ಬೆಂಗಳೂರು: ಪತ್ರಕರ್ತ ಆಶಿಕ್ ಮುಲ್ಕಿಯವರ ಚೊಚ್ಚಲ ಕವನ ಸಂಕಲನ ‘ಗೀಚಿಟ್ಟೆ’ ಇದೇ 16 ರಂದು ಸಂಜೆ 5ಕ್ಕೆ ಲೋಕಾರ್ಪಣೆ ಮಾಡಲಿದ್ದು ಬರಹಗಾರ ಲೇಖಕ ಆಶಿಕ್ ಮುಲ್ಕಿ ಅವರು ತಿಳಿಸಿದ್ದಾರೆ.
ಭಾನುವಾರ 16 ರಂದು ಬೆಂಗಳೂರುನ ಸಂಸ ಬಯಲು ರಂಗ ಮಂದಿರದಲ್ಲಿ ಕಾರ್ಯಕ್ರಮ ಅಯೋಜಿಸಲಾಗಿದ್ದು, ಗೀಚಿಟ್ಟ ಕವನ ಸಂಕಲನ ಪುಸ್ತಕ ಪ್ರೀತಿಯಿಂದ ರವಿ ಬೆಳಗೆರೆ ಲೋಕರ್ಪಣೆ ವಾಗಲಿದ್ದು, ಲೇಖಕರ ತಾಯಿ ಆಯಿಷಾ ಅಬು ವಿಷೇಶ ಅತಿಥಿಯಾಗಿ ಆಗಮಿಸಲಿದ್ದು, ಹಿರಿಯ ಪತ್ರಕರ್ತ ಸಮೀವುಲ್ಲಾ ಬೆಂಗಳೂರು, ಕನ್ನಡ ಅಧ್ಯಾಪಕ ಮಂಜು ಬಶೀರ್, ಓ ಮನಸೇ ಸಹ ಸಂಪಾದಕರಾದ ಭಾವನಾ ಬೆಳಗೆರೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕವನ ಸಂಕಲನ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಬದುಕು ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಬಳಗ ಸೇರಿದಂತೆ ಮುಂತಾದ ಲೇಖಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಸಶ್ವಿಗೊಳಿಸಬೇಕೆಂದು ಲೇಖಕ ಆಶಿಕ್ ಮುಲ್ಕಿ ಅವರು ಪ್ರೀತಿಯಿಂದ ಆಮಂತ್ರಿಸಿ ಮನವಿ ಮಾಡಿದ್ದಾರೆ.