ಕಲಬುರಗಿ: ಧಾರವಾಡ ಮತಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅವರು ಮುಸ್ಲಿಮರಿಗೆ ನೀಡುತ್ತಿರುವ ಶೇಕಡ ೪ರ ಮೀಸಲಾತಿ ರದ್ದುಪಡಿಸಿ ಅದನ್ನು ಪಂಚಮಸಾಲಿ ಲಿಂಗಾಯಿತರಿಗೆ ನೀಡಬೇಕು ಎಂಬ ಹೇಳಿಕೆ ವಿರುದ್ಧ ನಯ ಸವೆರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಮನವಿ ನೀಡಿದೆ.
ಶಾಸಕ ಬಿಲ್ಲದ್ ಪಂಚಮಸಾಲಿ ಲಿಂಗಾಯತರು ಹಾಗೂ ಮುಸ್ಲಿಮರು ನಡುವೆ ಜಾತಿಸಂಘರ್ಷ ಸೃಷ್ಟಿಸುವ ಹುನ್ನಾರ ಅಡಗಿದ್ದು, ರಾಜಕೀಯ ಗಿಮಿಕ್ ಇದಾಗಿದೆ. ಸಾಮಾಜಿಕ ನ್ಯಾಯದ ಆಶಯದ ಹೋರಾಟದಲ್ಲಿ ಎಲ್ಲಿಯೂ ಪ್ರತಿಫಲಿಸಲಿಲ್ಲ ದುರ್ಬಲ ಸಮುದಾಯಗಳ ಜೊತೆ ಸೇರಿ ಅಲ್ಲಿನ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಲು ಮೀಸಲಾತಿಗೆ ಪೈಪೋಟಿ ನಡೆಸುತ್ತಿರುವ ಕ್ರಮ ಖಂಡನೀಯವಾಗಿದೆ ಎಂದರು.
ಅತ್ಯಂತ ಹಿಂದುಳಿದ ಮುಸ್ಲಿಂ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮೀಸಲಾತಿ ನೀಡಿ ಸಬಲೀಕರಣಗೊಳಿಸುವ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಮುಸ್ಲಿಮರ ಶೇಕಡ 4ರಷ್ಟು ಮೀಸಲಾತಿ ತೆಗೆದು ಲಿಂಗಾಯತ ಪಂಚಮಸಾಲಿ ಅವರಿಗೆ ಕೊಡಿ ಎಂದು ಹೇಳಿರುವುದು ಖಂಡನೀಯವಾಗಿದೆ. ಪಂಚಮಸಾಲಿ ಅವರಿಗೂ ಕೂಡ ಮೀಸಲಾತಿ ನೀಡಿ ಎಂದು ಹೋರಾಟ ಮಾಡಿ ಸರಕಾರ ಸ್ಪಂದಿಸುತ್ತದೆ. ಪಂಚಮಸಾಲಿ ಸಮುದಾಯದವರಿಗೂ ಮೀಸಲಾತಿ ನೀಡಲಿ ಎಂದು ಅದಕ್ಕೆ ಬೆಂಬಲವಿದೆ ಎಂದು ತಿಳಿಸಿದರು.
ಮುಸ್ಲಿಂ ಸಮುದಾಯ ಕೇಂದ್ರ ಸರಕಾರ ನೇಮಿಸಿದ( ನ್ಯಾಯಮೂರ್ತಿ ರಾಜೇಂದ್ರ ಪಾಟೀಲ್) ಕಮಿಟಿ ವರದಿ ಪ್ರಕಾರ ಭಾರತ ದೇಶದಲ್ಲಿ ಮುಸ್ಲಿಮರು, ದಲಿತರು, ಮತ್ತು ಹಿಂದುಳಿದ ಸಮುದಾಯ, ಗಳಿಗಿಂತಲೂ ಹಲವಾರು ಕ್ಷೇತ್ರಗಳಲ್ಲಿ ಇರುವವರನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಮುಸ್ಲಿಮರಿಗೆ ಹಿಂದುಳಿದ ಆಧಾರದ ಮೇಲೆ ಮೀಸಲಾತಿ ದೊರೆತಿದೆ. ಯಾವುದೇ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ವಿರೋಧವಿಲ್ಲ ಎಂದು ನಯ ಸವೇರ ಸಂಘಟನೆ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕೆಬಿಎನ್ ಟ್ರೋಫಿ ಪಂದ್ಯ: ಕಲಬುರಗಿಯಲ್ಲಿ ಕ್ರಿಕೆಟ್ ದಿಗ್ಗಜ ಮೊಹ್ಮದ್ ಅಜರೋದ್ದಿನ್, ಕೈಫ್
ಈ ವೇಳೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರ, ಯುನುಸ್ ಅಲ್ಲಿಸಾಬ್, ಸೈಯದ್ ಏಜಾಜ್ ಅಲಿ ಇನಾಮ್ದಾರ್ ,ಸಾಜಿದ್ ಅಲಿ ರಂಜೋಳವಿ, ಹೈದರ್ ಅಲಿ ಇನಾಮ್ದಾರ್ ,ಮೊಹಮ್ಮದ್ ಖಾಲಿಕ್, ಸಾಯಿರಾಬಾನು ಅಬ್ದುಲ್ ವಾಹಿದ್, ಕಾಜ ಪಾಟೀಲ್ ಸರಡಗಿ ,ಬಾಬಾ ಫಕ್ರುದ್ದಿನ್ ಅನ್ಸಾರಿ, ರಾಬಿಯಾ ಶಿಕಾರಿ, ಅಹಮದಿ ಬೇಗಮ್. ಸಾಧಿಕ್ ಪಟೇಲ್, ಮಹಿಬೂಬ್ ಖಾನ್ , ವಿಜಯ ಹಾಬನೂರು ಸೇರಿದಂತೆ ಹಲವರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…