ಕಲಬುರಗಿ : ಜೇವರ್ಗಿ ಪಟ್ಟಣದಲ್ಲಿ ಹತ್ತು-ಹನ್ನೇರಡು ಕಾಲೇಜುಗಳು ಅಸ್ತಿತ್ವದಲ್ಲಿದ್ದು, ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ಗ್ರಾಮೀಣ ಪ್ರದೇಶದಿಂದ ಆಗಮಿಸುತ್ತಿದ್ದಾರೆ. ಅವರ ಅಧ್ಯಯನಕ್ಕೆ ಅನುಕೂಲವಾಗಲು ವಿಜಯಪೂರ ವೃತ್ತದಬಳಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ, ಯುವಜನ ಜಾಗೃತಿ ವೇದಿಕೆ ಸಾರಥ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಕ್ಷರಸಹ ಬಿದಿಗಿಳಿದು ಹೋರಾಟ ಮಾಡಿದರು.
ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ 11.30ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಹೊರಟ ಬೃಹತ್ ಸಂಖ್ಯೆಯ ಪ್ರತಿಭಟನಾ ವಿದ್ಯಾರ್ಥಿಗಳು ಅಖಂಡೇಶ್ವರ ವೃತ್ತದ ಮೂಲಕ, ಮಿನಿ ವಿಧಾನ ಸೌಧಕ್ಕೆ ತೆರಳಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ ಸಿದ್ಧರಾಯ ಭೋಸಗಿರವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಈಗಾಗಲೇ ಇರುವ ಸಾರ್ವಜನಿಕ ಗ್ರಂಥಾಲಯವು ಹಳೆಯ ತಹಸೀಲ್ ಕಟ್ಟಡದಲ್ಲಿದ್ದು ಸಂಪೂರ್ಣ ಶಿಥಲಾವಸ್ಥೆಯಿಂದ ಕೂಡಿದೆ, ಹಾಗೂ ಯಾವ ಸಂದರ್ಭದಲ್ಲಿ ಪ್ರಾಣ ಹಾನಿಯಾಗುತ್ತೋ ಗೊತ್ತಿಲ್ಲ, ಆದ್ದರಿಂದ ಈ ಕೂಡಲೇ ವಿಜಯಪೂರ ವೃತ್ತದ ಬಳಿ ಇರುವ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುಸಜ್ಜಿತವಾದ ಕಟ್ಟಡದೊಂದಿಗೆ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಆವಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಯುಗ ಇರುವದರಿಂದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಕೆಇಎಸ್ ನಂತಹ ಪರೀಕ್ಷೆಗಳಿಗೆ ಅನುಕೂಲವಾಗುವ ಪಠ್ಯ ಪುಸ್ತಕಗಳನ್ನು ಸರ್ಕಾರ ಶೇ 80ರಷ್ಟು ಪ್ರತಿಶತದಲ್ಲಿ ಖರಿದಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿತ ಇರುವದರಿಂದ ಸಾರ್ವಜನಿಕ ಗ್ರಂಥಾಲಯಗಳು ಪ್ರತಿ ಹಳ್ಳಿಹಳ್ಳಿಗಳಲ್ಲಿಯೂ ನಿರ್ಮಾಣವಾದರೆ ಒಳಿತು, ಎಂದು ಹೇಳಿ, ಇಲ್ಲಿಯ ಭಾಗದ ನೂರಾರು ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸುವಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಜವಬಾýರಿಯಾಗಿದೆ ಎಂದು ಪ್ರತಿಭಟನಾಕಾರರು ಸರಕಾರಕ್ಕೆ ಆಗ್ರಹಿಸಿದರು.
ಈಗಾಗಲೇ ನೂತನವಾಗಿ 9ಗ್ರಾಮ ಪಂಚಾಯತಗಳು ಹೆಚ್ಚಾಗಿವೆ, ಆಯಾ ಗ್ರಾಮ ಪಂಚಾಯತಗಳಲ್ಲಿ ಗ್ರಂಥಾಲಯಗಳು ನಿರ್ಮಾಣಮಾಡಬೆಕು ಮತ್ತು ಗ್ರಂಥ ಪಾಲಕರನ್ನು ನೇಮಕ ಮಾಡಿಕೊಳ್ಳಬೇಕು ಸ್ಭೆರಿದಂತೆ ಹಲವರು ಬೇಡಿಕೆಗಳನ್ನು ಈಡೇರಿಸಬೇಕೆಂದು ಯುವಜನ ಜಾಗೃತಿ ವೇದಿಕೆ ಮೂಲಕ ವಿದ್ಯಾರ್ಥಿಗಳು ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಅನೀಲಕುಮಾರ ಹಾಲಕಾಯಿ, ಅಧ್ಯಕ್ಷರಾದ ಸಿದ್ದು ಅಂಕುಶದೊಡ್ಡಿ ಪ್ರ.ಕಾರ್ಯದರ್ಶಿ ಸುರೇಶಕುಮಾರ ಹಿರೇಮಠ, ಕಾರ್ಯದರ್ಶಿ ಶಿವಲಿಂಗ ಹಳ್ಳಿ, ಖಜಾಂಚಿ ರುದ್ರಗೌಡ ಪಾಟೀಲ, ಸದಸ್ಯರಾದ ನಿಂಗಣ್ಣಗೌಡ ಸಾಥಖೇಡ, ರಾಜಶೇಖರ ಜೈನಾಪೂರ, ರಮೇಶ ಪತ್ತಾರ, ಸಿದ್ದುಸಾಹು ಹಾಲಗಡ್ಲಾ ಮಲ್ಲಿಕಾರ್ಜುನ ಜೈನಾಪೂರ, ಸಿದ್ದಾರ್ಥ ಪಾಟೀಲ, ಬಸವಂತ್ರಾಯ ಮರೆಪ್ಪಗೋಳ, ಅಣವೀರಪ್ಪ ಮರೇಪ್ಪಗೋಳ ಪ್ರಶಾಂತ ಪಾಟೀಲ ಜೈನಾಪೂರ, ದಸಂಸ ಮುಖಂಡರಾದ ಸಿದ್ರಾಮ ಕಟ್ಟಿ ಕೋಳಕೂರ, ಮಲ್ಲಿಕಾರ್ಜುನ ಬಿಲ್ಲಾರ, ಶಿವು ಹೆಗಡೆ ಸೊನ್ನ, ಮಾಪಣ ಕಟ್ಟಿ, ಮಹೇಶ ಕಟ್ಟಿ ಸಂಗಾವಿ, ಸಂತೋಷ ಕಲ್ಲೂರ ಕೆ ಸೇರಿದಂತ ವಿವಿಧ ಕಾಲೇಜು ವಿದ್ಯಾರ್ಥಿಗಳು, ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…