ಬಿಸಿ ಬಿಸಿ ಸುದ್ದಿ

ಕೇಂದ್ರೀಯ ವಿವಿ ನೀರಿನ ಪರ್ಯಾಯ ವ್ಯವಸ್ಥೆಗೆ ಶಾಸಕ ಗುತ್ತೇದಾರ ಒತ್ತಾಯ

ಆಳಂದ: ತುರ್ತು ಅಗತ್ಯವಾಗಿರುವ ಅಂತರ್ಜಲ ಹೆಚ್ಚಿಸುವ ಕೆಲಸದೊಂದಿಗೆ ಹಸಿರುವನ ನಿರ್ಮಿಸುವ ಕಾರ್ಯವನ್ನು ಯುದ್ದೋಪಾದಿಯಲ್ಲಿ ನಡೆದರೆ ಮಾತ್ರ ಜೀವಸಂಕುಲ ಬzಕಲು ಸಾಲಧ್ಯವಾಗುತ್ತದೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.

ತಾಲೂಕಿನ ಕಡಗಂಚಿ ಹತ್ತಿದ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಆವರಣದಲ್ಲಿ ತಾಲೂಕು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಗ್ರಾಪಂ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ರಾಜ್ಯ ಸರ್ಕಾರದ ಜಲಾಮೃತ ವರ್ಷ ಹಾಗೂ ಸ್ವಚ್ಛಮೇವ ಜಯತೆ ಕಾರ್ಯಕ್ರಮದ ಅಂಗವಾಗಿ ಸಸಿಗಳಿಗೆ ನೀರುಣಿಸಿ ಮಾತನಾಡಿದರು.

ವರ್ಷ ವರ್ಷ ಮಳೆಯ ಕೊರತೆಯಾಗಿ ಕುಡಿಯುವ ನೀರಿಗೂ ಭೀಕರ ಬರ ಎದುರಿಸುತ್ತಿದ್ದು, ನೂರಾರು ಅಡಿ ಆಳವಾಗಿ ಕೊಳವೆ ಭಾವಿ ಅಗೆದರು ನೀರು ದೊರೆಯುತ್ತಿಲ್ಲ. ಈ ಸಮಸ್ಯೆ ಎದರುಸಲು ನೀರಿನ ಸದ್ಭಳಕೆ ಅಗತ್ಯವಾಗಿದೆ. ನೀರಿನ ಹಿತಮಿತ ಬಳಿಕೆಗಾಗಿ ಮಳೆ ನೀರು ಭೂಮಿಗೆ ಇಂಗಿಸಲು ಇಂಗುಗುಂಡಿ ನಿರ್ಮಾಣ, ಪ್ರತಿಯೊಂದ ಕಡೆ ಗಿಡ, ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರು ಸಂಘ, ಸಂಸ್ಥೆಗಳ ಮುಂದಾಗಬೇಕು ಎಂದು ಹೇಳಿದರು.

ಎಲ್ಲರ ಪ್ರಯತ್ನದಿಂದ ತಾಲೂಕಿನಲ್ಲಿ ಕೇಂದ್ರೀಯ ವಿವಿ ಆರಂಭಗೊಂಡಿದ್ದು, ಇಲ್ಲಿಗೆ ಕುಡಿಯುವ ನೀರು, ಪರಿಸರ ಸಂರಕ್ಷಣೆಗೆ ತಾಲೂಕು ಆಡಳಿತ ಸಾಥ ನೀಡಲಿದೆ. ಮುಂದೊಂದು ದಿನ ವಿವಿ ಆವರಣ ಹಸಿರುವನವಾಗಲಿದೆ ಎಂದ ಅವರು, ಈಗಾಗಲೇ ಅಮರ್ಜಾ ಅಣೆಕಟ್ಟೆಯಿಂದ ಕುಡಿಯುವ ನೀರು ಒದಗಿಸಿದರು ಸಾಕಾಗುತ್ತಿಲ್ಲ. ಭೀಮಾನದಿ ನೀರು ದೊರೆಯತ್ತದೆ ಎಂಬ ನಂಬಿಕೆಯಿಲ್ಲ. ಇದಕ್ಕಾಗಿ ಬೆಣ್ಣೆತೋರ, ಗಂಡೋರಿ ನದಿಯಂತ ಸ್ಥಗಳಿಂದಲ ನೀರು ತರಲು ಪರ್ಯಾಯ ಯೋಜನೆಯೊಂದು ರೂಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕೇಂದ್ರೀಯ ವಿವಿ ಸಮಕುಲಪತಿ ಬಿ.ಜಿ.ಮೂಲಿಮನಿ ಅವರು ಮಾತನಾಡಿ, ಬರದಿಂದಾಗಿ ವಿವಿ ಆವರಣದಲ್ಲಿ ನಿರೀಕ್ಷಿತ ಗಿಡ, ಮರಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೊರಗಿನಿಂದ ಬಂದವರಿಗೆ ಗಿಡಗಳ ಕೊರತೆ ಕಂಡುಬರುತ್ತಿದೆ. ಮುಂಬರುವ ೧೦ ವರ್ಷಗಳಲ್ಲಿ ನೆಡಲಾದ ೨ ಸಾವಿರ ಮರಗಳಿದ್ದು, ಈ ವರ್ಷ ಅರಣ್ಯ ಇಲಾಖೆಯಿಂದ ೪ ಸಾವಿರ ಸಸಿಗಳನ್ನು ನೆಡಲು ಮುಂದಾಗಿದ್ದು, ಇದರಿಂದ ಹಸಿರು ವನವಾಗಿ ಕಂಗೊಳಿಸಲಿದೆ ಎಂದ ಅವರು, ಹೈ.ಕ. ಪ್ರದೇಶ ಹಿಂದುಳಿಯಲು ನೆಲ, ಜಲ, ವನ ಹಾಗೂ ಜನರ ಮನಸ್ಥಿಯೂ ಒಳಗೊಂಡು ಸಾಕಷ್ಟ ರೀತಿಯ ಕಾರಣಗಳಿವೆ. ದೇಶ ಪ್ರದೇಶ ಅಭಿವೃದ್ಧಿಗೆ ಜನರ ಸಹಕಾರವು ನೀಡುವುದು ಅಗತ್ಯವಾಗಿದೆ. ಉದ್ಯಾನವನ ನಿರ್ಮಾಣಕ್ಕಾಗಿ ಕೇಂದ್ರೀಯ ವಿವಿನಿಂದ ೨೫ ಎಕರೆ ಜಮೀನಿ ಕೊಡಲು ಈ ಹಿಂದೆ ಒಪ್ಪಿಕೊಳ್ಳಲಾಗಿದೆ. ಆದರೆ ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಮುಂದಾಗದೆ ಇರುವುದು ಕಾರಣ ತಿಳಿದುಬಂದಿಲ್ಲ. ಗಿಡ, ಮರ ಬೆಳೆಸಲು ಇರುವ ಅವಕಾಶವನ್ನ ವಿವಿಯೊಂದಿಗೆ ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಕೊಂಡಾಪೂರ ಮಾತನಾಡಿ, ರಾಜ್ಯ ಸರ್ಕಾರ ಉದ್ಯೋಗ ಖಾತ್ರಿ ಅಡಿಯಲ್ಲಿ ಜಲಾಮೃತ ಹಾಗೂ ಸತ್ಯಮೇವ ಜಯತೆ ಅಡಿಯಲ್ಲಿ ಅರಣ್ಯಕಾರ್ಯಕ್ಕೆ ಮುಂದಾಗಿದೆ. ದೇಶದಲ್ಲಿ ರಾಜ್ಯ ೨ನೇ ಬರಪೀಡಿತ ರಾಜ್ಯ ಎಂಬ ಹಣಪಟ್ಟಿಕಟ್ಟಿಕೊಂಡಿದ್ದು, ಇದನ್ನು ಅಳಿಸಿ ಹಾಕಲು ಇಲ್ಲಿಂದಲೇ ಕಾರ್ಯ ಪ್ರವರ್ತಗೊಳಿಸುವ ನಿಟ್ಟಿನಲ್ಲಿ ವಿವಿ ಆವರಣದಲ್ಲಿ ನರೆಗಾ ಅಡಿಯಲ್ಲಿ ೪ ಸಾವಿರ ಸಸಿಗಳು ನೆಡಲಾಗುತ್ತಿದೆ ಎಂದರು.
ವೇದಿಕೆಯ ಮೇಲೆ ವಿವಿ ರಜಿಸ್ಟರ್ ಮುಸ್ತಾಕ್ ಅಹ್ಮೆದ್ ಪಟೇಲ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಗುರುಶಾಂತ ಪಾಟೀಲ ನಿಂಬಾಳ, ತಾಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಸದಸ್ಯ ಪ್ರಭು ಸರಸಂಬಿ, ಮುಖಂಡ ಅಶೋಕ ಗುತ್ತೇದಾರ, ಶ್ರೀಶೈಲ ಪಾಟೀಲ, ಉದ್ಯೋಗ ಖಾತ್ರಿ ಎಡಿ ಮೊಹ್ಮದ್ ಸಲಿಂ, ಅಂಗನವಾಡಿ ಮೇಲ್ವಿಚಾರಕಿ ಮಹಾದೇವಿ ವಚ್ಛೇ, ಸಾಮಾಜಿಕ ಅರಣ್ಯಾಧಿಕಾರಿ ವೀರಂದ್ರ ಸಿ.ವೈ ಮತ್ತಿತರರು ಉಪಸ್ಥಿತರಿದ್ದರು. ಗಡಗಂಚಿ ಪಿಡಿಒ ಶಿವಲಿಂಗಯ್ಯ ಸ್ವಾಮಿ ನಿರೂಪಿಸಿ ವಂದಿಸಿದರು. ಗ್ರಾಪಂ ಸದಸ್ಯರು, ಉದ್ಯೋಗ ಖಾತ್ರಿ ಕಾರ್ಮಿಕರು, ಶಾಲಾ ಮಕ್ಕಳು ಅರಣ್ಯ, ತೋಟಗಾರಿಕೆ ಅಧಿಕಾರಿಗಳು ಹಾಜರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

9 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

12 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

18 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

18 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

19 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago