ಡಾ.ನಾಗಪ್ಪ ಗೋಗಿ ಅವರ “ಚಿಗುರು” ಕೃತಿ ಬಿಡುಗಡೆ

ಕಲಬುರಗಿ: ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಯುವ ಸಾಹಿತಿ ಹಾಗೂ ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೋಗಿ ಅವರ “ಚಿಗುರು” ಕೃತಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆಯವರು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳೆಂದು ಎಲ್ಲ ಕಾಲಕ್ಕೂ ಒಪ್ಪಿಕೊಂಡಿದ್ದರೂ ಕೂಡಾ ಅಸಮಾನತೆ ಎದ್ದು ಕಾಣುತ್ತದೆ.ಜೈನ್ ಸಾಹಿತ್ಯದಲ್ಲಿ ಪಂಪ ಅಹಿಂಸಾ ತತ್ವವನ್ನು ಪ್ರಸ್ತಾಪಿಸುತ್ತಾ ” ಮನುಷ್ಯ ಜಾತಿ ತಾನೋಂದೆ ವಲಂ” ಎಂಬುದನ್ನು ಸಾರಿದ ಸಂದೇಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುತ್ತಾ ಇವತ್ತಿನ ಯುವ ಬರಹಗಾರರು ಸಾಮಾಜಿಕ ಸ್ವಾಸ್ಥ್ಯ ವನ್ನು ಗಟ್ಟಿಗೊಳಿಸುವ ಕೃತಿಗಳನ್ನು ರಚಿಸಿಬೇಕೆಂದು ಕರೆ ನೀಡಿದರು.

ಚಿಗುರು ಕೃತಿ ಕುರಿತು ಮಾತನಾಡಿದ ಕಾವ್ಯಶ್ರೀ ಮಹಾಗಾಂವಕರ , ಡಾ.ನಾಗಪ್ಪ ಗೋಗಿಯವರು ಬೆಳೆದು ಬಂದ ಪರಿಸರ,ತಂದೆ ,ತಾಯಿ,ಬಂಧು ಬಳಗ,ದೇಶ ಪ್ರೇಮ, ನೆಲ‌,ಜಲ ಹಾಗೂ ಈ ಭಾಗದ ಸಾಂಸ್ಕೃತಿಕ ಸಂದೇಶಗಳನ್ನು ಸಾರುವ ಹಲವಾರು ಕವಿತೆಗಳು ಈ ಕೃತಿ ಒಳಗೊಂಡಿದ್ದು, ಇಂದಿನ ಯುವ ಬರಹಗಾರರಲ್ಲಿ ಇರಬೇಕಾದ ಕಾವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ, ಇವರ ಕೃತಿಯು ಕವಿಯ ಬದುಕಿನ ಮುಖಪುಟವನ್ನು ಹೋಲುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಾಹಿತಿ ಬಿ.ಎಚ್.ನಿರಗುಡಿ ಯವರು ಮಾತನಾಡಿ ಡಾ.ನಾಗಪ್ಪ ಗೋಗಿಯವರು ಇನ್ನೂ ಹತ್ತು ಹಲವಾರು ಕೃತಿಗಳು ರಚಿಸಲಿ‌ ಎಂದು ಅಭಿಪ್ರಾಯ ಪಟ್ಟರು.

ಈ ಕಾರ್ಯಕ್ರಮದಲ್ಲಿ 2020 ನೇ ಸಾಲಿನ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಿ.ಎನ್ ಅಕ್ಕಿಯವರು ಕೃತಿಯನ್ನು ಬಿಡುಗಡೆ ಮಾಡಿದರು ಪ್ರಕಾಶನ ಹಾಗೂ ಸತ್ಯಂ ಪಿಯು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು, ಹಾಗೂ ಸಗರ ನಾಡಿನ ಲೇಖಕರ ಸಂಘ,ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇವರನ್ನು ಸನ್ಮಾನಿಸಿದರು.

ಸ್ವಾಗತ ಹಾಗೂ ಪ್ರಾಸಾವಿಕವಾಗಿ ಡಾ.ನಾಗಪ್ಪ ಗೋಗಿ ಮಾತನಾಡಿದರು, ಶ್ರೀನಿವಾಸ ನಾಲವಾರ ನಿರೂಪಿಸಿದರು, ಬಸವಾರಾಜ‌ ಶೃಂಗೇರಿ ಪ್ರಾರ್ಥನೆ ಹಾಡಿದರು. ಜಿ.ಜಿ. ವಣಕಿಹಾಳ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಡಾ.ಕಲ್ಯಾಣರಾವ್ ಪಾಟೀಲ್,ಡಾ ನಾರಾಯಣ ರೋಲೆಕರ, ಶ್ರೀನಿವಾಸ ಸಿರನೂರಕರ್, ಡಾ.ಚಿ.ಸಿ.ನಿಂಗಣ್ಣ ,ಡಾ.ಸುರೇಶ ಜಾಧವ,ಶ್ರೀ ವೆಂಕಟೇಶ ನೀರಡಗಿ, ಡಾ.ಸೂರ್ಯಕಾಂತ ಸುಜ್ಯಾತ, ಡಾ. ಬಸವಂತರಾಯ್ ಜಾವಳಿ, ಡಾ.ಗವಿಸಿದ್ದಪ್ಪ ಪಾಟೀಲ್, ಪ.ಮನುಸಾಗರ, ವೆಂಕಟೇಶ ನಿರಡಗಿ, ಗಣೇಶ ಚಿನ್ನಾಕಾರ, ಸುಬಾಸ್ ಬಾದಾಮಿ, ಸುಬಾಸ ಹಾಬಾಳಕರ್, ಚಾಮರಾಜ ದೊಡಮನಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಪ್ರಾದ್ಯಾಪಕರು, ಹಾಗೂ ಅನೇಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

3 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

4 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

6 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

17 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

19 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420