ಕಲಬುರಗಿ: ಅಧಿಕಾರದ ಹಿತಾಸ್ತಿಗಾಗಿ ಇಸ್ಲಾಂ ಧರ್ಮವನ್ನು ಉಗ್ರವಾದಕ್ಕೆ ತಳಕು ಹಾಕುವ ಮೂಲಕ ಶಾಂತಿ ಮತ್ತು ಸೌಹಾರ್ದತೆಯ ಪ್ರತಿಕವಾದ ಇಸ್ಲಾಂ ಧರ್ಮದ ತೇಜುವಧೆ ಮಾಡಲು ಯತ್ನಿಸಿದ್ದಾರೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಉತ್ತರ ಕರ್ನಾಟಕದ ಕಾರ್ಯದರ್ಶಿ ಡಾ. ಅಜಗರ್ ಚುಲಬುಲ್ ಹೇಳಿದ್ದಾರೆ.
ಅವರು ನಗರದ ಮಹೇಬು ಫಕ್ಷನ್ ಹಾಲ್ ನಲ್ಲಿ ಮರಕಜ್ ಸಿರತ್ ಕಮಿಟಿ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಸಂಯೋಕ್ತ ಆಶ್ರಯದಲ್ಲಿ ಆಯೋಜಿಸಿದ ಜಲಸೆ ಎ ರಹೆಮತುಲ್ ಆಲಾಮಿನ್ ಹಾಗೂ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಸ್ಲಾಂ ಧರ್ಮ ಯಾವತ್ತು ಉಗ್ರವಾದಕ್ಕೆ ಅವಕಾಶ ನೀಡಲ್ಲ, ಹಿಂಸಾಚಾರದ, ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಧಕ್ಕೆಯಾಗುವುದಕ್ಕೆ ಅವಕಾಶ ನೀಡಬಾರದು, ಇಸ್ಲಾಂ ಧರ್ಮ ಎಲ್ಲ ಧರ್ಮಗಳಿಗೆ ಗೌರಸುವುದು ಕಲಿಸಿಕೊಟ್ಟಿದೆ. ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಒಂದೇ ನಾಣ್ಯದ ಎರಡು ಮುಖಗಳು ಪ್ರೀತಿ ಪ್ರೇಮದಿಂದ ಬದುಕುವ ಮೂಲಕ ಕೋಮುವಾದಿಗಳ ಷಡಿಯಂತ್ರಗಳನ್ನು ವಿಫಲಗೊಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ್, ಖುರಾನ್ ಹಾಗೂ ಪೇನ್ ವಿತರಿಸಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವೀಜೆರಾದ ಸ್ಪರ್ಧಾರ್ಥಿಗಳಿಗೆ 7, 5, 3 ಹಾಗೂ 2 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಲೂರು ದರ್ಗಾದ ಪಿಠಾಧಿಪತಿಗಳಾದ ಹಜರತ್ ಸೈಯದ್ ಶಾಹ ಇಸ್ಲಾಮುದ್ದಿನ್ ಅಹ್ಮದ್ ಖಾದ್ರಿ, ಇಮ್ಲಿ ಮೊಹಲ್ಲಾದ ಪೀಠಾಧಿಪತಿಗಳಾದ ಹಜರತ್ ಸೈಯದ್ ಶಾಹ ಮೊಹಮ್ಮದ್ ಹಿದಾಯತುಲ್ಲಾ ಖಾದ್ರಿ, ತೆಲಂಗಾಣ ಕರ್ನೂಲ್ ದರ್ಆದ ಪಿಠಾಧಿಪತಿ ಹಜರತ್ ಸೈಯದ್ ಶಾಹ ಅಹ್ಮದ್ ಪಾಶಾ ಖಾದ್ರಿ ಹುಸೇನಿ, ಲಂಗೂಟ್ ಪೀರ್ ದರ್ಗಾದ ಪೀಠಾಧಿಪತಿ ಹಜರತ್ ಮಿನಹಾಜುದ್ದೀನ್ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದರು.
ಮೌಲಾನಾಗಳಾದ ಅಫಜಲ್ ಬರಕಾತ್, ಸೈಯದ್ ಹುಸೇನಿ, ಶರೀಫ್ ಮಜಹರಿ, ಮೌಲಾನಾ ಮುಫ್ತಿ ಉವೇಸ್ ಖಾದ್ರಿ, ಇಸ್ಮಾಯಿಲ್ ಮುದ್ದರ್ಸಿ, ಮುಫ್ತಿ ಶಮಶುದ್ದಿನ್, ಮೌಲಾನಾ ಶಮ್ಸ್ ಆಲಮ್, ಮುಫ್ತಿ ರುಕ್ನೊದ್ದೀನ್, ಮೊಹಮ್ಮದ್ ಜಿಲಾನಿ, ಅಫತಾಬ್ ನೂರಿ, ಸೈಯದ್ ರೌಫ್ ಪಾಶಾ, ಸೈಯದ್ ಕಾಶಿಫ್ ಪಾಶಾ, ಜಾವೀದ್ ಆಲಮ್ ಖಾಸ್ಮಿ, ಯುಸುಫ್ ಖುರೇಶಿ ಅವರ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಮೌಲಾನಾ ಖಾಸ್ಮಿ ಸ್ವಾಗತಿಸಿದರು. ಸಮಿತಿಯ ಸದಸ್ಯರಾದ ರಹೀಮ್ ಮಿರ್ಚಿ ಹಾಗೂ ಶಫಿಕ್ ಖಾಸ್ಮಿ ವಂದಿಸಿದರು.
ಹಾಜಿ ಇಲಿಯಾಸ್ ಸೇಠ್ ಭಾಗವಾನ್, ನಾಸೀರ್ ಹುಸೇನ್ ಉಸ್ತಾದ್, ಮಾಜಿದ್ ಪ್ಯಾರೆ, ಅಭಿಯಂತಕರಾದ ಖರ್ಶಿದ್ ಮಾಜಿ ಮಹಾಪೌರರಾದ ಮಹ್ಮದ್ ಜಾವೇದ್, ಮುಸ್ತಾಕ್ ಅಹ್ಮದ್ , ಮೊಹಮ್ಮದ್ ಮೆಹಮೂದ್, ಇಫ್ತೆಖಾರ್ ಅಫಜಲಪುರ, ತಜಮುಲ್ ಹುಸೇನ್, ಹೈದರ ಅಲಿ ಭಾಗಬಾನ್ ಸೇರಿ ಪ್ರಮುಖರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…