ಕುಡಿಯುವ ನೀರಿಗಾಗಿ ಸಾರ್ವಜನಿಕರಿಂದ ಸುರಪುರ ನಗರಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ

0
228

ಸುರಪುರ: ನಗರದ ರಂಗಂಪೇಟ ತಿಮ್ಮಾಪುರ ಹಸನಾಪುರ ಸತ್ಯಂಪೆಟ್ ಸೇರಿದಂತೆ ಸುಮಾರು ಹದಿನೈದು ವಾರ್ಡುಗಳಿಗೆ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 12 ಗಂಟೆ 11 ಗಂಟೆ ಸುಮಾರಿಗೆ ನೂರಾರು ಸಂಖ್ಯೆಯಲ್ಲಿ ರನ್ನ ಪೇಟೆಯಿಂದ ಪಾದಯಾತ್ರೆಯ ಮೂಲಕ ನಗರಸಭೆ ವರೆಗೆ ಬಂದು ನಗರಸಭೆ ಮುತ್ತಿಗೆ ಹಾಕಿ ಆಕ್ರೋಶಗೊಂಡ ಪ್ರತಿಭಟನಾಕಾರರು ನಗರಸಭೆಯ ನಾಮಫಲಕಗಳನ್ನು ಕಿತ್ತೆಸೆದು ಕುರ್ಚಿಗಳನ್ನು ಜಖಂಗೊಳಿಸಿ ಆಕ್ರೋಶದಿಂದ ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಒದಗಿಸಲು ಆಗ್ರಹಿಸಿದರು.

Contact Your\'s Advertisement; 9902492681

ಪ್ರತಿಭಟನಾ ಸ್ಥಳಕ್ಕೆ ತಾಸಿಲ್ದಾರ್ ಸುರೇಶ್ ಅಂಕಲಗಿ ನಗರಸಭೆ ಆಯುಕ್ತ ಏಜಾಜ್ ಹುಸೇನ್ ಆಗಮಿಸಿ ವಾರಕ್ಕೆ ಎರಡು ಬಾರಿ ಕುಡಿಯುವ ನೀರಿನ್ನು ಒದಗಿಸಲಾಗುವುದು ಅಲ್ಲದೆ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.

ಈ ಸಂದರ್ಭದಲ್ಲಿ ಸುರೇಶ್ ಸಜ್ಜನ್ ಮಲ್ಲಿಕಾರ್ಜುನ್ ಕಡೆಚೂರ್ ಶೇಖ್ ಮಹಿಬೂಬ ಒಂಟಿ ಭೀಮಶಂಕರ್ ಬಿಲ್ಲವ್ ರಾಜು ಫುಲ್ಸೆ ವೀರಭದ್ರಪ್ಪ ಕುಂಬಾರ ಅಂಬರೀಶ್ ಕುಂಬಾರ ಅಯ್ಯಪ್ಪ ಅಕ್ಕಿ ಪ್ರಕಾಶ ಅಲಬನೂರು ಸೇರಿದಂತೆ ನೂರಾರು ಜನ ಮಹಿಳೆಯರು ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here