ಬೆಂಗಳೂರು: ರಾಜ್ಯದ ಯುವಜನತೆಯನ್ನು ಸರ್ವತೋಮುಖವಾಗಿ ಆಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸ್ವಾಮಿ ವಿವೇಕಾನಂದ ಯುವಸಬಲೀಕರಣ ನಿಗಮ ಸ್ಥಾಪಿಸಬೇಕೆಂದು ಯೂತ್ ಯುನೈಟೆಡ್ ಫಾರ್ ಗುಡ್ ಅಕ್ಷನ್ ಅಧ್ಯಕ್ಷ ಕಾರ್ತಿಕ್ ಮನವಿ ಮಾಡಿದ್ದಾರೆ.
ಈ ಕುರಿತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಮನವಿ ಪತ್ರ ಸಲ್ಲಿಸಿದ ಅವರು, ರಾಜ್ಯ ಸರಕಾರ ೨೦೧೨ರಲ್ಲಿ ಜಾರಿಗೆ ತಂದಿದ್ದ ಕರ್ನಾಟಕ ರಾಜ್ಯ ಯುವ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವ ಉದ್ದೇಶದಿಂದ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪಿಸುವಂತೆ ಶಿಫಾರಸು ಮಾಡಿತ್ತು.
ಆದರೆ, ಇದುವರೆಗೂ ನಿಗಮದ ಸ್ಥಾಪನೆಗೆ ಆಸಕ್ತಿ ವಹಿಸದಿರುವುದು ರಾಜ್ಯದ ಯುವಜನ ಸಬಲೀಕರಣ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ. ಯುವ ನಿಗಮವು ಸ್ಥಾಪನೆಯಾದರೆ ರಾಜ್ಯದ ೨.೬ಕೋಟಿಗೂ ಮೀರಿದ ಜನರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.