ಶಹಾಬಾದ:ಸಮಾಜವಾದಿ ಸಮಾಜವನ್ನು ನಿರ್ಮಾಣ ಮಾಡಲು ರಷ್ಯಾದಲ್ಲಿ ಕಾರ್ಮಿಕ ವರ್ಗದ ನಾಯಕ ಲೆನಿನ್ ಅವರು ಮಹಾಕ್ರಾಂತಿಗೆ ಕರೆ ಕೊಟ್ಟ ದಿನವೇ ಎಂದು ಎಸಯುಸಿಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪೂರ ಹೇಳಿದರು
ಅವರು ಶನಿವಾರ ಎಸಯುಸಿಐ ಕಮುನಿಷ್ಟ ಪಕ್ಷದ ವತಿಯಿಂದ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ನವೆಂಬರ ಮಹಾಕ್ರಾಂತಿಯ 103 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.
ಅವರು ಮಾನವ ಸಮಾಜ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಲ್ಲಾ ರೀತಿಯಾ ವರ್ಗಶೋಷಣೆ ಮತ್ತು ದಬ್ಬಾಳಿಕೆಯಿಂದ ಮುಕ್ತಗೊಳಿಸಿ ಐತಿಹಾಸಿಕ ಸಮಾಜವಾದ ರಾಷ್ರ್ಟ ಗುರಿಯನ್ನು ಕಾರ್ಯರೂಪಕ್ಕೆ ತಂದರು ಮಾಕ್ರ್ಸವಾದ ಲೆನಿನವಾದ.ಸಮಾಜವಾದಿ ಸಮಾಜವು ಜನತೆಗೆ ಉದ್ಯೋಗವನ್ನು ಒದಗಿಸಿತ್ತು. ಹಸಿವು-ಭಿಕ್ಷಾಟನೆ-ನಿರುದ್ಯೋಗ, ರಾಷ್ಟೀಯ ಮತ್ತು ಜನಾಂಗೀಯಾ ಕಲಹಗಳು,ಪುರುಷರು ಮತ್ತು ಮಹಿಳೆಯರ ನಡುವಣ ಅಸಮಾನತೆಯನ್ನು ನಿರ್ಮೂಲನೆ ಮಾಡಿತು .ದುಡಿಯುವ ಜನತೆಗೆ ಸ್ವಾತಂತ್ರ್ಯ ಮತ್ತು ಪ್ರಜಾತಾಂತ್ರಿಕ ಹಕ್ಕುಗಳು, ಅಗ್ಗದ ಬೆಲೆಯಲ್ಲಿ ಅಗತ್ಯ ವಸ್ತುಗಳು ,ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆ ಮುಂತಾದವುಗಳು ಒದಗುವಂತೆ ಮಾಡಿದರು.
ಇದನ್ನು ಅರಿತು ಭಾರತದ ಮಹಾನ್ ಕವಿ ರವಿಂದ್ರನಾಥ ಟಾಗೊರ್, ಕರ್ನಾಟಕದ ಬಿಚೀ ಅವರು ಬೇಟಿನೀಡಿ ನಾನು ನಿಜವಾದ ಸ್ವರ್ಗ ರಷ್ಯದಲ್ಲಿ ನೋಡಿದೆ ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.ಇಂದಿನ ಯುವಜನರು ನವೆಂಬರ ಮಹಾಕ್ರಾಂತಿಯ ಇತಿಹಾಸ ತಿಳಿದುಕೊಂಡು ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಮುಂದೆ ಬರಬೇಕೆಂದು ಹೇಳಿದರು.
ಎಸಯುಸಿಐ ಕಾರ್ಯದರ್ಶಿ ಗಣಪತರಾವ.ಕೆ.ಮಾನೆ ಮಾತನಾಡಿ, ನಮ್ಮ ದೇಶ ಮಾತ್ರವಲ್ಲದೇ ಪ್ರಪಂಚದದ್ಯಾಂತ ಕೊನೆಯೇ ಇಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ಮತ್ತು ಅದಕ್ಕೆ ಬಲಿಯಾಗುತ್ತಿರುವ ಲಕ್ಷಾಂತರ ಜನರು ಒಂದೆಡೆಯಾದರೆ, ಇನ್ನೊಂದಡೆ, ಹಿಂದೆಂದೂ ಕಂಡಿರದಂತಹ ತೀವ್ರಗತಿಯಲ್ಲಿ ಉಲ್ಬಣಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕೆಲಸ ಕಳೆದುಕೊಂಡು ನಿರುದ್ಯೋಗದಿಂದ ಹಸಿವು ಮತ್ತು ಸಾವಿಗೆ ತಳ್ಳಲ್ಪಡುತ್ತಿರುವ ಲಕ್ಷಾಂತರ ಜನ. ಸಾಮ್ರಾಜ್ಯಶಾಹಿ- ಬಂಡವಾಳಶಾಹಿ ಆಳ್ವಿಕರು ಲಾಭಗಳಿಸುವ ತಮ್ಮ ಆರ್ಥಿಕ ಹಿತಾಸಕ್ತಿಯಿಂದ ಒಂದಿಂಚು ಆಚೆ ಸರಿದು, ಸದಾ ಏರುಗತ್ತಿಯಲ್ಲೆ ಇರುವ ಮಿಲಿಟರಿ ಬಜೆಟ್ ಅನ್ನು ಕಡಿತಗೊಳಿಸಿ,ಅದನ್ನು ಆರೋಗ್ಯ ಸೇವೆಗೆ ಬಳಿಸಿದ್ದರೆ, ಇಷ್ಟೊಂದು ವಿಸ್ತಾರವಾಗಿ ಹಬ್ಬುತ್ತಿರುವ ಈ ಅಪಯಕಾರಿ ವೈರಾಣು ರೋಗ ಮತ್ತು ಅದಕ್ಕೆ ಬಲಿಯಾಗುತ್ತಿರುವ ಬೃಹತ್ ಪ್ರಮಾಣದ ಜೀವಗಳನ್ನು ರಕ್ಷಿಸಬಹುದಿತ್ತು ಎಂದು ಹೇಳಿದರು.
ಗುಂಡಮ್ಮ ಮಡಿವಾಳ ಪ್ರಾಸ್ತವಿಕ ಮಾತನಾಡಿದರು. ಎಸಯುಸಿಐ ಕಮುನಿಷ್ಟ ಪಕ್ಷದ ಸದಸ್ಯ ರಾಘವೇಂದ್ರ ಎಮ್.ಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಗನ್ನಾಥ.ಎಸ್.ಎಚ್, ಸಿದ್ದು ಚೌಧರಿ, ತುಳಜರಾಮ್.ಎನ್.ಕೆ, ಮಹಾದೇವಿ ಮಾನೆ, ಶಿವುಕುಮಾರ.ಇ.ಕೆ, ಮಾಹಾದೇವ ಸ್ವಾಮಿ, ರಮೇಶ ದೇವಕರ್, ನೀಲಕಂಠ.ಎಮ್.ಹುಲಿ, ತಿಮ್ಮಾಯ್ಯ.ಬಿ.ಮಾನೆ ಇತರರು ಇದ್ದರು.