ಶುದ್ಧ ನೀರಿನ ಘಟಕ ಒದಗಿಸಬೇಕೆಂದು ಆಗ್ರಹ

0
82

ಶಹಾಬಾದ:ಹೊನಗುಂಟಾ ಗ್ರಾಮದ ಭೀಮ ನಗರ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಶನಿವಾರ ಉಪತಹಸೀಲ್ದಾರ ಮಲ್ಲಿಕಾರ್ಜುನರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ ಮಾತನಾಡಿ, ಹೊನಗುಂಟಾ ಗ್ರಾಮದ ಭೀಮ ನಗರ ಬಡಾವಣೆಯ ಜನರು ಶುದ್ಧ ನೀರು ಎಂಬುದು ಗಗನಕುಸುಮವಾಗಿದೆ.ಇಲ್ಲಿ ಸುಮಾರು 150ಕ್ಕಿಂತ ಹೆಚ್ಚು ಕುಟುಂಬಗಳಿದ್ದು, ಇವರು ಸುಮಾರು ವರ್ಷಗಳಿಂದ ಅಶುದ್ಧ ನೀರನ್ನೇ ಕುಡಿದು ಬದುಕುತ್ತಿದ್ದಾರೆ.ಈ ಬಗ್ಗೆ ಹಲವಾರು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಇತ್ತಿಚ್ಚಿಗಷ್ಟೇ ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹದಿಂದ ಗ್ರಾಮದ ಭೀಮನಗರ ಹಾಗೂ ಶಿಬಿರಕಟ್ಟಾ ಪ್ರದೇಸ ಮುಳುಗಡೆಯಾದ ಸಂದರ್ಭದಲ್ಲಿ ಇಲ್ಲಿನ ಜನರು ನೀರಿನ ಯಾವುದೇ ಮೂಲ ಇಲ್ಲದ ಕಾರಣ, ನದಿಯ ಮಲೀನ ನೀರು ಕುಡಿದು ಜೀವನ ಸಾಗಿಸಿದ್ದಾರೆ.ಅಲ್ಲದೇ ಇದೇ ನೀರು ಕುಡಿದು ಹಲವಾರು ವರ್ಷಗಳಿಂದ ಬದುತ್ತಿದ್ದಾರೆ.ಆದರೆ ಇದರಿಂದ ನಾನಾ ಕಾಯಿಲೆಗಳು ಬಂದು ಆಸ್ಪತ್ರೆಗೆ ಹೋಗಿ ನರಳಾಡುವಂತಾಗಿದೆ.ಕೂಡಲೇ ಇಲ್ಲಿನ ಜನರಿಗೆ ಶುದ್ಧ ನೀರು ಕುಡಿಯುವ ನೀರಿನ ಪೂರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒದಗಿಸಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶರಣಬಸಪ್ಪ.ಎಮ್,ಅಜರ್ುನ ಮೇತ್ರೆ, ಸಂತೋಷ ಹಾದಿಮನಿ, ಮಲ್ಲಿಕಾಜರ್ುನ ಗಿರೇನೂರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here