ಕಲಬುರಗಿ: “ರಸ್ತೆ ಸುರಕ್ಷತೆ ಜೀವನ ರಕ್ಷೆ” ಎಂಬ ಘೋಷಣಾ ವಾಕ್ಯದೊಂದಿಗೆ ಇದೇ ಜನವರಿ 18 ರಿಂದ ಫೆಬ್ರವರಿ 17ರವರೆಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಎಲ್ಲಾ ವಿಭಾಗ ಮತ್ತು ಘಟಕಗಳಲ್ಲಿ ಆಚರಿಸಲಾಗುತ್ತಿರುವ ರಸ್ತೆ ಸುರಕ್ಷತಾ ಮಾಸಾಚರಣೆಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮರಾವ್ ಎಂ. ಅವರು ಕಲಬುರಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ರಸ್ತೆ ಅಪಘಾತಗಳನ್ನು ತಡೆಗಟ್ಟುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತಗಳನ್ನು ತಡೆಗಟ್ಟಲು ಹಲವಾರು ಯೋಜನೆ, ಚಾಲನಾ ತರಬೇತಿ, ಅರಿವು ಮೂಡಿಸುವುದು ಮತ್ತಿತರ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
“ಅವಸರವೇ ಅಪಘಾತಕ್ಕೆ ಕಾರಣ” ಎಂಬಂತೆ ಸಂಸ್ಥೆಯ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಅವಸರದಿಂದ ವಾಹನ ಚಾಲನೆ ಮಾಡದೆ ನಿಯಮಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಚಾಲನೆ ಮಾಡಬೇಕೆಂದು ಈ ಸಪ್ತಾಹ ಆಚರಣೆ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಸೂಕ್ತ ತಿಳುವಳಿಕೆ ನೀಡಬೇಕು. ಎಲ್ಲಾ ಘಟಕ/ಬಸ್ ನಿಲ್ದಾಣಗಳಲ್ಲಿ ರಸ್ತೆ ಸುರಕ್ಷತಾ ಮಾಸದ ಬ್ಯಾನರ್‍ಗಳನ್ನು ಪ್ರದರ್ಶಿಸಬೇಕು. ಬಸ್ ನಿಲ್ದಾಣಗಳಲ್ಲಿ ರಸ್ತೆ ಸುರಕ್ಷತೆಯ ಅಗತ್ಯತೆಯ ಬಗ್ಗೆ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಬೇಕೆಂದರು.
ರಸ್ತೆ ಸುರಕ್ಷತೆಯ ಅರಿವಿನ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಚಾಲಕ, ನಿರ್ವಾಹಕರಿಗೆ ಹಾಗೂ ಸಾರ್ವಜನಿಕರಿಗೆ ಹಂಚಬೇಕು. ಚಾಲನಾ ಸಿಬ್ಬಂದಿಗಳಿಗೆ ಪುನ:ಶ್ಚೇತನ ಶಿಬಿರಗಳನ್ನು ಏರ್ಪಡಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ತಿಳುವಳಿಕೆ ನೀಡಬೇಕು. ವೈದ್ಯಕೀಯ ಹಾಗೂ ನೇತ್ರ ತಪಾಸಣಾ ಶಿಬಿರಗಳ ವ್ಯವಸ್ಥೆ ಮಾಡಬೇಕೆಂದರು.
ರಸ್ತೆ ಸಂಚಾರ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಸಂಸ್ಥೆಯ ತರಬೇತಿ ಕೇಂದ್ರಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು (ಗಿiಜeo ಈiಟms) ತೋರಿಸಲು ವ್ಯವಸ್ಥೆ ಮಾಡಬೇಕು. ರಕ್ತದಾನ ಶಿಬಿರ ಮತ್ತು ಯೋಗ ತರಬೇತಿ ಶಿಬಿರಗಳನ್ನು ಏರ್ಪಡಿಸಬೇಕೆಂದರು.
ಅಪಘಾತ ಪ್ರವೃತ್ತಿವುಳ್ಳ ಚಾಲಕರನ್ನು ಗುರುತಿಸಿ ಅವರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಬೇಕು. ರಾತ್ರಿ ಸಂಚರಿಸುವ ಮಾರ್ಗಗಳಲ್ಲಿ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಅಪಘಾತ ನಿಯಂತ್ರಣ ಸಂಚಾರ ತಂಡಗಳನ್ನು (ಂಛಿಛಿiಜeಟಿಣ Pಡಿeveಟಿಣioಟಿ ಒobiಟe Squಚಿಜ) ರಚಿಸಲಾಗಿದೆ. ಈ ತಂಡಗಳು ಕಡ್ಡಾಯವಾಗಿ ಪ್ರತಿದಿನ ಕಾರ್ಯ ಚಟುವಟಿಕೆಯಿಂದ ಇರಬೇಕು. ರಸ್ತೆ ಸುರಕ್ಷತಾ ಮಾಸ ಆಚರಣೆಯನ್ನು ಯಶಸ್ವಿಯಾಗಿ ಆಚರಿಸಬೇಕೆಂದು ಎಲ್ಲಾ ವಿಭಾಗದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ಯೋಜನಾ ಮತ್ತು ಸಂಖ್ಯಾಧಿಕಾರಿಗಳು, ಮುಖ್ಯ ಭ್ರದ್ರತಾ ಹಾಗೂ ಜಾಗೃತ ಅಧಿಕಾರಿಗಳು, ಮುಖ್ಯ ತಾಂತ್ರಿಕ ಶಿಲ್ಪಿಗಳು, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸೇರಿದಂತೆ ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿಗಳುಕ ಪಾಲ್ಗೊಂಡಿದ್ದರು.