ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ನೀರಿಗಾಗಿ ಪರದಾಟ

0
132
  • ಸಾಜಿದ್ ಅಲಿ

ಕಲಬುರಗಿ: ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಕುಡಿಯುವ ನೀರೀಗಾಗಿ ಮಕ್ಕಳು ಮಹಿಳೆಯರು ದಿನವಿಡೀ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಂದ ಸುಮಾರು 20 ಕಿ.ಮಿ ದೂರದಲ್ಲಿರುವ ಮಡಿಯಾಳ ಗ್ರಾಮದಲ್ಲಿ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮ ಇದ್ದಾಗಿದ್ದು, ಗ್ರಾಮದ ಎರಡು ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ ಆದರೆ ಈ ಘಟಕದಿಂದ ಕುಡಿಯು ನೀರು ಮಾತ್ರ ಇದುವರೆಗೆ ನೀಡುತಿಲ್ಲ ಎಂದು ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಭಿಮಾಶಂಕರ ಮಾಡಿಯಾಳ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಜಿಲ್ಲಾಧಿಕಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಿಸುವ ನೀಟ್ಟಿನಲ್ಲಿ ಜಿಲ್ಲಾಧಿಕಾರಿ, ತಾಕೀತು ಮಾಡಿದ್ದರೂ, ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದ ನಿವಾಸಿಗಳು ನೀರಿಲ್ಲದ ಜನರ ಜೀವನ ಕಂಗೇಟಿದಾರೆಂದು ಮಾಡಿಯಾಳ ಆರೋಪಿಸಿದ್ದಾರೆ.

ಗ್ರಾಮದ ನಿವಾಸಿಗಳು ಹನಿ ಹನಿ ನೀರಿಗಾಗಿ ದಿನವಿಡಿ ಪರದಾಡುವಂತ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ. ಶಾಸಕ ಹಾಗೂ ಜಿಲ್ಲಾ ಪಂ. ಸದಸ್ಯರು ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ನೀರಿನ ಸಮಸ್ಯೆ ಕುರಿತು ಯಾವುದೇ  ರೀತಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದ ಜನರು ಪ್ರತಿ ದಿನ ನೀರಿಗಾಗಿ ಜಗಳ ಹಾಗೂ ಕಿತ್ತಾಟ ನಡೆಸುವಂತಹದಾಗಿದೆ ಎಂದು ಅವರು ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರದಲ್ಲಿ ಪ್ರಾರಂಭ ಮಾಡಿ, ನೀರಿನ ಸಮಸ್ಯೆ ನಿವಾರಿಸು ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೈಗೊಳ್ಳಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here