ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಬರುವಾಗಲೇ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ

0
218

ಸುರಪುರ: ತಾಲೂಕಿನ ಕನ್ನಳ್ಳಿ ಗ್ರಾಮದ ರೈತನೋರ್ವ ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಂಥಣಿ ಬ್ರಿಜ್‌ನಲ್ಲಿ ನಡೆದಿದೆ.

ಮಲ್ಲಣ್ಣ ತಂದೆ ಸಂಗಣ್ಣ ಸಜ್ಜನ್ (50 ವರ್ಷ) ರೈತನು ಶಹಾಪುರದ ಎಚ್ಡಿಎಫ್ಸಿ ಬ್ಯಾಂಕಿನಲ್ಲಿ 12 ಲಕ್ಷ ಸಾಲ ಪಡೆದಿದ್ದು ಖಾಸಗಿ ವ್ಯಕ್ತಿಗಳ ಬಳಿ ಕೂಡ 2 ಲಕ್ಷಕ್ಕಿಂತಲೂ ಅಧಿಕ ಸಾಲ ಮಾಡಿದ್ದಾರೆ. ಅಲ್ಲದೇ ವ್ಯವಸಾಯ ಸೇವಾ ಸಹಕಾರ ಸಂಘ ಬೈಚಬಾಳ ಶಾಖೆಯಲ್ಲಿ ಮೂವತ್ತು ಸಾವಿರ ಸಾಲ ಪಡೆದಿದ್ದು ಸತತ ಬರಗಾಲದಿಂದ ಬೆಳೆ ಬಾರದೆ ಸಾಲ ತೀರಿಸಲಾಗದೆ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Contact Your\'s Advertisement; 9902492681

ಮಂಗಳವಾರ ಸಂಜೆ ಮನೆಯಿಂದ ಹೊರಹೋಗಿ ಮರಳಿ ಮನೆಗೆ ಬಾರದಿದ್ದಾಗ ಮನೆಯವರು ಆತಂಕಗೊಂಡು ವೀರಗೋಟ ಅಥವಾ ತಿಂಥಣಿಗೆ ದೇವಸ್ಥಾನಕ್ಕೆ ಹೋಗಿರಬಹುದೆಂದು ಅಂದಾಜಿಸಿದ್ದಾರೆ. ಅದರಂತೆ ಇಂದು ಹುಡುಕಾಟ ನಡೆಸಿದಾಗ ವೀರಗೋಟ ಬಳಿಯಲ್ಲಿನ ಜನರಲ್ಲಿ ವಿಚಾರಿಸುತ್ತಿರುವಾಗ ತಿಂಥಣಿ ಬ್ರಿಜಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರು ಬಗ್ಗೆ ಮಾಹಿತಿ ನೀಡಲಾಗಿ, ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ರೈತನಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗುವಿದ್ದು ಮನೆ ಯಜಮಾನನ ಸಾವಿನಿಂದ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದ ಜನತೆಯೂ ಶೋಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here