ಕಲಬುರಗಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮರಶೀಲ ನೇತಾರ ಹಾಗೂ ರಾಜಿ ರಹಿತ ಪಂಥದ ಅಗ್ರಗಣ್ಯ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜನ್ಮದಿನಾಚರಣೆ ನಗರದ ವಿ.ಜಿ ಮಹಿಳಾ ಮಹಾವಿದ್ಯಾಲಯ, ಉರ್ದು ಸರಕಾರಿ ಶಾಲೆ,ಸರಕಾರಿ ಮಹಿಳಾ ಪದವಿ ಮಹಾವಿದ್ಯಾಲಯ, ಸರಕಾರಿಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜುನ ಸಹಭಾಗಿತ್ವದಲ್ಲಿ ಎಐಡಿಎಸ್ಓ ಸಂಘಟನೆ ಹಮ್ಮಿಕೊಂಡಿತು.
ಈ ಸಂದರ್ಭದಲ್ಲಿ ಸಂಘಟನೆ ಸ್ನೇಹ ಕಟ್ಟಿಮನಿ ಮಾತನಾಡಿ, ಅನ್ಯಾಯ ಅಸತ್ಯದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಅವರ ಹೋರಾಟದ ಕೆಚ್ಚನ್ನು ಮೈಗೂಡಿಸಿಕೊಳ್ಳುತ್ತಾ, ಅವರು ಎತ್ತಿಹಿಡಿದ ಪ್ರಜಾತಾಂತ್ರಿಕ ಮೌಲ್ಯಗಳು ಮತ್ತು ಧರ್ಮನಿರಪೇಕ್ಷ ಚಿಂತನೆಗಳನ್ನು ಪಾಲಿಸುತ್ತಾ, ಅವರು ಕನಸುಕಂಡ ‘ಯಾವ ಕಂದನೂ ಹಸಿವೆಯಿಂದ ನರಳದ, ಯಾವ ಹೆಣ್ಣು ಕೂಡ ಅಭದ್ರತೆಯಿಂದ ರೋಧಿಸದ, ಎಲ್ಲರಿಗೂ ಶಿಕ್ಷಣ-ಉದ್ಯೋಗ-ಆರೋಗ್ಯವನ್ನು ಒದಗಿಸಿ, ಸಂತಸದ ಬದುಕನ್ನು ನನಸಾಗಿಸುವ, ರೈತರು ಕಾರ್ಮಿಕರು ಎಲ್ಲರೂ ಸೇರಿದಂತೆ ಇಡೀಯ ಮಾನವ ಜನಾಂಗವೇ ಹೆಮ್ಮೆಯಿಂದ ತಲೆಯೆತ್ತಿ ಮುನ್ನಡೆಯುವ ಸಮಾಜವಾದಿ ಭಾರತ’ವನ್ನು ನಿರ್ಮಿಸುವ ಸಂಕಲ್ಪ ತೊಡುತ್ತೇವೆ. ಈ ಮೂಲಕ, ನೇತಾಜಿಯವರಿಗೆ ನಮ್ಮಗೌರವ ಸಲ್ಲಿಸುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ, ಶಿಲ್ಪಾ ಬಿ.ಕೆ, ಪ್ರೀತಿ.ದೊಡ್ಡಮನಿ, ಭಿಮಾಶಂಕರ, ನಾಗರಾಜ್, ಪೂಜಾ, ಮಂಜುಳಾ, ನೂರಾರು ವಿಧ್ಯಾರ್ಥಿಗಳು ಭಾಗವಹಿಸಿದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…