ಕಾಳಗಿ: ಐತಿಹಾಸಿಕ ಸಾಹಿತ್ಯಿಕ ಪರಂಪರೆ ಹೊಂದಿರುವ ಕಾಳಗಿ ಪಟ್ಟಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಜನವರಿ ತಿಂಗಳಲ್ಲಿ ಒಂದು ದಿನದ ‘ಮನ್ನೆದಡಿ ಸಾಸಿರ ನಾಡು ಉತ್ಸವ-೨೦೨೧’ ವನ್ನು ನಡೆಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪಿ ಹೇಳಿದರು.
ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಜಿಲ್ಲೆಯಾದ್ಯಂತ ವರ್ಷಪೂರ್ತಿಯಾಗಿ ಹಮ್ಮಿಕೊಂಡಿರುವ ‘ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೆ’ ಕನ್ನಡಾಭಿಮಾನದ ಅಭಿಯಾನವನ್ನು ಗುರುವಾರ ಕಾಳಗಿ ಪಟ್ಟಣದ ಬಸ್ ನಿಲ್ದಾಣ ಬಳಿ ನಡೆಸಿ ಮಾತನಾಡಿದ ಅವರು, ಈ ನೆಲದ ಐತಿಹಾಸಿಕ ಪರಂಪರೆ ಇಂದಿನ ಯುವ ಜನತೆಗೆ ತಿಳಿಸುವ ಉದ್ದೇಶ ಈ ಉತ್ಸವದ್ದಾಗಿದೆ. ಭಾರತೀಯ ಭಾಷೆಗಳಲ್ಲಿಯೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವವನ್ನು ಪ್ರಕಟಿಸಿದಂತಿದೆ. ಇಂಥ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇಂದಿನ ಮತ್ತು ಮುಂದಿನ ಕನ್ನಡಿಗರ ಮೇಲಿದೆ ಎಂದರು.
ಸಂಶೋಧಕ ಮುಡುಬಿ ಗುಂಡೇರಾವ ಮಾತನಾಡಿ, ಕನ್ನಡದ ಸೇವೆಯನ್ನು ಸರಕಾರ ಅಥವಾ ಇನ್ಯಾರೋ ಮಾಡಲಿ ಎಂಬ ಮನೋಭಾವ ಬೇಡ. ನಾನೇ ಕನ್ನಡದ ಕೆಲಸ ಮಾಡಬೆಕು. ಕನ್ನಡದ ಭಾಷೆ, ಸಂಸ್ಕೃತಿ, ನೆಲ-ಜಲದ ಹಿತವನ್ನು ಕಾಯಬೇಕು ಎಂಬ ಸಂಕಲ್ಪವನ್ನು ಇಂದಿನ ದಿನ ನಾವೆಲ್ಲರೂ ಕೂಡಿ ಮಾಡಬೇಕಾಗಿದೆ. ನಾಡು-ನುಡಿಯ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿರುವ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರೊಬ್ಬ ಜಿಲ್ಲೆಯ ಸಾಂಸ್ಕೃತಿಕ ಲೋಕದ ರಾಯಭಾರಿಯಂತೆ ಎಂದು ಮನದುಂಬಿ ಹೇಳಿದರು.
ಜಿಪಂ ಸದಸ್ಯರಾದ ರಾಮಲಿಂಗರೆಡ್ಡಿ ದೇಶಮುಖ, ಸಂಜೀವನ್ ಯಾಕಾಪುರ, ಸಾಹಿತ್ಯ ಪ್ರೇರಕರಾದ ಶಿವಶರಣಪ್ಪ ಕಮಲಾಪುರ, ಕಲ್ಯಾಣಕುಮಾರ ಶೀಲವಂತ ಮಾತನಾಡಿ, ಸಾಹಿತ್ಯ ಪ್ರೀತಿ, ಕನ್ನಡದ ಅಭಿಮಾನ, ಸಾಂಸ್ಕೃತಿಕ ಪ್ರಜ್ಞೆಗಳನ್ನು ನಮ್ಮಲ್ಲಿ ಬಿತ್ತಿ ಬೆಳೆಸುವ ಉದ್ದೇಶದೊಂದಿಗೆ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರು ಹಮ್ಮಿಕೊಳ್ಳುತ್ತಿರುವ ‘ಮನ್ನೆದಡಿ ಸಾಸಿರ ನಾಡು ಉತ್ಸವ’ ಕ್ಕೆ ಎಲ್ಲರೂ ಒಟ್ಟೂಗೂಡಿ ಶ್ರಮಿಸಿ-ಯಶಸ್ವಿಗೊಳಿಸೋಣ ಎಂದರು.
ಪ್ರಮುಖರಾದ ಹಣಮಂತ ಕಣ್ಣಿ, ವಿಶ್ವನಾಥ ವನಮಾಲಿ, ಗುರುನಂದೇಶ ಕೋಣಿನ್, ಪರಮೇಶ್ವರ ಮಡಿವಾಳ, ರಮೇಶ ಕಿಟ್ಟದ್, ರಾಜೇಂದ್ರ ಬಾಬು ಹೀರಾಪೂರ, ಮಲ್ಲಿಕಾರ್ಜುನ ಪಾಟೀಲ ಬೋಳೆವಾಡ, ಪರಮೇಶ್ವರ ಕಟ್ಟಿಮನಿ, ಬಾಬು ನಾಟೀಕರ್, ದತ್ತು ಗುತ್ತೇದಾರ, ಡಾ.ಶಿವಶರಣಪ್ಪ ಮೋತಕಪಲ್ಲಿ, ಪ್ರೊ.ಜಗನ್ನಾಥ ಕುಕ್ಕುಡಿ, ರೇವಣಸಿದ್ದಪ್ಪ ಬಡಾ, ಶಿವಶಂಕರ ಪೇಚೆಟ್ಟಿ, ಮಲ್ಲಿಕಾರ್ಜುನ ಮಠ, ಸಂತೋಷ ನರನಾಳ, ಶಿವರಾಜ ಅಂಡಗಿ, ಅರವಿಂದ ಗೋಟೂರ, ಶರಣಬಸವ ಜಂಗಿನಮಠ, ಶ್ರೀಕಾಂತ ಪಾಟೀಲ ತಿಳಗೂಳ, ಮಂಜುಳಾ ಪಾಟೀಲ, ನೀಲಾಂಬಿಕಾ ಚೌಕಿಮಠ, ಮಹಾದೇವ ಬಡಾ, ಶಿವಾನಂದ ಮಠಪತಿ, ಬಸವರಾಜ ಧೂಳಾಗುಂಡಿ, ರಾಜು ಹೆಬ್ಬಾಳ, ಸುಭಾಷ ಪಾಟೀಲ ತೆಲಾಕುಣಿ, ವಿಶ್ವನಾಥ ಸುಲೇಪೇಟ್ ಕೋಡ್ಲಿ ಸೇರಿದಂತೆ ಅನೇಕರು ಪಾಲ್ಗೊಂಡು ಸಾರ್ವಜನಿಕರಿಗೆ ಭಾಷಾ ಶ್ರೀಮಂತಿಕೆಯ ವಿಷಯಗಳನ್ನೊಳಗೊಂಡ ಕರಪತ್ರಗಳನ್ನು ನೀಡಿ ಕನ್ನಡಾಭಿಮಾನವನ್ನು ಮೂಡಿಸಿದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…