ಕಲಬುರಗಿ: ಪ್ರಜ್ಞಾ ದಿ ಇನ್ಸ್‌ಟ್ಯೂಟ್ ಆಫ್ ಇನ್ನೋವೆಟೀವ್ ಲರ್ನಿಂಗ್ ಕಲಬುರಗಿ ಇವರ ವತಿಯಿಂದ ನಗರದ ಸಂಗೀತ ಕಲಾ ಮಂಡಳ ಸಭಾ ಭವನದಲ್ಲಿಕೌನ ಬನೇಗಾ ಜ್ಞಾನಪತಿ ಹಿರಿಯರ ವಿಭಾಗ ಎನ್ನುವ ವಿಶಿಷ್ಠ ವಿನೂತನ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಾನಂದ ಬಿ. ಪಾಟೀಲ ಮರತೂರ, ವಿರೋಧ ಪಕ್ಷದ ನಾಯಕರು ಜಿಲ್ಲಾ ಪಂಚಾಯತ್ ಕಲಬುರಗಿ. ಪ್ರಜ್ಞಾ ಸಂಸ್ಥೆಯ ಮೂಲಕ ಅನೇಕ ಜನಪರವಾದ ಕೆಲಸಗಳು ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿ ಸಂಸ್ಥೆಯ ಕಾಳಜಿ ಮೆಚ್ಚುವಂತಹದ್ದು. ಕಲ್ಯಾಣ ಕರ್ನಾಟದಲ್ಲಿ ಸರಕಾರಿ ನೌಕರಿಗಾಗಿ ಸ್ಪರ್ಧಾರ್ಥಿಗಳು ಓದುತ್ತಿದ್ದಾರೆ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಕೌನ ಬನೇಗಾ ಜ್ಞಾನಪತಿ ಕರ್ಯಕ್ರಮ ಆಯೋಜನೆ ಮಾಡಿದ್ದು ಓದುವ ಯುವಕರು ಇದರ ಲಾಭ ಪಡೆಯಬೇಕಾಗಿದೆ. ವಿಶ್ವನಾಥ ಮರತೂರ ಅವರ ನೃತೃತ್ವದಲ್ಲಿ ಕಳೆದ ವರ್ಷ ಅತ್ಯಂತ ಯಶಸ್ವೀಯಾಗಿ ಈ ಕಾರ್ಯಕ್ರಮ ನಡೆದಿತ್ತು ಇದೀಗ ಅದೇ ಮಾದರಿಯಲ್ಲಿ ಹಿರಿಯರಿಗೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಸ್ಪರ್ಧಾತ್ಮಕ ಜಗತ್ತಿಗೆ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮ ಹೊಸ ಮೈಲಿಗಲ್ಲಾಗಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ದಾರಿದೀಪವಾಗಲಿ ಈ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಸಂಸ್ಥೆಯ ಕಾರ್ಯನಿರ್ವಾಕ ನಿರ್ದೇಶಕರಾದ ಕೆ.ಎಂ.ವಿಶ್ವನಾಥ ಮರತೂರ ಸರಿಯಾದ ಸಮಯದಿ, ಸರಿಯಾದ ವಯೋಮಾನದಿ ಮತ್ತು ಸರಿಯಾದ ಕ್ರಮದಲ್ಲಿ ಬದುಕು ಯಶಸ್ಸಿನತ್ತ ಕೊಂಡಯ್ಯೂವ ಜೊತೆಗೆ ಅವಕಾಶಗಳೆಂಬ ಹೂವುಗಳಿರುತ್ತವೆ ನಮ್ಮ ಧನಾತ್ಮಕ ಒಳದೃಷ್ಠಿಯ ಮೂಲಕ ಹೆಜ್ಜೆಗಳು ಇಟ್ಟರೆ ಯಶಸ್ಸು ನಮ್ಮದಾಗುತ್ತದೆ. ಈ ಯಶಸ್ಸಿನ ಹಾದಿಯಲ್ಲಿ ಪ್ರಜ್ಞಾ ದಿ ಇನ್ಸ್‌ಟ್ಯೂಟ್‌ಆಫ್ ಇನ್ನೋವೆಟೀವ್ ಲನಿಂಗ್ ಕಲಬುರ್ಗಿ, ಕೌನ ಬನೆಗಾ ಜ್ಞಾನಪತಿ ಎನ್ನುವ ವಿನೂತನ ವಿಶಿ? ರಸಪ್ರಶ್ನೆ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ.
ಒಟ್ಟು ಕರ್ನಾಟಕವನ್ನು ಗಮನಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವವರ ಸಂಖ್ಯೆ ಕಲ್ಯಾಣ ಕರ್ನಾಟಕದಲ್ಲಿ ಕಡಿಮೆಯಂದು ಕಾಣಬರುತ್ತದೆ. ದೇಶದ ಉನ್ನತ ಹುದ್ದೆಗಳಲ್ಲಿಯೂ ನಮ್ಮ ಪಾಲು ಗಣನೀಯವಾಗಿಲ್ಲ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ ವಿದ್ಯೆಗೆ ಸರಿಸಮಾನವಾದ ಸರಕಾರಿ ಹುದ್ದೆ ಪಡೆಯಲು ಬೇಕಾದ ಸ್ಪರ್ಧಾ ಮನೋಭಾವ ಮತ್ತು ಅಧ್ಯಯನದ ಕೊರತೆ ಎದ್ದು ಕಾಣುತ್ತದೆ. ನಮ್ಮಂತಹ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯಿದೆ ಆದರೆ ಸ್ಪೂರ್ತಿಯ ಕೊರತೆ ಕಾಣುತ್ತದೆ.
ಶಿಕ್ಷಣ ಪ್ರೇಮಿಗಳು ಧನಾತ್ಮಕ ಮನಸ್ಸು ಮಾಡಿ ಈ ಸುಧಾರಣೆಯಲ್ಲಿ ಕೈಜೋಡಿಸಬೇಕಾದ ಅತ್ಯಂತ ಅಗತ್ಯವಿದೆ. ಹೀಗಾಗಿ ಈ ಸ್ಪರ್ಧಾತ್ಮಕ ಯುಗಕ್ಕೆ ನಮ್ಮ ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ಈ ಕೌನ ಬನೆಗಾ ಜ್ಞಾನಪತಿ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಇದರ ಲಾಭವನ್ನು ಜಿಲ್ಲೆಯ ಸ್ಪರ್ಧಾರ್ಥಿಗಳು ಪಡೆಯಬೇಕು ಎಂದರು.
ನೀಲಕಂಠರಾವ್ .ಎಸ್. ಮೂಲಗೆ, ಅಧ್ಯಕ್ಷರು ದಕ್ಷಿಣ ಕಾಂಗ್ರೆಸ್ ಸಮಿತಿ ಕಲಬುರಗಿ, ಇವರು ಮಾತನಾಡಿ ಇದೊಂದು ಬಹಳ ವಿಶೇಷ ಕಾರ್ಯಕ್ರಮವೆನಿಸುತ್ತದೆ. ಈ ರೀತಿ ಯೋಚಿಸುವುದು ಅತ್ಯಂತ ಕಷ್ಟ ಆದರೆ ನಮ್ಮ ಭಾಗದ ಯುವಕರಿಗಾಗಿ ಇದು ಅತ್ಯಂತ ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಾಗಿ ಓದುತ್ತಿರುವ ವಿಧ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಲಿದೆ ನಾವು ಇಂತಹ ಹೊಸ ವಿನೂತನ ಕಾರ್ಯಕ್ರಮಗಳಿಗೆ ಸ್ಪಂದಿಸಬೇಕು ಎಂದರು.
ಅಜೀತ್ ಕುಮಾರ ಪೋಲಿಸ್ ಪಾಟೀಲ್, ಶಿಕ್ಷಣ ಪ್ರೇಮಿಗಳು, ಮಾತನಾಡಿ ನಾವೆಲ್ಲರೂ ಬದುಕಿನಲ್ಲಿ ಯಶಸ್ವೀಯಾಗಲು ಇರುವೆಯಂತೆ ದುಡಿಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯಲು ನಾವೆಲ್ಲರೂ ಸತತ ಪ್ರಯತ್ನ ಪಡಬೇಕು ಕೌನ ಬನೇಗಾ ಜ್ಞಾನಪತಿ ಒಂದು ವಿಶಿಷ್ಠ ರೀತಿಯ ಅನುಭವವನ್ನು ಕೊಡುತ್ತದೆ. ಓದುತ್ತಿರುವ ಯುವಕರಿಗೆ ಇದರ ಲಾಭವಾಗಲಿದೆ. ಪ್ರಜ್ಞಾ ಸಂಸ್ಥೆಯು ಶಿಕ್ಷಣದ ಅನೇಕ ಅವಕಾಶಗಳನ್ನು ಸೃಷ್ಠಿಸುತ್ತಿದೆ. ಸಮಾಜದ ಶೈಕ್ಷಣಿಕ ಮಿಡಿತವಾಗಿ ಈ ಸಂಸ್ಥೆ ಕೆಲಸ ಮಾಡಲಿ ಎಂದರು.
ಗಿರೀಶ ಕಡ್ಲೆವಾಡ ಅಧ್ಯಕ್ಷರು ಕ.ರಾ.ವಿ.ಪ. ಬೆಂಗಳೂರ. ಇವರು ಮಾತನಾಡಿ ಪ್ರಜ್ಞಾ ಸಂಸ್ಥೆಯ ಕೆಲಸ ಶ್ಲಾಘನೀಯವಾಗಿದೆ. ವಿಶ್ವನಾಥ ಮತ್ತು ಗೆಳೆಯರ ಬಳಗ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸ್ಪರ್ಧಾರ್ಥಿಗಳು ಅತ್ಯಂತ ಶ್ರದ್ಧೆಯಿಂದ ಓದುವ ಮೂಲಕ ಪ್ರಸ್ತುತ ಸರಕಾರದ ನೇಮಕಾತಿಗಳಲ್ಲಿ ಭಾಗವಹಿಸಬೇಕು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ಯುವಕರು ಮಾಡಬೇಕಿದೆ. ಉತ್ತಮವಾದ ಸರಕಾರಿ ನೌಕರಿ ಪಡೆಯಲು ಉತ್ತಮವಾದ ಯೋಜನೆಯೊಂದಿಗೆ ಓದುವುದು ಅತ್ಯಂತ ಮುಖ್ಯವಾಗುತ್ತದೆ. ಈ ಕಾರ್ಯಕ್ರಮದ ಮೂಲಕ ವಿಧ್ಯಾರ್ಥಿಗಳಿಗೆ ಓದುವ ಆಸಕ್ತಿ ಮೂಡಿಸುವ ಕೆಲಸ ಪ್ರಜ್ಞಾ ಸಂಸ್ಥೆ ಹಾಗೂ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮ ಮಾಡಲಿದೆ ಎಂದರು.
ಬಿ.ಎಚ್. ನಿರಗುಡಿ ಪ್ರಾಂಶುಪಾಲರು ಸತ್ಯಂ ಪಿ.ಯು.ಕಾಲೇಜು ಕಲಬುರಗಿ. ಮಾತನಾಡಿ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮವು ಒಂದು ಹೊಸ ಕಾರ್ಯಕ್ರಮ ಫಲಿತಾಂಶವನ್ನು ಕೊಡುವ ಕಾರ್ಯಕ್ರಮವಾಗಿದೆ. ಸ್ಪರ್ಧಾತ್ಮಕವಾಗಿ ಗಮನಿಸಿದಾಗ ನಮ್ಮ ಕಲಬುರಗಿ ಭಾಗದಲ್ಲಿ ಅತ್ಯಂತ ಕಡಿಮೆ ಜನರನ್ನು ನಾವು ಗಮನಿಸುತ್ತೇವೆ ಈ ಹಿನ್ನಲೆಯಲ್ಲಿ ಕೌನ ಬನೇಗಾ ಜ್ಞಾನಪತಿ ಕಾರ್ಯಕ್ರಮವು ತನ್ನದೇ ಆದ ವೈಶಿಷ್ಠ್ಯಗಳ ಮೂಲಕ ಸ್ಪರ್ಧಾರ್ಥಿಗಳ ಮನಸ್ಸು ಗೆಲ್ಲಲಿದೆ ಎಂದರು.
ಅಧ್ಯಕ್ಷವಹಿಸಿ ಮಾತನಾಡಿದ ಕಾಶಿನಾಥ ಎಚ್ ಮರತೂರ ನಮ್ಮ ಸಂಸ್ಥೆಯ ಮೂಲಕ ಈಗಾಗಲೇ ಹಲವು ವಿಶೇಷ ಕಾರ್ಯಕ್ರಮಗಳನ್ನು ನಮ್ಮ ಭಾಗದ ಯುವಕರಿಗಾಗಿ ಮಾಡುತ್ತಿದ್ದು, ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಸ್ಪರ್ಧಾರ್ಥಿಗಳು ಈ ಕಾರ್ಯಕ್ರಮದ ಸದೂಪಯೋಗ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ೪೦ಕ್ಕು ಹೆಚ್ಚು ಸ್ಪಧಾರ್ಥಿಗಳು ಭಾಗವಹಿಸಿದ್ದರು. ಕುಪೇಂದ್ರ ಬರಗಾಲಿ ಕುಸನೂರ, ಧರ್ಮರಾಜ್ ಹೇರೂರ, ಅಧ್ಯಕ್ಷರು ಕಾಂಗ್ರೆಸ್ ಹಿಂದೂಳಿದ ಘಟಕ ಕಲಬುರಗಿ. ಹಾಜರಿದ್ದರು ಉಮೇಶ ಗುತ್ತೆದಾರ ನಿರೂಪಿಸಿ ವಂದಿಸಿದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…