ಕಲಬುರಗಿ: ಸತತ ಮೂರು ವರ್ಷಗಳಿಂದ ಬರಗಾಲದಿಂದ ತತ್ತರಿಸಿರುವ ಉತ್ತರ ಕರ್ನಾಟಕವು ಮುಂಗಾರು ಮತ್ತು ಹಿಂಗಾರಿನಲ್ಲಿಯೂ ರೈತರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಅದರ ಮಧ್ಯೆ ಪ್ರವಾಹದಿಂದಾಗಿಯೂ ಭಾರಿ ಹೊಡೆತವನ್ನು ಅನುಭವಿಸಿ ಉತ್ಪಾದನೆಯಲ್ಲಿ ತೀವ್ರವಾದ ಹಿನ್ನಡೆಯಾಗಿದೆ. ಈ ಹಿನ್ನಲ್ಲೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 10 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ ಸಂಪೂರ್ಣ ಬೆಳೆಯನ್ನು ಸರ್ಕಾರವೇ ಖರೀದಿಸಬೇಕು ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಕಳೆದ ವರ್ಷ ೩೫.೩೫ ಲಕ್ಷ ಕ್ವಿಟಂಲ್ ತೊಗರಿಯನ್ನು ಕಲಬುರಗಿ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲಾಗಿತ್ತು. ಅದರಲ್ಲಿ ಸರ್ಕಾರವು ಖರೀದಿ ಕೇಂದ್ರಗಳ ಮೂಲಕ ೧೩.೧ ಲಕ್ಷ ಕ್ವಿಂಟಲ್ ಬೇಳೆಯನ್ನು ಖರೀದಿಸಿತ್ತು. ಆ ಸಂದರ್ಭದಲ್ಲಿ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಸಹಿತ ೬೨೦೦ ರೂ. ಪ್ರತಿ ಕ್ವಿಂಟಲ್‌ನಂತೆ ಖರೀದಿಸಿತ್ತು. ಆದರೆ ಈ ವರ್ಷ ಸತತ ಮಳೆಯಿಂದಾಗಿ ಅತಿವೃಷ್ಠಯಿಂದ ಸುಮಾರು ೩ ಲಕ್ಷ ಹೆಕ್ಟೆರ್ ಭೂಮಿಯಷ್ಟು ಬೆಳೆ ನಷ್ಟವಾಗಿದ್ದು ಇಳುವರಿಯಲ್ಲಿ ಅತಿಯಾದ ಕುಸಿತವಾಗಿದೆ. ಹೆಚ್ಚು ಕಡಿಮೆ ೭೦% ದಷ್ಟು ಬೆಳೆನಷ್ಟವಾಗಿ ರೈತರು ಆತಂಕದಲ್ಲಿದ್ದಾರೆ ಎಂದು ಗಣಪತರಾವ ಕೆ ಮಾನೆ ತಿಳಿಸಿದರು.
ಸರ್ಕಾರವು ರೈತರ ಸಹಾಯಕ್ಕೆ ಬಾರದಿರುವುದು ರೈತರು ಆಕ್ರೋಶಪಡುವಂತಾಗಿದೆ. ಗುಳೆಹೋಗುವುದನ್ನು ತಪ್ಪಿಸುವಲ್ಲಿ ಹಾಗೂ ಉದ್ಯೋಗಖಾತ್ರಿಯನ್ನು ಕಲ್ಪಿಸಿ ರೈತರಿಗೆ ಆಸರೆ ನೀಡುವಲ್ಲಿಯೂ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಈ ಸಂದರ್ಭದಲ್ಲಿ ಈ ಸಾಲಿನ ತೊಗರಿಗೆ ಉತ್ತಮ ದರ ಸಿಗುವುದೆಂದು ರೈತರು ಭಾವಿಸಿರುವಾಗಲೇ ಪ್ರೋತ್ಸಾಹಧನವನ್ನು ನೀಡದಿರುವ ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಿಪಡಿಸಿದರು.
ಪ್ರಸಕ್ತ ಕಠಿಣ ಪರಿಸ್ಥಿತಿಯಲ್ಲಿ ರೈತರ ತೊಗರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಸಮರ್ಪಕ ಬೆಂಬಲ ಬೆಲೆ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಉತ್ಪಾದನೆಯಾದ ಪೂರ್ತಿ ತೊಗರಿಯನ್ನು ಸರ್ಕಾರವೇ ಖರೀದಿಸಬೇಕು. ಈ ಖರೀದಿಗೆ ರಶೀದಿಯನ್ನು ಕೊಡಬೇಕು ಹಾಗೂ ಖರೀದಿಸಿದ ತೊಗರಿಯ ಹಣವನ್ನು ಕೂಡಲೇ ರೈತರಿಗೆ ಪಾವತಿಸಬೇಕು. ಪಂಚಾಯತ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನೂಕೂಲವಾಗುವಂತೆ ಪಾರದರ್ಶಕ ಖರೀದಿಯನ್ನು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಆಗ್ರಹಿಸಿದರು.
ಗುಂಡಣ್ಣ ಕುಂಬಾರ್, ರಾಜೇಂದ್ರ ಅತನೂರ, ಮಲ್ಲಣ್ಣ ದಂಡಬಾ, ವಿಠ್ಠಲ್ ರಾಠೋಡ್, ಶಿವಕುಮಾರ ಆಂದೋಲಾ, ಗೌತಮ್ ಪರತೂರಕರ್, ಹರೀಶ್ ಸಂಗಾಣಿ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…