ಮೂಲ ಸೌಕರ್ಯದಿಂದ ವಂಚಿತ ಯಕ್ಷಿಂತಿ ಗ್ರಾಮ: ಶಾಸಕ ಗ್ರಾಮಕ್ಕೆ ಭೇಟಿ ನೀಡಲು ಒತ್ತಾಯ

0
95

ಶಹಾಪುರ: ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ರಸ್ತೆ ಚರಂಡಿ ಶೌಚಾಲಯ ನಿರ್ಗತಿಕ ಬಡವರಿಗೆ ಮನೆ ಹೀಗೆ ಹಲವಾರು ಸೌಕರ್ಯಗಳಿಂದ ವಂಚಿತವಾಗಿದೆ.

ಯಕ್ಷಿಂತಿ ಗ್ರಾಮದ ತಾಯಮ್ಮನ ಗುಡಿಯಿಂದ ಗೌಡೂರ ಹೊಗುವ ಮುಖ್ಯರಸ್ತೆವರೆಗೆ ರಸ್ತೆ ಚರಂಡಿ ಯಿಲ್ಲದೆ ನಲ್ಲಿನೀರು ಮಳೆನೀರು ನಿಂತು ಮುಂದಕ್ಕೆ ಹೊಗಲು ದಾರಿಯಿಲ್ಲದೆ ಯಾರು ಹೊಡಾಡಲಾಗತ್ತಿಲ್ಲ ಮತ್ತು ಕೃಷ್ಣ ನದಿಗೆ ಹೊಗುವ ಮುಖ್ಯರಸ್ತೆ ಹಲವು ರೈತರ ಜಮೀನಿಗೆ ಹೊಗುವ ರಸ್ತೆಯಾಗಿದೆ.

Contact Your\'s Advertisement; 9902492681

ಈ ರಸ್ತೆಗೆ ಗ್ರಾಮದ ಎಲ್ಲ ಚರಂಡಿ ನೀರು ಮಳೆ ನೀರು ಈ ರಸ್ತೆಗೆ ಬರುತ್ತದೆ ಬಂದಂತ ನೀರು ಮುಂದಕ್ಕೆ ಹೊಗಲಿಕ್ಕಾಗದೆ ಗಿಡಗಂಟೆ ಬೆಳೆದು ಗದ್ದೆಮಯವಾಗಿದೆ ಚರಂಡಿಯಿಲ್ಲ ನದಿಗೆ ಅಥವಾ ಹಳ್ಳದವರೆಗೆ ಚರಂಡಿಮಾಡಿ ಕೃಷ್ಣ ನದಿಗೆ ರೈತರ ಜಮೀನಿಗೆ ಹೊಗಲು ರಸ್ತೆ ಸುಧಾರಣೆ ಮಾಡಲು ಸಂಬಂದಪಟ್ಟ ಅಧಿಕಾರಿಗಳಿಗೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಕೊಟ್ಟು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾದಗಿರಿ ಮತಕ್ಷೇತ್ರದ ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅವರು ಯಕ್ಷಿಂತಿ ಗ್ರಾಮಕ್ಕೆ ಬಂದು ಗುಡಿಗುಂಡಾರದಲ್ಲಿ ಕುಳಿತು ಹೊಗುವದನ್ನು ಬಿಟ್ಟು ನಮ್ಮೂರಿನ ಸಮಸ್ಯಗಳನ್ನು ವಿಕ್ಷಣೆಮಾಡಿ ಸಂಬಂದಪಟ್ಟ ಅಧಿಕಾರಿಗಳಿಗೆ ಒತ್ತಡಹಾಕಿ ಮೂಲ ಸೌಕರ್ಯ ಒದಗಿಸಿ ಕೊಡಬೇಕೆಂದು ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ಅಧಕ್ಷ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here