ಕಲಬುರಗಿ: ಮಧ್ಯರಾತ್ರಿ ಊರ ಹೊರಗೆ ಕಾರ್ಗತ್ತಲಲ್ಲಿ ದೇವಸ್ಥಾನವೊಂದರ ಆವರಣದಲ್ಲಿ ನಿಧಿ ಶೋಧನೆಯಲ್ಲಿ ತೊಡಗಿದ್ದ ಒಟ್ಟು ಆರು ಜನರಲ್ಲಿ ಮೂವರು ಆರೋಪಿಗಳನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ ಪ್ರಸಂಗ ನಡೆದಿದೆ.
ಚಿತ್ತಾಪುರ ತಾಲೂಕಿನ ನಾಲವಾರ ವಲಯದ ರಾಂಪುರಹಳ್ಳಿ ಹಾಗೂ ಶಾಂಪೂರಹಳ್ಳಿ ಗ್ರಾಮಗಳ ಮಧ್ಯೆ ಇರುವ ಶೇಷಪ್ಪ ನಿಡಾಲ್ ಎಂಬುವವರ ಹೊಲದಲ್ಲಿರುವ ಶ್ರೀಭಾಗ್ಯವಂತಿ ದೇವಿ ದೇವಸ್ಥಾನ ಆವರಣದಲ್ಲಿ ಬುಧವಾರ ತಡರಾತ್ರಿ ೩:೦೦ ಗಂಟೆ ವೇಳೆ ಕಳ್ಳರು ಭೂಮಿ ಪೂಜೆ ನೆರವೇರಿಸಿ ನೆಲ ಬಗೆಯುತ್ತಿದ್ದರು ಎನ್ನಲಾಗಿದ್ದು, ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ ವಿಜಯಕುಮಾರ ಭಾವಗಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ದೊಡ್ಡಪ್ಪ ಪೂಜಾರಿ, ದತ್ತು ಜಾನೆ, ನಿಂಗಣ್ಣ ಹಾಗೂ ಚನ್ನಬಸವ ಅವರು ಅನುಮಾನಗೊಂಡು ಮೋಬಾಯಿಲ್ ಬ್ಯಾಟರಿ ಬೆಳಕಿನಲ್ಲಿ ನಡೆದುಕೊಂಡು ಹೋಗಿ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.
ಒಟ್ಟು ಆರು ಜನರು ಸೇರಿಕೊಂಡು ನೆಲ ಬಗೆಯುತ್ತಿದ್ದಾಗ ಶಾಂಪುರಹಳ್ಳಿಯ ಹಣಮಂತ ಕತ್ರಿ, ತರ್ಕಸಪೇಟೆಯ ಸಾಬಣ್ಣ ಅರಿಕೇರಿ ಹಾಗೂ ರಾಂಪುರಹಳ್ಳಿಯ ಬಸಲಿಂಗ ಮಾಡಗಿ ಎಂಬ ಮೂವರು ನಿಧಿಗಳ್ಳರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರಿಂದ ಗುದ್ದಲಿ, ಸಲಿಕೆ, ಹಾರಿ, ಬುಟ್ಟಿ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದ ಮೂವರು ಆರೋಪಿಗಳು ಬಾಗಲಕೋಟೆ ಮತ್ತು ತಾಳಿಕೋಟೆ ಮೂಲದವರೆಂದು ತಿಳಿದುಬಂದಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪಿಎಸ್‌ಐ ವಿಜಯಕುಮಾರ ಭಾವಗಿ ತಿಳಿಸಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…