ಸಂವಿಧಾನ ಜಾರಿಗೆ ಬಂದ ದಿನವೇ ಪವಿತ್ರ ದಿನ: ಡಾ.ಕೆ.ಗುರಲಿಂಗಪ್ಪ

0
89

ಶಹಾಬಾದ: ಬ್ರಿಟಿಷ ದಾಸ್ಯದಿಂದ ಮುಕ್ತಗೊಂಡು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ದೊರೆತ ಹಾಗೂ ಸಂವಿಧಾನ ಜಾರಿಗೆ ಬಂದ ದಿನವೇ ಪವಿತ್ರ ದಿನ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಮಂಗಳವಾರ ನಗರಸಭೆಯಲ್ಲಿ ಆಯೋಜಿಸಲಾದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮಗಳುಗಳನ್ನು ಪಾಲಿಸಬೇಕು ಎಂದೆಲ್ಲಾ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಭಾರತ ಸಂವಿಧಾನ. ಇದನ್ನು ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ. ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ೧೯೫೦ ಜನೇವರಿ ೨೬ ರಂದು ಅಂಗೀಕರಿಸಲ್ಪಟ್ಟಿತ್ತು. ಅಂದಿನ ದಿನವೇ ಪ್ರಜೆಗಳೇ ಪ್ರಭುಗಳಾದ ದಿನ ಗಣರಾಜ್ಯ ದಿನ ಎಂದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಮಾತನಾಡಿ,ಇಂದು ಗಣರಾಜ್ಯ ದಿನ ಎಂದರೆ ಸರಕಾರಿ ರಜೆ, ಅನ್ನವಷ್ಟರ ಮಟ್ಟಿಗೆ ಇಂದಿನ ಬಹುತೇಕ ಭಾರತೀಯ ಪ್ರಜೆಗಳು ಈ ಸುಂದರ ದಿನವನ್ನು ಅಥೈಸಿಕೊಂಡಿರುವುದು ಮಾತ್ರ ದುರ್ದೈವ. ಈ ದಿನವನ್ನು ನಾವೆಲ್ಲರೂ ಧಾರ್ಮಿಕ ಹಬ್ಬಗಳಂತೆ ಮನೆಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು. ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶ ರಕ್ಷಣೆ, ನ್ಯಾಯಾಂಗ, ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂಥಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು. ಸಮಾಜದ ಸರ್ವೋತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರö್ಯದ ಯಶಸ್ವಿ ದೇಶದ ಕನಸು ಕಂಡು ಈ ದೇಶಕ್ಕಾಗಿ ಸಂವಿಧಾನ ರಚಿಸಿ, ದಾರಿ ಹಾಕಿಕೊಟ್ಟ ಮಹಾನ್ ನಾಯಕರ ಮತ್ತು ಮಹಾತ್ಮರ ಉದ್ದೇಶ ನಿಜವಾಗಿಯೂ ಸಾಕಾರಗೊಳ್ಳಬೇಕಾದರೆ ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗಬೇಕೆಂದು ಹೇಳಿದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ,ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್,ಹಾಷಮ್‌ಖಾನ, ನಗರಸಭೆಯ ಸದಸ್ಯರಾದ ಪಾರ್ವತಿ ಪವಾರ, ಸಾಬೇರಾ ಬೇಗಂ, ಡಾ.ಅಹ್ಮದ್ ಪಟೇಲ್,ಎಇಇ ಪುರುಷೋತ್ತಮ, ಕಚೇರಿ ವ್ಯವಸ್ಥಾಪಕ ಶಂಕರ ಇಂಜಗನೇರಿ,ಕಂದಾಯ ಅಧಿಕಾರಿ ಸುನೀಲ ವೀರಶೆಟ್ಟಿ,ಜೆಇ ಬಸವರಾಜ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಶರಣು, ರಾಜೇಶ, ಉಣೇಶ ದೊಡ್ಡಮನಿ, ಹಣಮಂತ ಪವಾರ, ತಿಮ್ಮಪ್ಪ ಶಿಕಾರಿಪೂರ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here