ಸುರಪುರ: ನಗರದ ಶೆಟ್ಟಿ ಮೊಹಲ್ಲಾದಲ್ಲಿರುವ ಐತಿಹಾಸಿಕ ಸೂಗುರೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಕಾರ್ತಿಕೋತ್ಸವ ನಿಮಿತ್ತ ಸಂಗೀತ ದರ್ಬಾರ ಅಂಗವಾಗಿ ಅಹೋರಾತ್ರಿ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಹುಣ್ಣಿಮೆಯಿಂದ ಪ್ರಾರಂಭಗೊಂಡ ಕಾರ್ತಿಕೋತ್ಸವ ಕಾರ್ಯಕ್ರಮ ಷಷ್ಠಿ ದಿನದಂದು ಕಳಸಾರೋಹಣದೊಂದಿಗೆ ಸಂಪನ್ನಗೊಂಡಿತು, ಕೊನೆಯ ದಿನದಂದು ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು, ಸಂಗೀತ ದರ್ಬಾರ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ದೇವಸ್ಥಾನದ ಹಿರಿಯ ಅರ್ಚಕರಾದ ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ ಈ ಸಂದರ್ಭದಲ್ಲಿ ಮಾತನಾಡಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುರಪುರ ಸಂಸ್ಥಾನದ ವತನದಾರರಾದ ಸರಪಟ್ಟಣಶೆಟ್ಟಿ ಮನೆತನದವರಿಂದ ಪ್ರತಿಷ್ಠಾಪಿಸಲ್ಪಟ್ಟ ಸೂಗುರೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಅಂಗವಾಗಿ ಪ್ರತಿ ವರ್ಷ ವಿವಿಧ ಧಾರ್ಮಿಕ ಹಾಗೂ ನಾಡಿನ ಅನೇಕ ಜನ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ ಎಂದು ಹೇಳಿದರು.
ಪುರಾಣ, ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮಗಳು ದೇವರಿಗೆ ಭಕ್ತಿಯನ್ನು ಸಮರ್ಪಿಸಿ ದೇವರನ್ನು ಒಲಿಸಿಕೊಂಡು ಸಾಕ್ಷಾತ್ಕಾರಿಸಿಕೊಳ್ಳಲು ಇರುವ ಮಾರ್ಗ ಆ ಮೂಲಕ ಭಗವಂತನ ಮಹಿಮೆಯನ್ನು ನಾವೆಲ್ಲರೂ ತಿಳಿದುಕೊಂಡು ಸರಿಯಾದ ಮಾರ್ಗದಲ್ಲಿ ನಡೆದು ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣ ಎಂದು ಹೇಳಿದರು.
ಸುರಪುರ ಸಂಸ್ಥಾನದ ಕಾಲದಿಂದಲೂ ಇಲ್ಲಿನ ಸಂಸ್ಕೃತಿ,ಪರಂಪರೆಗಳನ್ನು ಉಳಿಸಿಕೊಂಡುಬರುವ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು ಅನೇಕ ಕಲಾವಿದರಿಗೆ,ಪಂಡಿತರಿಗೆ,ಶರಣರಿಗೆ ರಾಜಾಶ್ರಯ ನೀಡಲಾಗಿತ್ತು ಈ ಪರಂಪರೆಯನ್ನು ಇವತ್ತಿಗೂ ಮುಂದುವರೆಸಿಕೊಂಡು ಹೋಗಲಾತ್ತಿದ್ದು ಪ್ರತಿವರ್ಷ ವಿವಿಧ ಕಡೆಗಳಿಂದ ಸಂಗೀತ ಕಲಾವಿದರನ್ನು ಆಮಂತ್ರಿಸಿ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಾ ಬಂದಿದೆ ಎಂದು ಹೇಳಿದರು.
ಪ್ರಮುಖರಾದ ಸುನೀಲ್ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶರಣುಕುಮಾರ ಕೊಪ್ಪಳ,ಶಿವಶರಣಯ್ಯ ಬಳ್ಳುಂಡಗಿಮಠ,ಮೋಹನರಾವ ಮಾಳದಕರ ಆಗಮಿಸಿದ್ದರು, ಸಿದ್ದಲಿಂಗಯ್ಯ ಕಡ್ಲಪ್ಪನವರ ಮಠ, ಚಂದ್ರಶೇಖರ ಅಜಾದ ಪಾಣಿ, ಸೂಗುರೇಶ ಮಡ್ಡಿ ಉಪಸ್ಥಿತರಿದ್ದರು.
ಸಂಗೀತ ದರ್ಬಾರ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಶಿವಲಿಂಗಯ್ಯ ಬಳ್ಳುಂಡಗಿಮಠ,ನರಸಿಂಹಾಚಾರ್ಯ ಭಂಡಿ,ಪ್ರಾಣೇಶರಾವ ಕುಲಕರ್ಣಿ,ಶಿವಶಂಕರ ಅಲ್ಲೂರ, ಶರಣು ಮಾಲಗತ್ತಿ,ಸುರೇಶ ಅಂಬೂರೆ,ಉಮೇಶ ಯಾದವ್, ರಮೇಶ ಕುಲಕರ್ಣಿ, ಯಮುನೇಶ ಹೆಗ್ಗನದೊಡ್ಡಿ, ಚಂದ್ರಹಾಸ ಮಿಟ್ಟಾ, ಮಹಾಂತೇಶ ಶಹಾಪುರಕರ, ಗುರುನಾಥರೆಡ್ಡಿ, ತಿಮ್ಮಯ್ಯ ಪೋತಲಕರ, ಪದ್ಮಾಕ್ಷಿ, ವಿಜಯಲಕ್ಷ್ಮೀ ಯಾದವ್ ಇತರರು ಭಾಗವಹಿಸಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…