ಕಲಬುರಗಿ: ವಾಡಿ ಪಟ್ಟಣ ಸಮೀಪದ ಇಂಗಳಗಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಲ್ಲಿ ಗ್ರಾಮ ಪಂಚಾಯಿತಿ ಕಾರ್ಮಿಕರಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕೂಲಿ ಕಾರ್ಮಿಕರು ಗುದ್ದಲಿ ಸಲಿಕೆ ಸಮೇತ ಪಂಚಾಯಿತಿ ಎದುರು ದಿಢೀರ್ ಪ್ರತಿಭಟನೆ ನಡೆಸಿ ಪಂಚಾಯಿತಿ ವಿರುದ್ಧ ಧಿಕ್ಕಾರ ಕೂಗಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಬಯಿಸಿ ಸುಮಾರು ೫೦೦ ಜನ ಕೂಲಿ ಕಾರ್ಮಿಕರು ಎರಡು ವಾರದ ಹಿಂದೆ ನಮೂನೆ ೬ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪಂಚಾಯಿತಿ ಸಿಬ್ಬಂದಿ ಕೇವಲ ೩೦೦ಜನ ಕಾರ್ಮಿಕರಿಗೆ ಮಾತ್ರ ಕೆಲಸದ ಎನ್‌ಎಮ್‌ಆರ್ ತೆಗೆದಿದ್ದಾರೆ. ಇದರಲ್ಲಿ ಕೂಡಾ ಕೆಲವರು ಕೆಲಸ ಮಾಡದ ಕಾರ್ಮಿಕರು ಇದ್ದಾರೆ. ಇದನ್ನು ಕೇಳುವುದಕ್ಕೆ ಪಂಚಾಯಿತಿಗೆ ಹೋದರೆ ಸಂಬಂಧಿಸಿದ ಅಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ. ರೊಚ್ಚಿಗೆದ್ದ ಕಾರ್ಮಿಕರು ಅಧಿಕಾರಿಗಳು ಸ್ಥಳಕ್ಕೆ ಬರುವವರಿಗೆ ಮನೆಗೆ ಹೋಗುವದಿಲ್ಲ ಎಂದು ಪಟ್ಟು ಹಿಡಿದರು.
ಖಾತರಿ ಯೋಜನೆಯಲ್ಲಿ ಕಳೆದ ವರ್ಷ ಕೆಲಸ ಮಾಡಿದ್ದೇವೆ. ಆದರೆ ಈ ವರ್ಷ ಅಕೌಂಟ್ ಅನ್‌ಪ್ರಿಜ್ ಆಗಿದೆ. ನೀವು ಕೆಲಸಕ್ಕೆ ಹೋಗುವುದಕ್ಕೆ ಬರುವದಿಲ್ಲ. ಎನ್ನುತ್ತಾರೆ ಸಿಬ್ಬಂದಿ. ಈಗಾದರೇ ನಾವು ಏನು ಮಾಡಬೇಕು. ಎಲ್ಲಾ ಅವರ ಕೈಯಲ್ಲಿ ಇದೆ. ಆದರೂ ನಮಗೆ ವಿನಾಕಾರಣ ಸತಾಯಿಸುತ್ತಿದ್ದಾರೆ ಎಂದು ಕಾರ್ಮಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಮಧ್ಯ ಪ್ರವೇಶ: ಬೆಳಿಗ್ಗೆ ೧೧ ಗಂಟೆಯಿಂದ ಕಾರ್ಮಿಕರು ನಡೆಸುತ್ತಿರುವ ಶಾಂತಿಯುತ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಾಡಿ ಪೊಲೀಸ್ ಠಾಣೆ ಪೇದೆ ದೊಡ್ಡಪ್ಪ ಪೂಜಾರಿ, ಕಾಂತಪ್ಪ ಬಿರೆದಾರ್ ಪಂಚಾಯಿತಿ ಕಾರ್ಮಿಕರ ಸಮಸ್ಯೆ ಆಲಿಸಿ, ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದರು. ನಂತರ ಮಧ್ಯಾಹ್ನ ೪ಗಂಟೆಗೆ ಪಂಚಾಯಿತಿ ಕಂಪ್ಯೂಟರ್ ಸಿಬ್ಬಂದಿ ಗಾಯತ್ರಿ ಆಗಮಿಸಿ ಕೆಲ ಕಾರ್ಮಿಕರ ಎನ್‌ಎಮ್‌ಆರ್ ನೀಡಿದರು. ಇದರಿಂದ ಕಾರ್ಮಿಕರಿಗೆ ಅವರು ಹೆಸರು ಓದಿ ತಿಳಿಸಲಾಯಿತು.
ಗುರುವಾರ ನಿಗದಿತ ಕೆಲಸದ ಸ್ಥಳಕ್ಕೆ ಕಾರ್ಮಿಕರು ಹೋಗಬೇಕು. ಅನ್‌ಪ್ರಿಜ್ ಆಗಿರುವ ಅಕೌಂಟ್‌ಗಳು ಪ್ರಿಜ್ ಮಾಡಿಸಲಾಗುತ್ತದೆ. ಮತ್ತು ಎಲ್ಲಾ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತದೆ ಎಂದು ಪಂಚಾಯಿತಿ ಪಿಡಿಒ ರೇಷ್ಮಾ ಕೋತ್ವಾಲ ದೂರವಾಣಿ ಮೂಲಕ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಸಿಐಟಿಯು ಚಿತ್ತಾಪುರ ತಾಲ್ಲೂಕು ಅಧ್ಯಕ್ಷೆ ಶೇಖಮ್ಮ ಕುರಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸಾಯಬಣ್ಣಾ ಗುಡುಬಾ, ಸದಸ್ಯರಾದ ವಿಜಯಲತಾ ಸಂಕಾ, ಶಕುಂತಲಾ ಪವಾರ್, ಗಿಡ್ಡಮ್ಮ ಪವಾರ್, ಜ್ಯೋತಿ, ಸುನೀತಾ, ಮಲ್ಲಮ್ಮ, ಶಶಿಕಲಾ, ರತ್ನಮ್ಮ, ಮುಭಾರಕ್ ಇದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…