ಕಲಬುರಗಿ: ವಿಜಯಪುರದ ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ, ಕಲಾ, ಸಾಹಿತ್ಯ, ಸಂಸ್ಕøತಿ ವೇದಿಕೆಯ ಪ್ರತಿಷ್ಠಿತ ಬಸವರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಭೀಮಾಶಂಕರ ಎಂ. ಫಿರೋಜಾಬಾದ್ ಹಿನ್ನೆಲೆಯಲ್ಲಿ `ಸಂಯುಕ್ತ ಕರ್ನಾಟಕ’ ಕಚೇರಿಯಲ್ಲಿ ಭಾನುವಾರ ಶ್ರೀ ಬಸವೇಶ್ವರ ಕಲಾ ಬಳಗದಿಂದ ಭಾನುವಾರ ಸಂಜೆ ಆತ್ಮೀಯವಾಗಿ ಸತ್ಕರಿಸಲಾಯಿತು.
ಈ ವೇಳೆ ಸಂಘದ ಉಪಾಧ್ಯಕ್ಷ ನರಸಪ್ಪ ಬಿರಾದಾರ್ ದೇಗಾಂವ್ ಮಾತನಾಡಿ, ಭೀಮಾಶಂಕರ ಅವರು ಅವಿರತ ಪರಿಶ್ರಮ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರಿಂದಲೇ ಉನ್ನತ ಪ್ರಶಸ್ತಿ ಪಡೆದಿರುವುದು ಸಂತಸದಾಯಕ. ತಮ್ಮನ್ನು ತಾವು ಕೆಲಸದಲ್ಲಿ ತೊಡಗಿದ್ದವರಿಗೆ ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬರುವಲ್ಲಿ ಯಾವುದೇ ಸಂದೇಹವಿಲ್ಲ. ಇಂಥ ಸಾಲಿನಲ್ಲಿ ಕ್ರೀಯಾಶೀಲ ಯುವ ಪತ್ರಕರ್ತ ಭೀಮಾಶಂಕರ ಸೇವೆ ಅಮೋಘವಾಗಿದ್ದು, ಮುಂದೆ ಉತ್ತರೋತ್ತರವಾಗಿ ಉನ್ನತ ಹಂತಕ್ಕೆ ತಲುಪಲಿ ಎಂದು ಹಾರೈಸಿದರು.
ಭೀಮಾಶಂಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿದರೆ ಪ್ರಶಸ್ತಿಗಳು ಹುಡುಕಿಕೊಂಡು ಬರಲಿವೆ. ಇದಕ್ಕೆ ಉದಾಹರಣೆ ತಾವು ಇರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ `ಕಲಬುರಗಿ ಸಂಯುಕ್ತ ಕರ್ನಾಟಕ’ ಬ್ಯೂರೋ ಚೀಫ್ ಜಯತೀರ್ಥ ಕಾಗಲಕರ್, ಕಚೇರಿ ವ್ಯವಸ್ಥಾಪಕ ಯು. ವಸುದೇಂದ್ರ, ಮುಖ್ಯವರದಿಗಾರ ಹೆಚ್. ಶೇಷಗಿರಿ, ಹಿರಿಯ ಉಪಸಂಪಾದಕ ಸುಭಾಷ ಬಣಗಾರ್, ವರದಿಗಾರ ಸಂಗಮನಾಥ ರೇವತಗಾಂವ್, ಜಾಹಿರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಗಿರೀಶ ಕುಲಕರ್ಣಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ, ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಉಪಾಧ್ಯಕ್ಷ ದಿನಕರರಾವ ಅಷ್ಟಗಿ ಕುಲಕರ್ಣಿ, ಪ್ರಮುಖರಾದ ರಾಜಶೇಖರ ಬಿ. ಮರಡಿ, ಬಸಯ್ಯ ಸ್ವಾಮಿ ಹೊದಲೂರ, ಬಸವರಾಜ್ ಪುರಾಣೆ, ಎಸ್.ಎಸ್. ಪಾಟೀಲ್ ಬಡದಾಳ, ಓಂಕಾರ ಗೌಡ, ಸೋಮಶೇಖರ, ಅಣ್ಣಾರಾವ್ ಮಂಗಾಣೆ, ವೀರೇಶ ಬೋಳಶೆಟ್ಟಿ, ರಾಜಕುಮಾರ ಬಟಗೇರಿ ಮತ್ತಿತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…