ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಭಾರತ: ಸುಷ್ಮಾವತಿ ಹೊನಗೊಜೀ

0
34

ಕಲಬುರಗಿ: ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ನಮ್ಮ ದೇಶಕ್ಕೆ ಸಂವಿಧಾದ ಜನವರಿ ೨೬ ರಂದು ಗಣರಾಜ್ಯೋತ್ಸವವನ್ನಾಗಿ ಹೆಮ್ಮೆಯಿಂದ ಆಚರಿಸುತ್ತೇವೆ. ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಈ ದಿನ ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಕೂಡ ಹೌದು ಎಂದು ಸಂಸ್ಥೆಯ ಅಧ್ಯಕ್ಷೆ ಸುಷ್ಮಾವತಿ ಎಸ್. ಹೂನಗೇಜಿ ಹೇಳಿದರು.

ಅವರು ಗಣರಾಜ್ಯೋತ್ಸವ ಅಂಗವಾಗಿ ಮಾತನಾಡಿ, ಗಣರಾಜ್ಯೋತ್ಸವವನ್ನು ಗೌರವದಿಂದ ಬಹಳ ಅರ್ಥ ಪೂರ್ಣವಾಗಿ ಆಚರಿಸಬೇಕಾಗಿದೆ ಎಂದರು.

Contact Your\'s Advertisement; 9902492681

೨೯ರಾಜ್ಯಗಳು,೭- ರಾಷ್ಟ್ರಾಡಳಿತ ರಾಜ್ಯಗಳು,೬- ಧರ್ಮಗಳು,೬೪೨೮- ಜಾತಿಗಳು ,೧೬೧೮- ಭಾಷೆಗಳು,೨೯-ವೈವಿಧ್ಯಮಯ ರಾಷ್ಟ್ರೀಯ ಹಬ್ಬಗಳು ೧-ದೇಶ ಪ್ರಪಂಚದ ಏಕೈಕ ಜಾತ್ಯತೀತ ರಾಷ್ಟ್ರ ಅದು ನಮ್ಮ ಹೆಮ್ಮೆಯ ಭಾರತ ರಾಷ್ಟ್ರವಾಗಿದೆ ಎಂದರು.
ಶ್ರೇಷ್ಠ ಗಣರಾಜ್ಯವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಶಾಲಾ-ಕಾಲೇಜು, ಕಚೇರಿಗಳಲ್ಲಿ, ವಿವಿಧ ಇಲಾಖೆಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.

ಗಣರಾಜ್ಯೋತ್ಸವ ಹಿನ್ನೆಲೆ ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪,೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು. ನವೆಂಬರ್ ೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.

ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು. ಮತ್ತೊಮ್ಮೆ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ನಿರ್ಮಿಸಿದ ಬಾಬಾ ಸಾಹೇಬ್ ಅಂಬೇಡ್ಕರನ್ನು ಸ್ಮರಿಸುತ್ತಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಗಣರಾಜ್ಯೋತ್ಸವ ದೇಶದ ಜನತೆಯಲ್ಲಿ ಸೋದರತೆ ಸಮಾನತೆಯ ಭಾವವನ್ನು ಮೂಡಿಸಲೆಂದು ನಾವೆಲ್ಲರೂ ಆಚರಿಸೋಣ ಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲರಾದ ಶರಣು ಬೀ ಹೂನಗೇಜೀ ಪೂಜಾರಿ, ಶ್ರೀದತ್ತ ಡಿಗ್ರಿ ಕಾಲೇಜಿನ ಸಂದೀಪ್ ಸಲಗರ್ , ಶ್ರೀನಿವಾಸ್ ಸಿಂದೆ ಮಡಿವಾಳಪ್ಪ, ಅಭಿಲಾಶ್ ರಾಜೇಶ್ವರಿ, ಸುಧಾ, ಕಾವೇರಿ, ಇಂದುಮತಿ, ಗೌರಿ ,ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಶಿವಲೀಲಾ ಬಸವರಾಜ್ ಅನಿಲ್ ಆಕಾಶ್ ರುದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here