ಕಾಂಗ್ರೆಸ್ ಪಕ್ಷದಿಂದ ಮಾದಿಗ ಸಮಾಜಕ್ಕೆ ಅನ್ಯಾಯ-ಓಣಿ

0
147

ಶಹಾಬಾದ:ಕಾಂಗ್ರೆಸ್ ಪಕ್ಷ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮಾದಿಗ ಸಮಾಜಕ್ಕೆ ನೀಡದೇ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಮಾದಿಗ ಸಮಾಜದ ಮುಖಂಡರು ಡಿ.ಡಿ.ಓಣಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ಶರಣಬಸವೇಶ್ವರ ಮಂದಿರದ ಆವರಣದಲ್ಲಿ ಶನಿವಾರ ಮಾದಿಗ ಸಮನ್ವಯ ಸಮಿತಿಯ ವತಿಯಿಂದ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಇತ್ತು.ಇಲ್ಲಿಯವರೆಗೆ ಎಲ್ಲಾ ಸಮಾಜದ ಜನರು ನಗರಸಭೆಯ ಅಧಿಕಾರವನ್ನು ಪಡೆದುಕೊಂಡಿದ್ದಾರೆ.ಆದರೆ ಮಾದಿಗ ಸಮಾಜದವರಿಗೆ ನೀಡಿರಿರಲಿಲ್ಲ.ಈ ಬಾರಿಯಾದರೂ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದಲ್ಲಿ ಒಂದಾದರೂ ನೀಡಬಹುದೆಂಬ ಆಶಾ ಭಾವನೆ ನಮ್ಮಲ್ಲಿತ್ತು. ಸಾಮಾಜಿನ ನ್ಯಾಯ ನೀಡುತ್ತೆವೆ ಎಂಬ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಲ್ಲಿ ಹೋಯಿತು ಎಂಬ ಪ್ರಶ್ನೆ ನಮ್ಮಲ್ಲಿ ಕಾಡುತ್ತಿದೆ.ನಗರದಲ್ಲಿ ಮಾದಿಗರ ಜನಸಂಖ್ಯೆ ಹೆಚ್ಚಾಗಿದೆ. ಪಕ್ಷದ ಮುಖಂಡರು ಸಾಮಾಜಿಕ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ಕಾಂಗ್ರೇಸ ಪಕ್ಷದ ಮೇಲೆ ಮಾದಿಗ ಸಮಾಜ ನಂಬಿಕೆ ಇಟ್ಟಿತ್ತು. ಆದರೆ ನಂಬಿಕೆ ದ್ರೋಹ ಮಾಡಿದ್ದು, ಕಾಂಗ್ರೆಸ್ ಪಕ್ಷದ ತೀರ್ಮಾನವನ್ನು ಮಾದಿಗ ಸಮನ್ವಯ ಸಮಿತಿಯ ಮುಖಂಡರು ಖಂಡಿಸುತ್ತೇವೆ ಎಂದು ಹೇಳಿದರು.ಅಲ್ಲದೇ ಈ ಕುರಿತು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ನಗರಾಧ್ಯಕ್ಷರಿಗೆ ಪತ್ರ ಸಲ್ಲಿಸಲಿದ್ದೆವೆ ಎಂದು ತಿಳಿಸಿದರು.

ಮಾದಿಗ ಸಮಾಜ ಮುಖಂಡರಾದ ನಾಗಪ್ಪ.ಎಸ್.ಬೆಳಮಗಿ,ಶಂಕರ ದೊಡ್ಡಮನಿ, ನಾಮದೇವ ಸಿಪ್ಪಿ, ರವಿ ಬೆಳಮಗಿ,ನಾಗರಾಜ ಮುದನಾಳ,ಕಮಲಕಾಂತ ಕಾಂಬಳೆ, ಶ್ರೀಧರ ಕೊಲ್ಲೂರ, ಶ್ರೀಕಾಂತ ಸಾಕ್ರೆ, ಮಂಜುನಾಥ ಕೊಡಲಿಕರ, ಅಂಬ್ರೇಶ ಕಾಂಬಳೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here