ವಾಡಿ: ಚುನಾವಣೆ ಎದುರಿಸುವಾಗ ಮಾತ್ರ ಪರಸ್ಪರ ಎದುರಾಳಿಗಳು. ಚುನಾವಣೆ ಮುಗಿದ ಬಳಿಕ ನಾವೆಲ್ಲ ಒಂದೇ ಊರಿನ ಕುಟುಂಬ ಸದಸ್ಯರು ಎಂಬ ಭಾವದಿಂದ ನಡೆದುಕೊಳ್ಳಬೇಕು. ಅಧಿಕಾರದ ಗದ್ದುಗೆ ಏರಿದವರು ಗ್ರಾಮದ ಅಭಿವೃದ್ಧಿ ಮಾತ್ರ ಮರೆಯಬಾರದು ಎಂದು ಪರಿಶಿಷ್ಟ ಪಂಗಡ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾನಪ್ಪ ನಾಯಕ ಹೇಳಿದರು.
ಪಟ್ಟಣದ ಧನಲಕ್ಷ್ಮೀ ಟ್ರಾನ್ಸ್‌ಪೋರ್ಟ್ ಆವರಣದಲ್ಲಿ ಚಿತ್ತಾಪುರ ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರಗಳಿಂದ ಚುನಾಯಿತರಾದ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳ ನೂತನ ಗ್ರಾಪಂ ಸದಸ್ಯರ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಜನಾಂಗದ ಬದುಕು ಕಷ್ಟಕರವಾಗಿದೆ. ಅನೇಕ ಕಡೆ ಬೇಡ ಸಮುದಾಯದ ಕುಟುಂಬಗಳು ಗುಡಿಸಲು ಮತ್ತು ಗುಡಿಗಳಲ್ಲಿ ವಾಸಮಾಡುತ್ತಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರಗಳಿಂದ ಗೆದ್ದಿರುವವರು ಗ್ರಾಮದ ಅಭಿವೃದ್ಧಿಯ ಜತೆಗೆ ಸಮುದಾಯದ ಪ್ರಗತಿಗೂ ಶ್ರಮಿಸಬೇಕು. ಮೀಸಲಾತಿಗೆ ಜೋತುಬೀಳದೆ, ಎಲ್ಲಾ ಜಾತಿ ಜನಾಂಗದ ಬಂಧುಗಳ ಮನಗೆದ್ದು ಸಾಮಾನ್ಯ ಕ್ಷೇತ್ರಗಳಿಂದರೂ ಚುನಾಯಿತರಾಗುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮರಾವ ಬಿ.ದೊರೆ ಮಾತನಾಡಿ, ಚುನಾವಣೆ ಎದುರಿಸಿ ಗ್ರಾಪಂ ಸದಸ್ಯರಾಗುವುದಷ್ಟೇ ಸಾಧನೆಯಲ್ಲ. ಸದಸ್ಯರನ್ನು ಧಿಕ್ಕು ತಪ್ಪಿಸುವ ಗ್ರಾಪಂ ಪಿಡಿಒಗಳ ಕುತಂತ್ರ ಬಯಲಿಗೆಳೆದು ಊರಿನ ಅಭಿವೃದ್ಧಿಗೆ ಅನುದಾನ ಮೀಸಲಿಡುವುದು ಮುಖ್ಯವಾಗಿದೆ. ಪಂಚಾಯಿತಿ ನಿಯಮಗಳನ್ನು ಅರ್ಥ ಮಾಡಿಕೊಂಡು ಜನರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಒಗ್ಗಟ್ಟಿನಿಂದ ಮಾತ್ರ ವಾಲ್ಮೀಕಿ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದು ಹೇಳಿದರು.
ಎಸ್‌ಟಿ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಸಂಗಪ್ಪ ಸೇದಿಮನಿ, ಸಾಬಣ್ಣ ಮುಸ್ಲಾ ಲಾಡ್ಲಾಪುರ, ಹುಸನಪ್ಪ ಮಗದಂಪುರ ಮಾತನಾಡಿದರು. ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿಬಾಯಿ ಫುಲೆ ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷೆ ಸುಮಿತ್ರಾ ಬಿ.ದೊರೆ, ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮಾಲಗತ್ತಿ, ಪೊಲೀಸ್ ಅಧಿಕಾರಿ ಮಹಾಮನಿ ನಾಯಕ, ಸುಭಾಷ ಚಾಮನೂರ, ಮುಖಂಡರಾದ ರವಿ ನಾಯಕ, ನಾಗೇಶ ಜಮಾದಾರ, ಭಾಗಣ್ಣ ದೊರೆ, ಜಗದೇವ ಸುಬೇದಾರ, ಹಣಮಂತ ದೊರೆ ಪಾಲ್ಗೊಂಡಿದ್ದರು. ಶಕುಂತಲಾ ಪೊದ್ದಾರ ಸ್ವಾಗತಿಸಿದರು. ದೇವಿಂದ್ರ ನಾಯಕ ನಿರೂಪಿಸಿದರು. ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಒಟ್ಟು ೨೦ ಜನ ಚುನಾಯಿತ ಎಸ್‌ಟಿ ಸದಸ್ಯರಿಗೆ ಪಂಚಾಯತಿ ಅಧಿನಿಯಮ-೧೯೯೩ ಪುಸ್ತಕ ನೀಡಿ ಸನ್ಮಾನಿಸಲಾಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…