ಬಿಸಿ ಬಿಸಿ ಸುದ್ದಿ

ಪತ್ರಿಕೆಗಳು ಸಮಾಜದ ಪ್ರತಿಬಿಂಬ: ಹಿರಿಯ ಪತ್ರಕರ್ತ ಮೊಯಿನೋದ್ದಿನ್ ಪಾಶಾ

ಕಲಬುರಗಿ: ಸಂವಿಧಾನದ ನಾಲ್ಕನೆ ಅಂಗವೆಂದು ಪರಿಗಣಿಸಲ್ಪಟ್ಟಿರುವ ಮಾಧ್ಯಮ, ಅದರಲ್ಲಿ ಮುದ್ರಣ ಮಾಧ್ಯಮಗಳಾದ ಪತ್ರಿಕೆಗೆಳು ಶಾಶ್ವತ ದಾಖಲೆಗಳು. ಸಮಾಜದಲ್ಲಿ ಕಂಡುಬರುವ ಸಮಸ್ಯೆಗಳನ್ನು ಸರ್ಕಾರ ಗಮನಕ್ಕೆ ತರವು ಮೂಲಕ ನ್ಯಾಯವನ್ನು ಒದಗಿಸಿಕೊಟ್ಟು ಕಲ್ಯಾಣ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯವನ್ನು ಪತ್ರಿಕೆಗಳು ನಿರಂತರವಾಗಿ ಮಾಡುತ್ತಾ ಬಂದಿವೆಯೆಂದು ಹಿರಿಯ ಪತ್ರಕರ್ತ ಮೊಯಿನೋದ್ದಿನ್ ಪಾಶಾ ಅಭಿಮತ ವ್ಯಕ್ತಪಡಿಸಿದರು.

ಅವರು ನಗರದ ಮೆಹಬೂಬ್ ನಗರದಲ್ಲಿನ ಚಿಸ್ತಿಯಾ ಮನೆಯ ಪ್ರಾಂಗಣದಲ್ಲಿ ’ಚಿಸ್ತಿಯಾ ಪರಿವಾರ’, ’ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ’ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ವತಿಯಿಂದ ’ಇಂಕ್ವಿಲಾಬ್ ಡೆಕ್ಕನ್’ ಉರ್ದು ಪತ್ರಿಕೆಯ ಬೆಳ್ಳಿ ಮಹೋತ್ಸವ ಆಚರಿಸಿಕೊಂಡ ಪ್ರಯುಕ್ತ ಪತ್ರಿಕೆ ಮುಖ್ಯಸ್ಥರಿಗೆ ಶನಿವಾರ ಸಂಜೆ ಹಮ್ಮಿಕೊಂಡಿದ್ದ ’ಅಭಿನಂದನಾ ಸಮಾರಂಭ’ದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.

ಪತ್ರಿಕೆಗಳು ಜ್ಞಾನದ ಕಣಜಗಳು. ದಿನನಿತ್ಯ ಅನೇಕ ವಿಷಯಗಳನ್ನು ತಿಳಸಿಕೊಡುತ್ತವೆ. ಪತ್ರಿಕೆ ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಇದರಿಂದ ಜ್ಞಾನದ ವ್ಯಾಪ್ತಿ ವಿಸ್ತಾರವಾಗಿ ವ್ಯಕ್ತಿತ್ವ ವಿಕಸನವಾಗುತ್ತದೆ. ರಾಷ್ಟ್ರ ಸರ್ವತೋಮುಖ ಅಭಿವೃದ್ಧಿಯೇ ಪತ್ರಿಕೆಗಳ ಗುರಿಯಾಗಿರುತ್ತದೆ. ಆ ನಿಟ್ಟಿನಲ್ಲಿ ಪತ್ರಕರ್ತರು ನಿಷ್ಪಕ್ಷಪಾತ, ಜಾತ್ಯಾತೀತ, ವಸ್ತುನಿಷ್ಠವಾಗಿ ಸುದ್ದಿ ಮಾಡುವ ಕಾರ್ಯ ಮಾಡುತ್ತಾರೆ. ಓದುಗರು, ಸಾರ್ವಜನಿಕರು ಸತ್ಯ ಸಂಗತಿಗಳನ್ನು ಧೈರ್ಯವಾಗಿ ಬರೆದು ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪತ್ರಕರ್ತರಿಗೆ ಸಹಕಾರ, ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಜರತ್ ಜಾನಿ ಷಾ ಬಾಬಾ, ಹಜರತ್ ಆದಾಮ್ ಅಲಿ ಷಾಮಹ್ಮದ್ ಸಲೀಮೋದ್ದಿನ್, ಮಹ್ಮದ್ ಆಶ್ರಫ್, ಅಬ್ದುಲ್ ಸಲೀಂ, ಬಾಬಾ, ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ಎಂ.ಬಿ.ನಿಂಗಪ್ಪ, ಎಸ್.ಎಸ್.ಪಾಟೀಲ ಬಡದಾಳ, ಸೈಯದ್ ಇಸ್ಮೈಲ್, ಅಬ್ದುಲ್ ಅರ್ಬಸ್, ಡಾ.ಸರ್ಫಜ್ ಖಾನ್, ಮಹ್ಮದ್ ಶುಫಿಯಾನ್, ಮಹ್ಮದ್ ರೈಸ್, ಸೈಯದ್ ಅಹ್ಮದ್, ಮೆಹಬೂಬ್ ಷಾ, ಮಹ್ದದ್ ಗೌಸ್ ಶೇಖ್, ಶೇಖ್ ರೆಹಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

19 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago