ಶಹಾಬಾದನಲ್ಲಿ ರೇಲ್ವೆಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿಯಿಂದ ಮನವಿ

0
72

ಶಹಾಬಾದ:ನಗರದಲ್ಲಿ ಕೋವಿಡ್-೧೯ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ಮತ್ತೆ ನಿಲ್ಲಿಸಬೇಕೆಂದು ಒತ್ತಾಯಿಸಿ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ ರೇಲ್ವೆ ನಿಲ್ದಾಣದ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕೋವಿಡ್-೧೯ ಬಂದ ನಂತರ ನಗರದಲ್ಲಿ ರೇಲ್ವೆಗಳ ಸಂಚಾರ ಕಡಿಮೆಯಾದ ಕಾರಣ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್-೧೯ದಿಂದ ಬಹುತೇಖ ರೈಲು ನಿಲುಗಡೆಯಾಗಿವೆ.ಕೆಲವೊಂದು ರೈಲುಗಳು ಸಂಚಾರ ಪ್ರಾರಂಭವಾಗಿವೆ.ಆದರೆ ನಗರದ ಬಹುತೇಖ ಜನರು ರೈಲಿನ ಮೇಲೆ ಅವಲಂಭಿತರಾಗಿದ್ದಾರೆ. ಮೊದಲು ಶಹಾಬಾದ ನಿಲ್ದಾಣದಲ್ಲಿ ನಿಲ್ಲುವ ರೈಲುಗಳು ನಿಲ್ಲದಿರುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಅದೇ ರೇಲ್ವೆಗಳು ಎಂದಿನಂತೆ ಎಲ್ಲಾ ಕಡೆ ನಿಲ್ಲುತ್ತಿವೆ.ಆದರೆ ಶಹಾಬಾದ ನಿಲ್ದಾಣದಲ್ಲಿ ನಿಲ್ಲದಿರುವುದಕ್ಕೆ ಕಾರಣವೇನು. ಉಳಿದ ಸ್ಥಳಗಳಿಗಿಂತ ಶಹಾಬಾದನಲ್ಲಿ ಹೆಚ್ಚಿನ ಆದಾಯವಿದ್ದರೂ ಈ ರೀತಿಯ ತಾರತಮ್ಯವೇಕೆ ಎಂದು ಪ್ರಶ್ನಿಸಿದರು. ಆದ್ದರಿಂದ ರೇಲ್ವೆಗಳನ್ನು ಶಹಾಬಾದನಲ್ಲಿ ನಿಲುಗಡೆ ಮಾಡಬೇಕು. ಹದಿನೈದು ದಿನಗಳಲ್ಲಿ ರೇಲ್ವೆಗಳನ್ನು ನಿಲ್ಲಿಸದಿದ್ದರೇ ರೈಲ್ ರೋಕೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Contact Your\'s Advertisement; 9902492681

ಡಾ.ರಶೀದ್ ಮರ್ಚಂಟ, ರಾಜಮಹ್ಮದ್ ರಾಜಾ,ಗಿರೀಶ ಕಂಬಾನೂರ,ಡಾ.ಅಹ್ಮದ್ ಪಟೇಲ್, ಹಾಷಮ್ ಖಾನ, ಫಜಲ್ ಪಟೇಲ್,ಅಶೋಕ ಜಿಂಗಾಡೆ, ರವಿ ರಾಠೋಡ, ಬಸವರಾಜ ಮಯೂರ,ಮಹ್ಮದ್ ರಫಿಕ್ ಕಾರೋಬಾರಿ,ಕಿರಣ ಚವ್ಹಾಣ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here