ನವದೆಹಲಿ: ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಾದ ಸಂಕಲ್ಪ ಪತ್ರಕ್ಕೆ ಬಿಜೆಪಿ ಹಿರಿಯ ರಾಜಕಾರಣಿ ಸುಬ್ರಮಣ್ಯನ್ ಸ್ವಾಮಿ ಟಾಂಗ್ ನೀಡಿದ್ದಾರೆ. ಸಂಕ್ಪಲ ಪತ್ರದಲ್ಲಿ ತಪ್ಪನ್ನು ಹುಡುಕಿರುವ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡಿ ಬಿಜೆಪಿಗೆ ಶಾಕ್ ನೀಡಿದ್ದಾರೆ.
ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆ ಸಂಕಲ್ಪ ಪತ್ರ ಬಿಡುಗಡೆ ಮಾಡಿತ್ತು, ಪತ್ರದಲ್ಲಿ 2022ರ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಆಶ್ವಾಸನೆ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಬಿಜೆಪಿಯ ಈ ಆಶ್ವಾಸನೆಯನ್ನು ಪ್ರಮಾದ ಎಂದಿರುವ ಸ್ವಾಮಿ, 2022ರಲ್ಲಿ ರೈತರ ಆದಾಯ ದುಪ್ಪಟ್ಟಾಗುವುದೆಂದರೆ ವಾರ್ಷಿಕ ಶೇಕಡಾ 24ರಷ್ಟು ಬೆಳವಣಿಗೆಯಾಗಬೇಕು. ಆದರೆ ಅದು ಸಾಧ್ಯವಿಲ್ಲ. ವಾರ್ಷಿಕ ಕೇವಲ 10 ಶೇಕಡಾ ಬೆಳವಣಿಗೆ ಸಾಧ್ಯ ಎಂದು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
ಬಿಜೆಪಿಯ ತನ್ನ ಪ್ರಣಾಳಿಕೆಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವಿಶ್ವದಲ್ಲಿ ಆರನೇ ಸ್ಥಾನದಲ್ಲಿದೆ ಎಂದಿದೆ. ಆದರೆ ಭಾರತದ ಜಿಡಿಪಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಆರ್ಥಿಕ ತಜ್ಞರೂ ಆಗಿರುವ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ.