೊಡನೆ ಗಾಂಧೀ ತಾತನ ಗೋಳಾಕಾರದ ಹರಳು ರಹಿತ ಚಾಳೀಸು ನೆನಪಾಗುತ್ತದೆ. ಹರಳಿಲ್ಲದ ಚಾಳೀಸಿನ ಒಂದು ಪಡಕದಲ್ಲಿ ಸ್ವಚ್ವ ಎಂತಲೂ ಮತ್ತೊಂದರಲ್ಲಿ ಭಾರತವೆಂದು ಬರೆಯಲಾಗಿದೆ.
ಹೌದು ನನಗದು ರೂಪಕದಂತೆ., ಸ್ವಚ್ಛ ಭಾರತ ಕಾರ್ಯಕ್ರಮ ಬಂದಾಗಿಂದಲೂ ಕಾಡುತ್ತಲೇ ಇದೆ. ಸ್ವಚ್ಛ ವೆಂದು ಬರೆದಲ್ಲಿ ಭಾರತವಿಲ್ಲ. ಭಾರತವೆಂದು ಬರೆದಲ್ಲಿ ಸ್ವಚ್ಛವಿಲ್ಲ. ಅವೆರಡೂ ಮೊದಲಿನಿಂದಲೂ ಬೇರೆ ಬೇರೆಯಾಗಿಯೇ ಇವೆ. ಹಾಗಾದರೆ ಭಾರತವೆಂದರೆ ಸ್ವಚ್ಛವಾಗಿರದೇ ಕೊಳಕನ್ನು ತುಂಬಿಕೊಂಡೇ ಇರುವುದೇ..? ಇರಬೇಕೆ.?
ಅಷ್ಟಕ್ಕು ಆ ಕಾರ್ಯಕ್ರಮಗಳ ಪ್ರೊಮೋ, ಮಾಧ್ಯಮಗಳ ಲೈವ್ ಹಾಗೂ ಸುದ್ದಿಯ ಸ್ಥಬ್ದ ಚಿತ್ರಗಳನ್ನೇ ಗಮನಿಸುವುದಾದರೆ. ಮೋದಿಯೂ ಸೇರಿದಂತೆ ಸಣ್ಣ ಪುಟ್ಟ ರಾಜಕೀಯ ನಾಯಕರು ಉದ್ದನೆಯ ಚಿತ್ತಾರದ ಪೊರಕೆಯನ್ನು ಹಿಡಿದು ಕಸವೇ ಇಲ್ಲದ ಸ್ವಚ್ಛ ಜಾಗದಲ್ಲಿ ಕಸ ಚೆಲ್ಲಿ ಕಸಗುಡಿಸುವ ನಾಟಕವಾಡುತ್ತಾರೆ. ತಪ್ಪು ತಪ್ಪು ನಾಟಕವಾಡುವುದು ಹಗುರದ ಕೈಂಕರ್ಯವಲ್ಲ. ಹಾಗಾಗಿ ಅವರದು ನಾಟಕವಲ್ಲ.
ಅಷ್ಟಕ್ಕು ಅಲ್ಲಿ ಕಸವಿತ್ತೆಂದೇ ಭಾವಿಸುವುದಾದಲ್ಲಿ ಹಾಗೆ ಗುಡಿಸಿದ ಕಸವನ್ನು ಮೋದಿ ಸೇರಿದಂತೆ ಇತರರೆಲ್ಲರೂ ಕಸ ಗುಡಿಸಿ ಮತ್ತು ಒಂದೆಡೆಗೆ ಗೂಡಿಸಿ ಚೆಲ್ಲುವುದಿಲ್ಲವೇಕೆ..? ಚೆಲ್ಲುವುದಾಗಿದ್ದರೇ ಮಾಧ್ಯಮಗಳು ತೋರಿಸುತ್ತಿದ್ದವು. ಹೀಗಾಗಿ ಮಾಧ್ಯಮಗಳು ಎಲ್ಲ ನಾಯಕರು ಕಸಗುಡಿಸಿದಂತೆ ಮಾಡುವುದನ್ನು ತೋರಿಸುತ್ತಾರೆ.
ಅವರು ಹಾಗೊಂದು ವೇಳೆ ಗುಡಿಸಿದ್ದನ್ನು ತಲೆ ಮೇಲೆ ಹೊತ್ತು ಚೆಲ್ಲಿದ್ದರೇ ಖಂಡಿತವಾಗಿ ಮಾಧ್ಯಮಗಳಿಗೆ ಅದಕ್ಕಿಂತ ಟಿ.ಆರ್.ಪಿ. ಹೆಚ್ಚಿಸಬಲ್ಲ ಸುದ್ದಿ ಆ ಕ್ಷಣ ಇನ್ನೊಂದಿರಲಾರದು. ಖಂಡಿತವಾಗಿಯೂ ಅದನ್ನು ಅವರು ತೋರಿಸಿಯೇ ತೋರಿಸುತ್ತಿದ್ದರು. ಅವರು ತೋರಿಸಿಲ್ಲವೆಂದರೆ ಅವರು ಕಸಗುಡಿಸಿಲ್ಲವೆಂದೇ ತಿಳಿಯ ಬೇಕಾಗುತ್ತದೆ.
ಆದ್ದರಿಂದ ನಿತ್ಯ ಕಸ ಗುಡಿಸುವ ಕಾಯಕ ಜೀವಿಗಳಾದ ನಮಗೆ ಮೋದಿ ಮತ್ತಿತರ ಕಸ ಗುಡಿಸುವ ನಾಯಕರು ಮಾದರಿಯಾಗಬೇಕಿಲ್ಲ. ಅವರ ಮಾದರಿ ಅನುಸರಿಸುವುದೆಂದರೆ ಸ್ವಚ್ಛವಾಗಿ ನೀಟಾಗಿ ಕಸ ಗುಡಿಸುವುದಲ್ಲವೇ ಅಲ್ಲ. ಸುಳ್ಳೇ ಸುಮ್ಮನೆ ಗುಡಿಸಿದಂತೆ ನಟಿಸುವುದು. ಹೀಗೆ ಸುಂದರವಾಗಿ ನಟಿಸುವುದೆಂದರೆ ಸುಲಭವಲ್ಲ ಅಲ್ಲವೇ..?
-ಮಲ್ಲಿಕಾರ್ಜುನ ಕಡಕೋಳ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…