ಅಂಬೇಡ್ಕರ್ ಯುವ ಸೇನೆ, ಭೀಮ್ ಆರ್ಮಿಯಿಂದ ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿ ಪ್ರತಿಭಟನೆ

0
112

ಕಲಬುರಗಿ: ಕಾನೂನು ಬಾಹಿರವಾಗಿ ಅನುದಾನ ಪಡೆಯಲು ಸಹಕರಿಸಿದ ಪಿಡಿಓ ಹಾಗೂ ಕಂಪ್ಯೂಟರ್ ಅಪರೇಟರ್ ಮೇಲೆ ಕ್ರೀಮಿನಲ್ ಮೊಕ್ಕದಮ್ಮೆ ದಾಖಲಿಸಿ ಸೇವೆಯಿಂದ ವಜಾಗೋಳಿಸಬೇಕೆಂದು ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ ಹಾಗೂ ಭೀಮ ಆರ್ಮಿ ವಿಭಾಗಿಯ ಅಧ್ಯಕ್ಷರಾದ ಅರುಣ ಎಸ್ ಭರಣಿ ಯವರು ಆಗ್ರಹಿಸಿದರು.

ಶರಣ ಸಿರಸಗಿ ಗ್ರಾಮ ಪಂಚಾಯತನಲ್ಲಿ ಬಸವ ವಸತಿ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಭಾರಿ ಅವ್ಯವಹಾರ ಕುರಿತು ಗ್ರಾಮ ಪಂಚಾಯತ ಮುತ್ತಿಗೆ ಹಾಕಿ ಕಲಬುರಗಿ ಅಫಜಲಪುರ ಮುಖ್ಯ ರಸ್ತೆ ತಡೆ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು.

Contact Your\'s Advertisement; 9902492681

ಬಸವ ವಸತಿ ಯೋಜನೆಯ ಮನೆಗಳನ್ನು ಗ್ರಾಮ ಸಭೆ ಮಾಡದೆ ಕಾನೂನು ಬಾಹಿರವಾಗಿ ಗ್ರಾಮ ಪಂಚಾಯತ್ ಕಂಪ್ಯೂಟರ್ ಅಪರೇಟರ್ ಒಂದೇ ಕುಟುಂಬಕ್ಕೆ ಏಳು (7) ಮನೆಗಳನ್ನು ಮಂಜುರು ಮಾಡಿ ಮನೆ ಕಟ್ಟದೆ ಒಂದೇ ಕಟ್ಟಡಕ್ಕೆ 7 ಬಾರಿ ಜಿಪಿಎಸ್ ಮಾಡಿಸಿ ಹಣ ಲಪಟಾಯಿಸಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಇಸ್ಮಾಯಿಲ್ ಹಾಗೂ ಕಲಬುರಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ಸ್ಥಳಕ್ಕೆ ಧಾವಿಸಿ ಮನವಿ ಪತ್ರ ಸ್ವಿಕರಿದರು.

ಈ ಭೀಮ್ ಆರ್ಮಿ ಯುವ ಘಟಕದ ಮುಖ್ಯಸ್ಥ ಸಂತೋಷ ಬಿ ಪಾಳಾ, ಶಿವಮೂರ್ತಿ ನಡಗೇರಿ, ಅನೀಲ್ ಪೂಜಾರಿ, ಹಾಗೂ ಶರಣಸಿರಸಗಿ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here