ಕಲಬುರಗಿ: ಗುಲಬರ್ಗಾ ಉದ್ದಿಮಿ ವಸಾಹತು ಉತ್ಪಾದಕರ ಸಂಘ, ಎಟಿಪಿಸಿ, ಇಡಿಐ ಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳ ಕೌಶಲ್ಯ ಯೋಜನೆ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಜಿಲ್ಲೆಯ 10ನೇ ತರಗತಿ ಪಾಸಾದ ನಿರುದ್ಯೋಗಿ ಯುವಕ-ಯುವತಿಯರಿಗೆ ವಿವಿಧ ಬಗೆಯ ಕೌಶಲ್ಯ ಆಧಾರಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಐ.ಇ.ಎಂ.ಎ,ಎಟಿಪಿಸಿ, ಇಡಿಐ ಗೌರವ ಕಾರ್ಯದರ್ಶಿ ಸುರೇಶ ನಂದ್ಯಾಳ ತಿಳಿಸಿದ್ದಾರೆ.
ಹೊಲಿಗೆ ಯಂತ್ರ ಆಪರೇಟರ್, ಕೈ ಕಸೂತಿ, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಮೊಬೈಲ್ ಫೆÇೀನ್ ಹಾರ್ಡವೇರ್ ಟೆಕ್ನಿಶಿಯನ್ ತರಬೇತಿ ನೀಡಲಾಗುವುದು ಎಂದಿದ್ದಾರೆ.
ಎಸ್.ಎಸ್.ಎಲ್.ಸಿ ಪಾಸಾದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ನ.30ರೊಳಗೆ ಅರ್ಜಿ ಸಲ್ಲಿಸಬೇಕು. ಜೇವರ್ಗಿ ಕ್ರಾಸ್ ಸಮೀಪದಲ್ಲಿರುವ ಜಿಐಇಎಂಎ,ಎಟಿಪಿಸಿ, ಇಡಿಐ ಕಚೇರಿಗೆ ಭೇಟಿ ನೀಡಬಹುದು. ಹೆಚ್ವಿನ ಮಾಹಿತಿಗಾಗಿ ಮೊ.9448191292, 7760817949ಗೆ ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.