ಕಲಬುರಗಿ : ಜಿಲ್ಲಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ ಚಟ್ನಳ್ಳಿ ಅವರನ್ನು ನೇಮಿಸಲಾಗಿದೆ.
ಕಳೆದ ತಿಂಗಳು ಡಿಸೆಂಬರ್ ೨೮-೨೯ ರಂದು ದೊಡ್ಡ ಬಳ್ಳಾಪುರದಲ್ಲಿ ನಡೆದ ಸಂಘದ ಉದ್ಘಾಟನೆಯ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತಿರಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ನಾಗಮೋಹನದಾಸ ಹಾಗೂ ಇಸ್ರೋದ ವಿಶ್ರಾಂತ ಅಧ್ಯಕ್ಷ ಎ.ಎಸ್. ಕಿರಣಕುಮಾರ ಹಾಗೂ ಸಂಘಟನೆಯ ಅಧ್ಯಕ್ಷರಾದ ಹುಲಕಲ್ ನಟರಾಜ ಅವರು ನೇಮಕ ಮಾಡಿ ಆದೇಶ ನೀಡಲಾಗಿದೆ.
ಜನ ಮಾನಸದಲ್ಲಿ ದೇವರು ಹಾಗೂ ಧರ್ಮಗಳ ಹೆಸರಿನ ಮೇಲೆ ನಡೆದಿರುವ ಮೌಢ್ಯಗಳನ್ನು ಬಯಲು ಮಾಡುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ವೈಜ್ಞಾನಿಕ ಅರಿವು ಹಾಗೂ ಸಂಶೋಧನೆ ತೊಡಗುವುದೆ ಸಂಘಟನೆಯ ಗುರಿ ಎಂದು ತಿಳಿಸಲಾಗಿದೆ.
ಸಂವಿಧಾನ ಭಾರತದ ನಾಗರಿಕರಿಗೆ ನೀಡಿದ ೧೫/ಎ ಪರಿಚೇಧದ ಅನ್ವಯ ಜನರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವುದು, ಮೌಢ್ಯ ಮುಕ್ತ ಜೀವನ ನಡೆಸಲು ಸಹಕರಿಸುವುದೆ ಸಂಘದ ಮುಖ್ಯ ಗುರಿಯಾಗಿದೆ ಎಂದು ಕಲಬುರ್ಗಿ ಜಿಲ್ಲಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಕಾಳಜಿ ಇರುವ, ವೈಜ್ಞಾನಿಕ – ವೈಚಾರಿಕ ನಿಲುವು ಉಳ್ಳ ಆಸಕ್ತರು ಯಾರಾದರೂ ಸಂಘಕ್ಕೆ 250/ರೂ ಶುಲ್ಕ ಕಟ್ಟುವ ಮೂಲಕ ಸದಸ್ಯರಾಗಬಹುದು ಎಂದವರು ತಿಳಿಸಿದರು. ಆಸಕ್ತರು : +91 99868 49011 ಸಂಪರ್ಕಿಸಬೇಕೆಂದು ಕೋರಿದ್ದಾರೆ.