ಬಿಸಿ ಬಿಸಿ ಸುದ್ದಿ

ಅಸ್ಪೃಶ್ಯತೆ ಆಚರಣೆ ವಿರುದ್ಧ ಕಾನೂನು ರಚನೆಗೆ ಬೆಂಬಲ: ರಾಜಕುಮಾರ್ ದ್ಯಾಮಗೊಂಡ

ಜೇವರ್ಗಿ: ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಇಲ್ಲಿನ ಎಲ್ಲಾ ಜನರು ಸಾಮರಸ್ಯದಿಂದ ಹಾಗೂ ನೆಮ್ಮದಿಯ ಜೀವನ ನಡೆಸಿದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಸಮಾಜಿಕ ಏರುಪೇರು ಹಾಗೂ ಬೇದಬಾವಗಳಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಹಾಗೂ ಜಾತಿಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ರೋಗವಾಗಿದ್ದು ಇವುಗಳನ್ನು ಹೊಡೆದೋಡಿಸಲು ನಾವೆಲ್ಲರೂ ಕಂಕಣಬದ್ಧ ಆಗಬೇಕಿದೆ ಸರ್ವರ ಅಭ್ಯುದಯವೇ ಸಮಾಜದ ಅಭಿವೃದ್ಧಿ ಎಂದು ಇಲ್ಲಿನ ಜೆರಟಗಿ ವಿರಕ್ತಮಠದ ಮಹಾಂತ ಸ್ವಾಮಿಗಳು ಆಶೀರ್ವಚನವನ್ನು ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಸೇರಿದಂತೆ ಮಹರ್ಷಿ ಯುವ ಸಮಾಜಕಲ್ಯಾಣ ಸಾಂಸ್ಕೃತಿಕ ಸಂಘದ ಹಾಗೂ ಲುಂಬಿನಿ ಯುವ ಸಮಾಜಕಲ್ಯಾಣ ಸಂಘ ಜೇವರ್ಗಿ ಆಶ್ರಯದಲ್ಲಿ ಹಮ್ಮಿಕೊಂಡಿರುವ ಸ್ವಚ್ಛತೆ ನಿವಾರಣೆ ಕುರಿತು ವಿಚಾರಗೋಷ್ಠಿ ಹಾಗೂ ಬೀದಿ ನಾಟಕ ಕಾರ್ಯಕ್ರಮವನ್ನು ಚಾಲನೆ ನೀಡಿ ಅವರು ಮಾತನಾಡಿದರು.

ನೆಲೋಗಿ ಪೊಲೀಸ್ ಠಾಣೆಯ ಪಿಎಸ್ಐ ರಾಜಕುಮಾರ್ ದ್ಯಾಮಗೊಂಡ ಮಾತನಾಡಿ ಅಸ್ಪೃಶ್ಯತೆ ಆಚರಣೆಯು ಅಮಾನವೀಯ ವಾಗಿದ್ದು ಇಂಥ ಆಚರಣೆಯ ವಿರುದ್ಧ ದೂರುಗಳು ಕೇಳಿ ಬಂದರೆ ನಿಷ್ಪಕ್ಷಪಾತವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಹಾಗೂ ನೊಂದವರ ಧ್ವನಿಯಾಗಿ ನಿಲ್ಲುವುದಾಗಿ ಹೇಳಿದರು. ಅಲ್ಲದೇ ಸಮಾಜಿಕ ಶಾಂತಿಯನ್ನು ಕದಡುವ ಯಾವುದೇ ಕ್ರಮಗಳು ಹಾಗೂ ವಿಚಿತ್ರ ಕಾರ್ಯ ಶಕ್ತಿಗಳು ತಲೆಯೆತ್ತದಂತೆ ಸರಕಾರ ಹಾಗೂ ವಿವಿಧ ಇಲಾಖೆಗಳು ಕ್ರಮಗಳನ್ನು ಕೈಗೊಂಡಿದ್ದು ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ಸಮಾಜಿಕ ಹರಿಕಾರರ ಸಂದೇಶವನ್ನು ಸಾಮಾನ್ಯ ಜನರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ ಕರಿಘೋಳೇಶ್ವರ:
ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿಯ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧನ ಮಾರ್ಗದರ್ಶಕ ಉಪನ್ಯಾಸಕರಾಗಿ ಮಾತನಾಡಿದ ಕರಿಘೋಳೇಶ್ವರ ಅನೇಕ ಶರಣರು ಸಂತರು ಹಾಗೂ ಮಹಾತ್ಮರು ಸಮಾಜದಲ್ಲಿನ ಏರುಪೇರುಗಳನ್ನು ಸರಿಪಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಜೀವನದಲ್ಲಿ ಸಾಮಾಜಿಕ ಸಮಾನತೆ ಕುರಿತು ಹಾಗೂ ಆರ್ಥಿಕ ಸಮಾನತೆ ಕುರಿತು ತಿಳಿಸಿದ್ದು ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಬದುಕಿರಿ ಮತ್ತು ಬದುಕಲು ಬಿಡಿರಿ ಇದರಿಂದಾಗಿ ಸರ್ವರ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಸವಿಧಾನದ ಅಡಿಯಲ್ಲಿ ನ್ಯಾಯಾಲಯದ ಎದುರು ಎಲ್ಲರೂ ಸರ್ವ ಸಮಾನರು ಹಾಗೂ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದುವ ಹಕ್ಕನ್ನು ಸಂವಿಧಾನ ನೀಡಿದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು ಅಲ್ಲದೆ ಶೋಷಣೆಯ ವಿರುದ್ಧ ಧ್ವನಿಯೆತ್ತುವುದು ಮಾನವನ ಸ್ವಾಭಾವಿಕ ಹಕ್ಕಾಗಿದೆ ಎಂದು ಹೇಳಿದರು.

ಅಸ್ಪೃಶ್ಯತೆ ಪ್ರತಿಬಂಧಕ ಕಾನೂನಿನ ಅಡಿಯಲ್ಲಿ ಭಾರತದ ಸಂವಿಧಾನವು ತುಳಿತಕ್ಕೆ ಒಳಗಾದ ಅಸ್ಪೃಶ್ಯ ಹಾಗೂ ಆದಿವಾಸಿ ಜನಾಂಗದ ಜನರ ರಕ್ಷಣೆಗೆ ನಿಂತಿದ್ದು, ಸಾಮಾಜಿಕ ಆರ್ಥಿಕ ಹಾಗೂ ಕೌಟುಂಬಿಕ ಹಿತಾಸಕ್ತಿಗಳನ್ನು ರಕ್ಷಿಸಲು ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕಾನೂನಾತ್ಮಕ ರಕ್ಷಣೆ ಹಕ್ಕುಗಳನ್ನು ನೀಡಿದ್ದು ಇದನ್ನು ಉಲ್ಲಂಘಿಸಿದರೆ ಕಾನೂನಿನ ಅಡಿಯಲ್ಲಿ ಸೆರೆವಾಪಾವತಿಸಬೇಕಾಗುತ್ತದೆ ವಕೀಲರು ರಾಜು ಮುದ್ದಡಗಿ ಹೇಳಿದರು .

ಆಳಂದ ತಾಲೂಕಿನ ಶ್ರೀ ಸಾಯಿ ಜನಜಾಗೃತಿ ಕಲಾತಂಡದ ಗಂಗೂಬಾಯಿ ಹಾಗೂ ತಂಡದವರಿಂದ ಅಸ್ಪೃಶ್ಯತೆ ಕುರಿತು ಬೀದಿ ನಾಟಕವನ್ನು ಪ್ರದರ್ಶನ ಜಾಗೃತಿಯನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತಿಯ ಸದಸ್ಯರಾದ ಸಾವಿತ್ರಿ ಮಹಾಂತೇಶ್ ಆನೂರು , ಗ್ರಾಮ ಪಂಚಾಯಿತಿಯ ಸದಸ್ಯರಾದ ಲಕ್ಷ್ಮೀಬಾಯಿ ಎಸ್ ಬಿರಾದಾರ್ ,ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಲಕ್ಕಣ್ಣ ಬೀರಗೊಂಡ, ಪ್ರಾಥಮಿಕ ಶಾಲೆಯ ರುದ್ರಯ್ಯ ಗಂಗನಹಳ್ಳಿ ಹಾಗೂ ಗೊಲ್ಲಾಳಪ್ಪ ಬಿ ಯಾತನೂರು, ಸೇರಿದಂತೆ ಅತಿಥಿಗಳಾಗಿ ನಾಗು ಚಟ್ಟರ್ಕಿ, ಚನ್ನಬಸಯ್ಯ ಹಿರೇಮಠ, ಬಶೀರ್ ಸಾಬ್ ಜಕಾತಿ. ಮಲಕಣ್ಣ ಮಂದೆವಾಲ್, ಮುತ್ತಣ್ಣ ಬಳ್ಳುಂಡಗಿ, ಮಲ್ಲಿನಾಥ ಗಾಣಿಗೇರ್, ಸಂಗಣ್ಣ ಮಂದೇವಾಲ, ಶಂಕರಪ್ಪ ಹಟ್ಟಿ, ಸುಬ್ಬಣ್ಣ ನಾವಿ, ಕಾಶಿನಾಥ್ ನಡುವಿನಮನಿ ,ಸೋಮರಾಯ ಮರಗುಂಡ ಸೇರಿದಂತೆ ಊರಿನ ಪ್ರಮುಖರು ಭಾಗವಹಿಸಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

20 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

22 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

26 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

30 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

32 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

54 mins ago