ಬಿಸಿ ಬಿಸಿ ಸುದ್ದಿ

ಅಮೆಜಾನ್‌ನಿಂದ ಕನ್ನಡದಲ್ಲಿ ಮಾರಾಟಗಾರರ ಲೆಕ್ಕಪತ್ರ ನಿರ್ವಹಣೆ

ಕಲಬುರಗಿ: ಲಕ್ಷಾಂತರ ಭಾರತೀಯ ಉದ್ಯಮಿಗಳು, ಕರ್ನಾಟಕದ ಎಂಎಸ್‌ಎಂಇಗಳು, ಸ್ಥಳೀಯ ಅಂಗಡಿಗಳು ಮತ್ತು ರೀಟೇಲರ್‌ಗಳ ಭಾಷಾ ಅಡೆತಡೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಇಕಾಮರ್ಸ್‌ನಿಂದ ಅನುಕೂಲ ಪಡೆಯಲು ಅಮೆಜಾನ್ ಇಂದು ಅಮೆಜಾನ್.ಇನ್ ಮಾರುಕಟ್ಟೆಯಲ್ಲಿ ಮಾರಾಟಗಾರರು ತಮ್ಮ ವಹಿವಾಟನ್ನು ಕನ್ನಡದಲ್ಲಿ ನೋಂದಾಯಿಸಿ ನಿರ್ವಹಿಸಲು ಅವಕಾಶ ಕಲ್ಪಿಸಿದೆ.

ಇದರಲ್ಲಿ ಮೊಟ್ಟಮೊದಲ ಬಾರಿಗೆ ಅಮೆಜಾನ್ ಸೆಲ್ಲರ್ ನೋಂದಣಿ, ಆರ್ಡರ್‌ಗಳ ನಿರ್ವಹಣೆ, ಇನ್ವೆಂಟರಿ ಮ್ಯಾನೇಜ್‌ಮೆಂಟ್ ಮತ್ತು ಪರ್ಫಾರ್ಮೆನ್ಸ್ ಮೆಟ್ರಿಕ್ಸ್ ಲಭ್ಯತೆ ಎಲ್ಲವನ್ನೂ ಅವರ ಆದ್ಯತೆಯ ಭಾಷೆಯಲ್ಲಿ ನಡೆಸಬಹುದಾಗಿದೆ. ಈ ಅನುಭವವನ್ನು ಅಮೆಜಾನ್ ಸೆಲ್ಲರ್ ವೆಬ್‌ಸೈಟ್ ಅಲ್ಲದೆ ಮೊಬೈಲ್ ಆಪ್ ಮೂಲಕ ಲಭ್ಯವಾಗುವಂತೆ ಮಾಡುವುದಾಗಿದೆ. ಅಮೆಜಾನ್ ಸೆಲ್ಲರ್ ಸಪೋರ್ಟ್ ಸರ್ವೀಸಸ್ ಮತ್ತು ಸೆಲ್ಲರ್ ಯೂನಿವರ್ಸಿಟಿ ವಿಡಿಯೋಗಳು ಮತ್ತು ಟ್ಯುಟೋರಿಯಲ್‌ಗಳನ್ನು ಕನ್ನಡದಲ್ಲಿ ಪೂರೈಸಲಿದೆ.

ಕನ್ನಡದಲ್ಲಿ ಮಾರಾಟಗಾರರ ನೋಂದಣಿಗಳ ಪ್ರಾರಂಭ ಮತ್ತು ಲೆಕ್ಕ ನಿರ್ವಹಣೆ ಸೇವೆಗಳು ೩೫,೦೦೦ಕ್ಕೂ ಹೆಚ್ಚು ಅಮೆಜಾನ್ ಮಾರಾಟಗಾರರು ಮತ್ತು ಟೈಯರ್-೧ ಮತ್ತು ಕೆಳಗಿನ ಮಾರುಕಟ್ಟೆಗಳಾದ ಕರ್ನಾಟಕದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ ಮತ್ತು ಮೈಸೂರು ಮುಂತಾದ ಕಡೆ ಅನುಕೂಲವಾಗಲಿದೆ. ಮಾರಾಟಗಾರರಿಗೆ ಕನ್ನಡದಲ್ಲಿ ಸೇವೆಗಳನ್ನು ಪ್ರಾರಂಭಿಸಲು ಅಮೆಜಾನ್.ಇನ್ ನಿಖರ ಮತ್ತು ಸಮಗ್ರ ಅನುಭವ ಅಭಿವೃದ್ಧಿಪಡಿಸಲು ಪರಿಣಿತ ಭಾಷಾ ತಜ್ಞರೊಂದಿಗೆ ಕೆಲಸ ಮಾಡಿದೆ.

ಈ ತಂಡವು ಪರಿಪೂರ್ಣವಾಗಿ ಅನುವಾದ ಮಾಡಿದ ಪದಗಳಿಗಿಂತ ಸಾಮಾನ್ಯವಾಗಿ ಬಳಸುವ ಪದಗಳಿಗೆ ಹೆಚ್ಚು ಒತ್ತು ನೀಡಿದ್ದು ಅನುಭವವನ್ನು ಮಾರಾಟಗಾರರಿಗೆ ವಿಶ್ವಾಸಾರ್ಹ, ಸುಲಭವಾಗಿ ಅರ್ಥೈಸಿಕೊಳ್ಳಬಲ್ಲ ಮತ್ತು ತಡೆರಹಿತವಾಗಿಸಿದೆ. ಕನ್ನಡದಲ್ಲಿ ಪ್ರಾರಂಭವು ಇತ್ತೀಚೆಗೆ ಪ್ರಾರಂಭವಾದ ಹಿಂದಿ ಮತ್ತು ತಮಿಳು ಮಾರಾಟಗಾರರ ನೋಂದಣಿಗಳು ಮತ್ತು ಲೆಕ್ಕಪತ್ರ ನಿರ್ವಹಣೆ ಸೇವೆಗಳಿಗೆ ಪೂರಕವಾಗಿದ್ದು ಅವುಗಳಲ್ಲಿ ಅವರ ಭಾಷೆಯಲ್ಲಿ ೫೦,೦೦೦ಕ್ಕೂ ಹೆಚ್ಚು ಹೊಸ ಮಾರಾಟಗಾರರು ಅವರ ಅನುಕೂಲದ ಭಾಷೆಯಲ್ಲಿ ಸೈನಪ್ ಮಾಡಿದ್ದಾರೆ.

“ಸರ್ಕಾರಕ್ಕೆ ಸುಲಭವಾಗಿ ವಹಿವಾಟು ನಡೆಸುವುದು ಪ್ರಮುಖ ಆದ್ಯತೆಯಾಗಿದೆ ಮತ್ತು ನಮ್ಮ ಗಮನ ಉದ್ಯಮಗಳಿಗೆ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಲು ತಂತ್ರಜ್ಞಾನ ಅಳವಡಿಸಿಕೊಳ್ಳಲು ನೆರವಾಗುವುದಾಗಿದೆ. ತಂತ್ರಜ್ಞಾನ ಮತ್ತು ಇ-ಕಾಮರ್ಸ್ ಮುಂದಿನ ದಿನಗಳಲ್ಲಿ ಲಕ್ಷಾಂತರ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಗತಿಯನ್ನು ಉತ್ತೇಜಿಸಲು ಪ್ರಮುಖ ಪಾತ್ರ ವಹಿಸಲಿದೆ.

ಮಾರಾಟಗಾರರಿಗೆ ಕನ್ನಡದಲ್ಲಿ ಸ್ವಯಂ-ನೋಂದಣಿಯಲ್ಲಿ ಪರಿಚಯಿಸುವ ಮೂಲಕ ಅಮೆಜಾನ್ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇ-ಕಾಮರ್ಸ್ ಅನ್ನು ಅವರ ಉದ್ಯಮ ವೃದ್ಧಿಸಲು ಬಳಸಲು ಸಾಧ್ಯವಾಗುವಂತೆ ಮತ್ತೊಂದು ಹೆಜ್ಜೆ ಇರಿಸಿದೆ. ಅವರ ವಹಿವಾಟುಗಳನ್ನು ಕನ್ನಡದಲ್ಲಿ ನಡೆಸಲು ಸನ್ನದ್ಧರಾಗಿಸುವುದು ಕರ್ನಾಟಕದಲ್ಲಿ ಎಸ್‌ಎಂಬಿಗಳು ಮತ್ತು ಎಂಎಸ್‌ಎಂಇಗಳಿಗೆ ಮಹತ್ತರ ಅನುಕೂಲ ಕಲ್ಪಿಸಲಿದ್ದು ಭಾಷೆಯ ಅಡೆತಡೆಯನ್ನು ನಿವಾರಿಸಿ ಅವರಿಗೆ ಯಶಸ್ವಿಯಾಗಲು ನೆರವಾಗಲಿದೆ” ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಹೇಳಿದರು.

ಅಮೆಜಾನ್ ಇಂಡಿಯಾ ಕಳೆದ ಕೆಲ ವರ್ಷಗಳಿಂದ ಭಾಷೆ, ಧ್ವನಿ ಮತ್ತು ವಿಡಿಯೋ ಸನ್ನದ್ಧ ಉಪಕ್ರಮಗಳ ಮೂಲಕ ಗ್ರಾಹಕರು ಹಾಗೂ ಉದ್ಯಮಗಳಿಗೆ ಇ-ಕಾಮರ್ಸ್ ಅವಕಾಶಗಳನ್ನು ವಿಸ್ತರಿಸಲು ಆವಿಷ್ಕಾರಗಳನ್ನು ನಡೆಸುತ್ತಿದೆ. ಮಾಚ್ ೨೦೨೦ರಲ್ಲಿ ಅಲೆಕ್ಸಾ ಅಮೆಜಾನ್ ಶಾಪಿಂಗ್ ಆಪ್‌ನಲ್ಲಿ ಆಂಡ್ರಾಯಿಡ್ ಡಿವೈಸ್‌ಗಳಿಗೆ ಪರಿಚಯಿಸಲಾಗಿದ್ದು ಇದು ಬಳಕೆದಾರರಿಗೆ ಧ್ವನಿ ಸೂಚನೆಗಳನ್ನು ಬಳಸಿ ಶಾಪ್ ಮಾಡಲು ನೆರವಾಗುತ್ತದೆ.

ಅಮೆಜಾನ್ ಅಲೆಕ್ಸಾ ಕ್ಲೌಡ್ ಆಧರಿತ ಧ್ವನಿ ಸೇವೆಯಾಗಿದ್ದು ಇದು ಇಕೊ ಶ್ರೇಣಿಯ ಸ್ಮಾರ್ಟ್ ಸ್ಪೀಕರ್‌ಗಳನ್ನು ಸನ್ನದ್ಧಗೊಳಿಸುತ್ತದೆ, ಅಲ್ಲದೆ ಹಿಂದಿ. ಮರಾಠಿ, ಗುಜರಾತಿ, ಕನ್ನಡ, ಬಂಗಾಳಿ, ತಮಿಳು, ತೆಲುಗು ಇತ್ಯಾದಿ ಭಾಷೆಗಳಲ್ಲಿ ಅಂಕಿತನಾಮಗಳನ್ನು ಅರ್ಥ ಮಾಡಿಕೊಳ್ಳುತ್ತದೆ.

ಹಿಂದಿಯಲ್ಲಿ ಅಲೆಕ್ಸಾ ಬಿಡುಗಡೆ ಮಾಡಿರುವುದರಿಂದ ಗ್ರಾಹಕರು ಅಲೆಕ್ಸಾ ಮೂಲಕ ಇಂಗ್ಲಿಷ್ ಅಲ್ಲದೆ ಹಿಂದಿ ಅಥವಾ ಹಿಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಬಹುದು ಮತ್ತು ಸಂವಹನ ನಡೆಸಬಹುದು. ಸೆಪ್ಟೆಂಬರ್ ೨೦೨೦ರಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಂದರ್ಭದಲ್ಲಿ ಅಮೆಜಾನ್.ಇನ್ ನಾಲ್ಕು ಹೊಸ ಭಾರತೀಯ ಭಾಷೆಗಳು- ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗುಗಳಲ್ಲಿ ಶಾಪಿಂಗ್ ಅನುಭವಕ್ಕೆ ಚಾಲನೆ ನೀಡಿತು.

sajidpress

Recent Posts

ಸಚಿವ ಪ್ರೀಯಾಂಕ್ ಖರ್ಗೆ ಹುಟ್ಟುಹಬ್ಬ ನಿಮಿತ್ತ ಬಾಲಕಿಯರ ಕ್ರಿಕೇಟ್

ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…

14 mins ago

ಯತ್ನಾಳ ಹೋರಾಟಕ್ಕೆ ಬೆಂಬಲವಿಲ್ಲ : ಆನಂದ ಕಣಸೂರ

ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…

16 mins ago

ವಕ್ಫ್ ಮಸೂದೆ ತಿದ್ದುಪಡಿಗೆ ಮುಸ್ಲೀಮ ವೈಯಕ್ತಿಕ ಕಾನೂನು ಮಂಡಳಿ ವಿರೋಧ

ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…

28 mins ago

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

23 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago