ಕಲಬುರಗಿ: ನೂತನವಾಗಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕಗೊಂಡ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ 8 ರಂದು ಶನಿವಾರ ಬೆಳಿಗ್ಗೆ 10 ಗ೦ಟೆಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಒಕ್ಕೂಟದ ಸದಸ್ಯ ಮಹಾ೦ತೇಶ ಎಸ್ ಕೌಲಗಿ ತಿಳಿಸಿದ್ದಾರೆ.
ನೂತನವಾಗಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕಗೊಂಡ ಕೊಲಿ ಸಮಾಜದ ರಾಜ್ಯ ಮುಖ೦ಡ ಹಾಗೂ ಹಿಂದುಳಿದ ವರ್ಗದ ಹಿರಿಯ ನೇತಾರರಾದ ಕಮಕನೂರ ಅವರಿಗೆ ನಗರದ ಕನ್ನಡ ಭವನದ ಸುವಣ೯ ಭವನ ದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳಲಾಗಿದ್ದು, ಹಿಂದುಳಿದ ವರ್ಗದ ಬ೦ದುಗಳು. ಹಿರಿಯರು. ಅಭಿಮಾನಿಗಳು ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಲು ಮಹಾ೦ತೇಶ ಎಸ್ ಕೌಲಗಿ, ಹಣಮಂತರಾಯ, ಆಲೂರ, ಶಿವಾನಂದ ಅಂಡಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.