ಕಾರ್ಮಿಕ ವಿರೋಧಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ ಮುಷ್ಕರ: ಸುರೇಖಾ ಕುಲಕರ್ಣಿ

0
82

ಸುರಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರವಾಗಿ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿ ಧೋರಣೆ ಮುಂದು ವರೆಸಿರುವುದನ್ನು ಖಂಡಿಸಿ ಇದೇ ತಿಂಗಳು ೨೬ ನೇ ತಾರೀಖು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಮುಖಂಡರಾದ ಸುರೇಖಾ ಕುಲಕರ್ಣಿ ಮಾತನಾಡಿದರು.

ಜಂಟಿ ಕಾರ್ಮಿಕ ಸಂಘಟನೆಗಳ ಸಮಿತಿ (ಜೆಯುಸಿಟಿ) ಹಾಗು ಎಯಟಿಯುಸಿ ಸಿಐಟಿಯು ಮತ್ತಿತರೆ ಸಂಘಟನೆಗಳು ಕರೆ ನೀಡಿರುವ ಹೋರಾಟದ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ,ಇದೇ ೨೬ನೇ ತಾರೀಖು ನಡೆಯುವ ಮುಷ್ಕರದಲ್ಲಿ ಎಲ್ಲರು ಭಾಗವಹಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸೋಣ,ಇದರಿಂದ ರೈತ ಕಾರ್ಮಿಕ ಮತ್ತು ಅಂಗನವಾಡಿ ಆಶಾ ಎಲ್ಲಾ ಕಾರ್ಮಿಕರ ಬೇಡಿಕೆಗಳಿಗೆ ಪರಿಹಾರ ನೀಡಲು ಒತ್ತಾಯಿಸೋಣ ಎಂದರು.ಇದೇ ಸಂದರ್ಭದಲ್ಲಿ ನವೆಂಬರ್ ೨೬ ಮುಷ್ಕರದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಸೇರಿದಂತೆ ಅನೇಕರು ಮಾತನಾಡಿದರು.ಈ ಸಂದರ್ಭದಲ್ಲಿ ಉಮಾದೇವಿ ಕಲ್ಪನಾ ಬಸಮ್ಮ ಆಲ್ಹಾಳ ನಸೀಮಾ ಮುದನೂರ ಹಣಮಂತ್ರಾಯ ಮಡಿವಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here