ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣ್ಯಂ: ನೀಲಕಂಠರಾವ್ ಮೂಲಗೆ

0
42

ಕಲಬುರಗಿ: ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣ್ಯಂ ಗಾಯಕರಾಗಿಲ್ಲದೆ ನಾಯಕ ನಟನಾಗಿ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡು ದೇಶದಲ್ಲಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಬಹುಮುಖ ಪ್ರತಿಭೆಯಾಗಿ ತಾಳಿದರು. ಅವರೊಬ್ಬ ಮಹಾನ್ ಗಾಯಕರಾಗಿದ್ದರು ಎಂದು ಕಾಂಗ್ರೆಸ್ ಪಕ್ಷದ ದಕ್ಷಿಣ ಬ್ಲಾಕ್ ಅಧ್ಯಕ್ಷ ನೀಲಕಂಠರಾವ್ ಮೂಲಗೆ ಹೇಳಿದರು.

ಭಾನುವಾರ ಸಂಜೆ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾಮಂಡಳ ಸಭಾಂಗಣದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಎಸ್.ಪಿ.ಬಿ ಅವರಿಗೆ ಗೀತನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಬಾಲಸುಬ್ರಹ್ಮಣ್ಯಂ ಅವರು ಮೂಲತಃ ಆಂಧ್ರಪ್ರದೇಶ ದವರಾಗಿದ್ದರೂ ಒಬ್ಬ ಕಲಾವಿದನಾಗಿ ನಮ್ಮ ದೇಶದಲ್ಲಷ್ಟೇ ಅಲ್ಲ, ಇಡೀ ಪ್ರಪಂಚದ ವಿವಿಧ ದೇಶಗಳಲ್ಲೂ ತಮ್ಮ ಧ್ವನಿಯ ಮೂಲಕ ಪರಿಚಿತರಾಗಿದ್ದಾರೆ, ಕೇವಲ ಒಂದೇ ಭಾಷೆಯ ಸಂಗೀತಗಾರರಾಗಿಲ್ಲದೆ ಅವರು ಕನ್ನಡ , ತೆಲಗು ಸೇರಿದಂತೆ ವಿವಿಧ 16 ಭಾಷೆಗಳಲ್ಲೂ ಹಾಡಿದ್ದಾರೆ, ಜೊತೆಗೆ 72 ಸಿನಿಮಾಗಳಲ್ಲೂ ನಟಿಸಿರುವುದು ಅವರೊಂದು ಮೇರು ಪ್ರತಿಭೆ ಎಂದು ಹೇಳಲು ಎರಡು ಮಾತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರಾಜಶೇಖರ್ ಮಾಂಗ್ ಮಾತನಾಡಿ, ಎಸ್.ಪಿ ಅವರ ಕುರಿತು ಎಷ್ಟು ಹೇಳಿದರೂ ಸಾಲದು, ಅವರು ಕೋಟ್ಯಂತರ ಅಭಿಮಾನಿಗಳಲ್ಲಿ ಅಡಗಿದ್ದಾರೆ, ಅವರು ಹಾಡಿರುವ ಹಾಡುಗಳಲ್ಲಿ 2 ಸಾವಿರಕ್ಕೂ ಹೆಚ್ಚಿನ ಹಾಡುಗಳು ನಾನು ಸಂಗ್ರಹ ಮಾಡಿದ್ದೇನೆ.ಅವರಿಗೆ ಭಾರತ ರತ್ನ ಪ್ರಶಸ್ತಿ ಆಗಬೇಕು ಆಗಿತ್ತು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ ಮಾತನಾಡಿ, ಎಸ್. ಪಿ ಬಾಲಸುಬ್ರಹ್ಮಣ್ಯಂ ಅವರು ಪರಭಾಷೆಯವರಾಗಿದ್ದರೂ ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಿದ್ದರಲ್ಲದೇ, ಸಾವಿರಾರು ಹಾಡುಗಳು ಹಾಡಿರುವುದು ನಿಜಕ್ಕೂ ಇದೊಂದು ಭಾಷೆಯ ಮೇಲಿರುವ ಪ್ರೀತಿ ಎಂದು ತಿಳಿಸಿದರು. ಅಲ್ಲದೇ ಸುಬ್ರಹ್ಮಣ್ಯ ಅವರು ಮುಂದೊಂದು ಜನ್ಮ ವಿದ್ದರೆ ಕನ್ನಡ ನಾಡಿನಲ್ಲಿ ಹುಟ್ಟಿ ಬರುವುದಾಗಿ ಹೇಳಿದ್ದು ಅವರಿಗಿರುವ ಕನ್ನಡ ಮತ್ತು ಕನ್ನಡಿಗರ ಕಾಳಜಿ ತೋರಿಸುತ್ತದೆ ಎಂದರು.

ಗೀತನಮನ ಕಾರ್ಯಕ್ರಮದಲ್ಲಿ ಡಾ. ರಾಜಶೇಖರ್ ಮಾಂಗ್, ಚಾಮರಾಜ ದೊಡ್ಡಮನಿ, ಸಿದ್ಧಾರ್ಥ್ ಚಿಮ್ಮ ಇದಲಾಯಿ, ಕಿರಣ ಪಾಟೀಲ್, ಗೋಪಾಲ್ ಕುಲಕರ್ಣಿ, ಆಕಾಂಕ್ಷಾ ಪುರಾಣಿಕ,ರಮೇಶ,ಭೀಮರಾವ ಹೇಮನೂರ ಸೇರಿದಂತೆ ಇನ್ನಿತರರು ಹಾಡುಗಳನ್ನು ಹಾಡಿ ಗೀತ ನಮನಗಳನ್ನು ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾದ ಬಿ.ಎಚ್. ನಿರಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಸೋಮಶೇಖರ್ ಹಿರೇಮಠ, ವೆಂಕಟೇಶ್ ನಿರಡಗಿ, ಚಿ.ಸಿ ನಿಂಗಣ್ಣ, ಸಿ.ಎಸ್ ಮಾಲಿಪಾಟೀಲ್, ವಿಶ್ವನಾಥ ಭಕರೆ, ಎಸ್ ಎಲ್ ಪಾಟೀಲ್, ದಸ್ತಗೀರ್ ಯಳಸಂಗಿ, ವಿಠ್ಠಲ್ ಕಟ್ಟಿ ,ಬಿ ಎಸ್ ಮಾಲಿ ಪಾಟೀಲ,ಎಂ ಸಂಜೀವ,ಡಾ ಕೆ ಎಸ್ ಬಂಧು ಹಲವಾರು ಸಂಗೀತ ಆಸಕ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here