ಬಿಸಿ ಬಿಸಿ ಸುದ್ದಿ

ಕುಟುಂಬ ಸಂಬಂಧ ಜೋಡಿಸುವುದರ ಶ್ರೇಷ್ಠತೆಗಳು

1. ಕುಟುಂಬ ಸ೦ಬ೦ಧ ಜೋಡಿಸುವುದು ಅಲ್ಲಾಹು ಮತ್ತು ಅಂತ್ಯ ದಿನದಲ್ಲಿರುವ ವಿಶ್ವಾಸದ ದ್ಯೋತಕವಾಗಿದೆ. “ಅಬೂಹುರೈರ(ರ) ರಿಂದ ವರದಿ : ಪ್ರವಾದಿ (ಸ) ರವರು ಹೇಳಿದರು: ಯಾರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೋ ಅವರು ತಮ್ಮ ಕುಟುಂಬ ಸಂಬಂಧವನ್ನು ಜೋಡಿಸಲಿ.” [ಅಲ್ ಬುಖಾರಿ)

2. ಕುಟುಂಬ ಸ೦ಬ೦ಧ ಜೋಡಿಸುವುದರಿಂದ ಆಯುಷ್ಯ ಧೀರ್ಥವಾಗುತ್ತದೆ ಮತ್ತು ಜೀವನಾಧಾರ ವಿಶಾಲವಾಗುತ್ತದೆ. “ಅನಸ್ ಇಬ್ಬ್ ಮಾಲಿಕ್(ರ)ರಿ೦ದ ವರದಿ : ಪವಾದೀಸ) ಹೇಳಿದರು: ಯಾರು ತಮ್ಮ ಜೀವನಾಧಾರದಲ್ಲಿ ವಿಸ್ತಾರ ವುಂಟಾಗಲು ಆಯುಷ್ಯ ಧೀರ್ಥವಾಗಲು ಇಷ್ಟಪಡುತ್ತಾರೋ ಅವರು ತಮ್ಮ ಕುಟುಂಬ ಸ೦ಬ೦ಧವನ್ನು ಜೋಡಿಸಲಿ.” [ಅಲ್ಬುಖಾರಿ ಮತ್ತು ಮುಸ್ಲಿಮ್)

3. ಕುಟುಂಬ ಸ೦ಬ೦ಧ ಜೋಡಿಸುವವರೊಡನೆ ಅಲ್ಲಾಹು ಸಂಬಂಧ ಜೋಡಿಸುತ್ತಾನೆ. “ಅಬೂ ಹುರೈರ(ರ)ರಿ೦ದ ವರದಿ: ಪ್ರವಾದಿ (ಸ)ರವರು ಹೇಳಿದರು: ಅಲ್ಲಾಹು ಸೃಷ್ಟಿಗಳನ್ನು ಸೃಷ್ಟಿಸಿ, ಸೃಷ್ಟಿಕಾರ್ಯವನ್ನು ಮುಗಿಸಿದಾಗ ಕುಟುಂಬ ಸಂಬಂಧವು ಹೇಳಿತು: ಓ ಅಲ್ಲಾಹ್! ಕುಟುಂಬ ಸಂಬಂಧ ಕಡಿಯುವುದರ ಬಗ್ಗೆ ನಾನು ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ಆಗ ಅಲ್ಲಾಹು ಹೇಳಿದನು: ಸರಿ! ಹಾಗಾದರೆ ಯಾರು ನಿನ್ನನ್ನು ಜೋಡಿಸುತ್ತಾರೋ ಅವರನ್ನು ನಾನೂ ಜೋಡಿಸುತ್ತೇನೆ ಮತ್ತು ಯಾರು ನಿನ್ನನ್ನ ಸಂಬಂಧ ಕಡಿಯು- ತ್ತಾರೋ ಅವರನ್ನು ನಾನೂ ಸಂಬಂಧ ಕಡಿಯುತ್ತೇನೆ.

ಈಗ ನಿನಗೆ ಸಂತೋಷವಲ್ಲವೇ? ಕುಟುಂಬ ಸಂಬಂಧ ಹೇಳಿತು: ಓ ನನ್ನ ರಬ್ಬೇ! ಹೌದು. ಅಲ್ಲಾಹು ಹೇಳಿದನು: ಅದು ನಿನಗಾಗಿದೆ.” [ಅಲ್ ಬುಖಾರಿ ಮತ್ತು ಮುಸ್ಲಿಮ್] ಅಲ್ಲಾಹು ಸಂಬಂಧ ಜೋಡಿಸುವುದು ಎಂದರೆ ಕುಟುಂಬ ಸಂಬ೦ಧ ಜೋಡಿಸಿದ ವ್ಯಕ್ತಿಗೆ ಔದಾರ್ಯ, ಅನುಗ್ರಹ, ಕರುಣೆ ಮೊದಲಾದವುಗಳನ್ನು ದಯಪಾಲಿಸುವುದು ಮತ್ತು ಅಲ್ಲಾಹು ಸ೦ಬ೦ಧ ಕಡಿಯುವುದು ಎ೦ದರೆ ಇವೆಲ್ಲವನ್ನೂ ನಿಲ್ಲಿಸುವುದು.

4. ಕುಟುಂಬ ಸ೦ಬ೦ಧ ಜೋಡಿಸುವುದು ಸ್ವರ್ಗ ಪ್ರವೇಶಕ್ಕೆ ಕಾರಣವಾಗಿದೆ. “ಅಬೂ ಅಯ್ಯೂಬ್ ಅಲ್ ಅನ್ನಾರೀ(ರ)ರಿಂದ ವರದಿ : ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹನ ರಸೂಲರೇ! ನನ್ನನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವ ಒಂದು ಕಾರ್ಯವನ್ನು ತಿಳಿಸಿಕೊಡಿ. ಪ್ರವಾದಿ (ಸ)ರವರು ಹೇಳಿದರು: ಅಲ್ಲಾಹನನ್ನು ಆರಾಧಿಸಿರಿ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿ, ನಮಾರುನ್ನು ಸಂಸ್ಥಾಪಿಸಿರಿ, ರುಕಾತ್ ನೀಡಿರಿ ಮತ್ತು ಕುಟುಂಬ ಸ೦ಬ೦ಧವನ್ನು ಜೋಡಿಸಿರಿ.” [ಅಲ್ಬುಖಾರಿ ಮತ್ತು ಮುಸ್ಲಿಮ್]

5. ಕುಟುಂಬ ಸ೦ಬ೦ಧ ಜೋಡಿಸುವುದು ಅಲ್ಲಾಹನ ಆಜ್ಞೆಯನ್ನು ಪಾಲಿಸುವುದಾಗಿದೆ. ಅಲ್ಲಾಹು ಹೇಳುತ್ತಾನೆ: “ಅಲ್ಲಾಹು ಜೋಡಿಸಬೇಕೆಂದು ಆದೇಶಿಸಿದವುಗಳನ್ನು ಜೋಡಿಸುವವರು, ತಮ್ಮ ರಬ್ದನ್ನು ಭಯಪಡುವವರು ಮತ್ತು ಕಠಿಣ ವಿಚಾರಣೆ ಯನ್ನು ಭಯಪಡುವವರು.” [ಕುರ್ಆನ್ 13:21)

6. ಕುಟು೦ಬ ಸ೦ಬ೦ಧವನ್ನು ಜೋಡಿಸುವುದರಿಂದ ಕುಟುಂಬ ಸಂಬಂಧಿಗಳ ಮಧ್ಯೆ ಪ್ರೀತಿ ಹೆಚ್ಚಾಗಿ, ಅವರ ನಡುವೆ ನಂಬಿಕೆ, ವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಸ೦ಬ೦ಧ ದೃಢವಾಗಿ ಬದುಕಿ ನಲ್ಲಿ ಶಾ೦ತಿ-ನೆಮ್ಮದಿ ಲಭ್ಯವಾಗುತ್ತದೆ.

7. ಕುಟುಂಬ ಸಂಬ೦ಧ ಜೋಡಿಸುವವನಿಗೆ ಸಂಬಂಧಿಕರ ನಡುವೆ ಸ್ಥಾನಮಾನವಿರುತ್ತದೆ. ಕುಟುಂಬ ಸಂಬಂಧ ಜೋಡಿಸುವ ಕುಟುಂಬ ಸಂಬಂಧಿಗಳ ಬಗ್ಗೆ ಕಾಳಜಿ ಹೊ೦ದಿರುವವರನ್ನು ಎಲ್ಲರೂ ಪ್ರೀತಿಸಿ ಗೌರವಿಸುತ್ತಾರೆ, ಉನ್ನತ ಸ್ಥಾನಮಾನ ನೀಡುತ್ತಾರೆ.

⇒ನಾಳೆಯ ಸಂಚಿಕೆಯಲ್ಲಿ : ಕುಣುಂಬ ಸಂಬಂಧವನ್ನು ಜೋಡಿಸುವುದು ಹೇಗೆ ?
emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago