ಕೊಡಗು: ಇಲಿನ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ, ಹತ್ಯೆಗೈದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಬಾಳೆಲೆಯಲ್ಲಿ ನಡೆದಿದೆ.
ಆದೇಂಗಡ ಆಶಾ ಕಾವೇರಮ್ಮ (45) ಮೇಲೆ ಗುಂಡಿನ ದಾಳಿ ನಡೆದಿದ್ದು, ಆಶಾ ಲಯನ್ಸ್ ಶಾಲಾ ಶಿಕ್ಷಕಿ ಎಂದು ಗುರುತಿಸಲಾಗಿದೆ. ಇನ್ನು ಗುಂಡಿನ ದಾಳಿ ನಡೆಸಿದ್ದ ಆರೋಪಿ ಮಾಚಿಮಾಡ ಜಗದೀಶ್ ಕೊಲೆ ಮಾಡಿ, ತಾನು ಘಟನಾ ನಡೆದ ಸ್ಥಳದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಗದೀಶ್ ಬಲ್ಯಮುಂಡೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಘಟನೆಯ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷಕಿಯ ರಕ್ಷಣೆಗೆ ಮುಂದಾಗಿದ್ದ ಬಾಳೆಲೆ ವಿಜಯಲಕ್ಷ್ಮಿ, ದಿನೇಶ್ ಮತ್ತು ಕಾರ್ಮಿಕ ರಾಜುಗೂ ಕೂಡ ಗುಂಡು ತಗುಲಿ ಗಾಯಗಳಾಗಿವೆ. ಬಾಳೆಲೆ ಉಪ ಪೊಲೀಸ್ ಠಾಣೆ ಮುಂಭಾಗ ನಡೆದ ದುರ್ಘಟನೆ ಸಂಭವಿಸಿದ್ದು,
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.