ಸಾಹಿತ್ಯ

ಬಯಲು ಕವಿಗೋಷ್ಠಿ: ಕಾಡುವ ಒಡಲ ಸಂಕಟಗಳೇ ಕಾವ್ಯಗಳಾಗಲಿ: ವಿಶ್ವನಾಥ

ಚಿತ್ತಾಪುರ: ಅಸಮಾನತೆಯಿಂದ ತಲ್ಲಣಿಸುತ್ತಿರುವ ಈ ಸಾಮಾಜಿಕ ವ್ಯವಸ್ಥೆ ಸಂಕಟಗಳಿಂದ ನರಳುತ್ತಿದೆ. ಕಾಡುವ ಒಡಲ ಸಂಕಟಗಳೇ ನಮ್ಮ ಕಾವ್ಯಗಳಾದರೆ ಅಕ್ಷರಗಳಿಂದಲೇ ಸಂಚಲನ ಉಂಟಾಗುತ್ತದೆ ಎಂದು ಯುವ ಕವಿ, ಅಂಕಣಕಾರ ಕೆ.ಎಂ.ವಿಶ್ವನಾಥ ಮರತೂರ ಹೇಳಿದರು.

ಸಂಚಲನ ಸಾಹಿತ್ಯ-ಸಾಂಸ್ಕøತಿಕ ವೇದಿಕೆ ವತಿಯಿಂದ ಪಟ್ಟಣದ ನಾಗಾವಿ ಪರಿಸರದ 60 ಕಂಬಗಳ ಐತಿಹಾಸಿಕ ತಾಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕøತಿಕ ಲೋಕದ ತಲ್ಲಣಗಳು ಎಂಬ ಶಿರ್ಷಿಕೆಯ ಬಯಲು ಕವಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಕಟ್ಟುಪಾಡುಗಳಿಗೆ ಗಂಟು ಬಿದ್ದ ಸಾಹಿತ್ಯ ಬಹುಕಾಲ ಉಳಿಯುವುದಿಲ್ಲ. ಹೊಗಳು ಮತ್ತು ತೆಗಳುವ ಸಾಹಿತ್ಯವೂ ಇಂದಿನ ಅವಶ್ಯಕತೆಯಲ್ಲ. ಬದುಕಿನಲ್ಲಿ ಅನುಭವಿಸಿದ ನೋವುಗಳು ಅಕ್ಷರಗಳಾಗಬೇಕು. ಕವಿಯ ಸುತ್ತಮುತ್ತಲಿನ ಪರಿಸರದ ತೊಳಲಾಟಗಳೂ ಕಾವ್ಯದ ಸಾಲುಗಳಾಗಬೇಕು. ಪ್ರಚಾರದ ಗೀಳಿಗಂಟಿಕೊಳ್ಳದೆ ಪ್ರಬುದ್ಧ ಸಾಹಿತ್ಯ ಕೃಷಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.

ಯುವ ಬರಹಗಾರರ ಕವಿತೆಗಳನ್ನು ಕದ್ದು ತಮ್ಮ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಕೆಟ್ಟ ಮನಸ್ಸುಗಳು ಹುಟ್ಟಿಕೊಂಡಿರುವುದು ಸಾಹಿತ್ಯ ಲೋಕದ ತಲ್ಲಣವಲ್ಲದೆ ಮತ್ತೇನು? ಕಲ್ಯಾಣ ನಾಡಿನ ಉದಯೋನ್ಮುಖ ಕವಿಗಳ ಸಾಹಿತ್ಯ ಪರಿಚಯಸಲು ಆಸಕ್ತಿ ತೋರುವ ಹೃದಯಗಳ ಕೊರತೆ ಕಾಡುತ್ತಿದೆ. ಮೊದಲ ಕೃತಿ ಪ್ರಕಟಿಸಲು ಮುಂದಾಗುವ ಪ್ರತಿಭೆಗಳು ಪರದಾಡಬೇಕಾದ ಪರಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದ ವಿಶ್ವನಾಥ ಮರತೂರ ಅವರು, ತಮ್ಮ ಕವಿತಗಳ ಮೊದಲ ಕೃತಿಯನ್ನು ಪ್ರಕಟಿಸುವಾಗ ಅನುಭವಿಸಿದ ನೋವು ಅವಮಾನಗಳನ್ನು ಬಿಚ್ಚಿಟ್ಟರು.

ಬರಹ ಲೋಕಕ್ಕೆ ಕಾಲಿಡುತ್ತಿರುವ ಯುವ ಪ್ರತಿಭೆಗಳು ಕುವೆಂಪು ಅವರ ಸಮಗ್ರ ಸಾಹಿತ್ಯ ಅಧ್ಯಯನ ಮಾಡಬೇಕು. ತಾ.ರಾಸು, ಬೇಂದ್ರೆ, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಅವರಂತಹ ಹಿರಿಯ ಸಾಹಿತಿಗಳÀ ಸಮಾಜಮುಖಿ ಸಾಹಿತ್ಯದ ಪರಿಚಯ ಹೊಂದಬೇಕು. ನಾಡಿನ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪನವರ ಸಾಹಿತ್ಯದ ಕುರಿತು ವ್ಯಕ್ತವಾಗುವ ಪರ ವಿರೋಧ ಚರ್ಚೆಯನ್ನು ಬದಿಗಿಟ್ಟು ಅವರು ಕಟ್ಟಿಕೊಡುವ ಸಾಹಿತ್ಯದ ಅದ್ಭುತ ಶೈಲಿಯಿಂದ ನಾವು ಸಾಕಷ್ಟು ಕಲಿಯುವುದಿದೆ ಎಂದರು.

ಯುವ ಕವಿಗಳಾದ ಕಾಶೀನಾಥ ಹಿಂದಿನಕೇರಿ, ಕಿರಣಕುಮಾರ ಡಿ.ಕುಮಸಿ, ದೇವಿಂದ್ರ ಕರದಳ್ಳಿ, ವೀರಣ್ಣ ಯಾರಿ, ನಾಗಯ್ಯಸ್ವಾಮಿ ಅಲ್ಲೂರ, ದಯಾನಂದ ಖಜೂರಿ, ರವಿಕುಮಾರ ಕೋಳಕೂರ, ಚಂದ್ರು ಕರಣಿಕ, ಮಡಿವಾಳಪ್ಪ ಹೇರೂರ, ಖೇಮಲಿಂಗ ಬೆಳಮಗಿ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಸಂಚಲನ ಸಾಹಿತ್ಯ ವೇದಿಕೆಯ ಅಧ್ಯಕ್ಷ ವಿಕ್ರಮ ನಿಂಬರ್ಗಾ ಅಧ್ಯಕ್ಷತೆ ವಹಿಸಿದ್ದರು. ರಾಯಪ್ಪ ಕೊಟಗಾರ ನಿರೂಪಿಸಿದರು. ಶಿಕ್ಷಕ ಸುನೀಲಕುಮಾರ ರಾಠೋಡ ವಂದಿಸಿದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

15 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

21 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

25 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

27 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

49 mins ago